ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್​ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ

ಚಾಮರಾಜನಗರದಲ್ಲಿ ಆಪರೇಷನ್ ಟಿ2 ಆಲ್ಫಾ ಐದನೇ ಹಂತ ಯಶಸ್ವಿಯಾಗಿದೆ. 6 ಹುಲಿಗಳ ಪೈಕಿ 5 ಹುಲಿಗಳನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ, ಇದರಲ್ಲಿ 10 ತಿಂಗಳ ಹೆಣ್ಣು ಹುಲಿ ಮರಿಯೂ ಸೇರಿದೆ. ಥರ್ಮಲ್ ಡ್ರೋನ್ ಕ್ಯಾಮರಾ ಬಳಸಿ ಕಾರ್ಯಾಚರಣೆ ನಡೆಸಲಾಯಿತು. ಸದ್ಯ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್​ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ
ಸೆರೆಯಾದ ಹುಲಿ ಮರಿ
Edited By:

Updated on: Jan 27, 2026 | 7:31 PM

ಚಾಮರಾಜನಗರ, ಜನವರಿ 27: ಆಪರೇಷನ್ ಟಿ2 ಆಲ್ಫಾ ಐದನೇ ಹಂತ ಯಶಸ್ವಿಯಾಗಿದೆ. 6 ಹುಲಿಗಳ ಪೈಕಿ ಈಗಾಗಲೇ 5 ಹುಲಿ (Tigers) ಸೆರೆಯಾಗಿದ್ದು, ಇನ್ನು ಕೇವಲ 1 ಹುಲಿ ಮಾತ್ರ ಬಾಕಿ ಇದೆ. ಥರ್ಮಲ್ ಡ್ರೋನ್ ಕ್ಯಾಮರಾ ಮೂಲಕ ಕೂಂಬಿಂಗ್ ನಡೆಸಿದ್ದ ಸಿಬ್ಬಂದಿ 10 ತಿಂಗಳ ಹೆಣ್ಣು ಹುಲಿ ಮರಿ ಸೆರೆ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿ ಆಗಿದ್ದಾರೆ.

ಮತ್ತೊಂದು ಹೆಣ್ಣು ಹುಲಿ ಮರಿ ಸೆರೆ

ಕಳೆದೊಂದು ತಿಂಗಳಿನಿಂದ ಬಿಟ್ಟು ಬಿಡದೆ ಮೂರ್ನಾಲ್ಕು ಗ್ರಾಮಸ್ಥರ ನಿದ್ದೆಗೆಡಿಸಿದ್ದ 5 ಹುಲಿಗಳ ಪೈಕಿ ಇಂದು ಮತ್ತೊಂದು ಹೆಣ್ಣು ಹುಲಿ ಮರಿ ಸೆರೆಯಾಗಿದೆ. ಆದರೆ ಈಗ ಸೆರೆ ಸಿಕ್ಕಿದ್ದು ಕೇವಲ 3 ಮರಿ ಮಾತ್ರ. ಇನ್ನು ಒಂದು ಮರಿ ಹುಲಿಗಳು ಸೆರೆಗಾಗಿ ಆಪರೇಷನ್ ಟಿ2 ಆಲ್ಫಾ ಚಾಲ್ತಿಯಲ್ಲಿದೆ. ನಾಳೆಯೂ ಇನ್ನುಳಿದ ಹುಲಿಗಾಗಿ ಶೋಧಕಾರ್ಯ ಮುಂದುವರೆಯಲಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ

ಈಗಾಗಲೇ ಸೆರೆ ಸಿಕ್ಕ ತಾಯಿ ಹುಲಿಗೆ ಹಾಗೂ 3 ಮರಿ ಹುಲಿಗಳಿಗೂ ಪಶು ವೈದ್ಯರಿಂದ ಅರವಳಿಕೆ ಮದ್ದು ನೀಡಿ ಅದರ ಆರೋಗ್ಯದ ಸ್ಥಿತಿ ಗತಿಯನ್ನ ಪರಿಶೀಲನೆ ಮಾಡಲಾಗಿದೆ. ಮೈಸೂರು ಕೇಜ್​ನಿಂದ ನಾರ್ಮಲ್ ಕೇಜ್​ಗೆ ಹುಲಿಯನ್ನ ಸ್ಥಳಾಂತರಿಸಲಾಗಿದೆ. ಇನ್ನು ಸೆರೆ ಸಿಕ್ಕ ಹೆಣ್ಣು ಹುಲಿ ಮರಿಯ ಆರೋಗ್ಯ ತಪಾಸಣೆ ಮಾಡಿರುವ ಪಶು ವೈದ್ಯರು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಅದೇ ಬೋನಿನಲ್ಲಿ ಹುಲಿಯನ್ನ ಇರಿಸಿ ಉಳಿದ ಒಂದು ಮರಿ ಹುಲಿಗಾಗಿ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ. ಈಗಾಗಲೇ ಥರ್ಮಲ್ ಡ್ರೋನ್ ಕ್ಯಾಮರಾ ತರೆಸಿಕೊಂಡಿರುವ ಅರಣ್ಯ ಸಿಬ್ಬಂದಿ ರಾತ್ರಿಯಿಡಿ 1 ಮರಿ ಹುಲಿಗಳಿಗಾಗಿ ಆಪರೇಷನ್ ಟಿ2 ಆಲ್ಫಾ ನಡೆಸಲಿದ್ದಾರೆ.

ಇದನ್ನೂ ಓದಿ: ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ, ಹೆಬ್ಬುಲಿ ಕಂಡು ಭೀತಿಯಲ್ಲಿ ಗ್ರಾಮಸ್ಥರು

ಅದೇನೆ ಹೇಳಿ ಸದ್ಯ ತಾಯಿ ಹುಲಿ ಸೇರಿ ಒಟ್ಟು 5 ಹುಲಿ ಕ್ಯಾಪ್ಚರ್ ಆಗಿದ್ದು ನಂಜೆದೇವನಪುರ ವೀರನಪುರ ಹಾಗೂ ಉಡೀಗಾಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು ಇನ್ನು 1 ಹುಲಿ ಸೆರೆಗಾಗಿ ಶತಾಯಗತಾಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.