AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಜ್ಜನ ಬಾವಿಗೆ ಸೇರುತ್ತಿದೆ ಕಲುಷಿತ ನೀರು; ಮಾದಪ್ಪನಿಗೆ ಅಭಿಷೇಕ ನಡೆಸಲಾಗದೆ ಅರ್ಚಕರ ಪರದಾಟ!

ಕೋಟ್ಯಾಂತರ ಜನರ ಆರಾದ್ಯ ದೈವ ಮಾದಪ್ಪನಿಗೆ ಅಭಿಷೇಕ ನಡೆಸಲು ಅರ್ಚಕರು ಪರದಾಡುವಂತಾಗಿದೆ. ಮಳೆ ಬಂದ ವೇಳೆಯಲ್ಲಿ ಮಜ್ಜನ ಬಾವಿಗೆ ಜೀವ ಕೈಯಲ್ಲಿ ಹಿಡಿದು ಅರ್ಚಕರು ತೆರಳುವಂತಾಗಿದೆ. ತಾವು ಅನುಭವಿಸುವ ಸಮಸ್ಯೆ ಕುರಿತು ಇಂದು ಅರ್ಚಕರು ಬಾಯಿ ಬಿಡುವಂತಾಗಿದೆ. ಅಸಲಿಗೆ ಮಾದಪ್ಪನ ಸೇವೆ ಸಲ್ಲಿಸುವ ಅರ್ಚಕರಿಗೆ ಎದುರಾಗಿರುವ ಸಮಸ್ಯೆ ಆದ್ರು ಏನು ಅಂತೀರಾ? ಇಲ್ಲಿದೆ.

ಮಜ್ಜನ ಬಾವಿಗೆ ಸೇರುತ್ತಿದೆ ಕಲುಷಿತ ನೀರು; ಮಾದಪ್ಪನಿಗೆ ಅಭಿಷೇಕ ನಡೆಸಲಾಗದೆ ಅರ್ಚಕರ ಪರದಾಟ!
ಮಲೆ ಮಹಾದೇಶ್ವರ ಬೆಟ್ಟ
ಸೂರಜ್ ಪ್ರಸಾದ್ ಎಸ್.ಎನ್
| Edited By: ಕಿರಣ್ ಹನುಮಂತ್​ ಮಾದಾರ್|

Updated on: Dec 10, 2023 | 7:54 PM

Share

ಚಾಮರಾಜನಗರ, ಡಿ.10: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ(Male Mahadeshwara Betta)ದಲ್ಲಿ ದಿನ ನಿತ್ಯ ಮಜ್ಜನ ಬಾವಿಯಿಂದ ನೀರನ್ನು ತೆಗೆದುಕೊಂಡು ಹೋಗಿ ಮಾದಪ್ಪನಿಗೆ ಅಭಿಷೇಕ ಮಾಡಲಾಗುತ್ತದೆ. ಆದ್ರೆ, ಮಳೆ ಬಂದಂತ ಸಂದರ್ಭದಲ್ಲಿ ಈ ಮಜ್ಜನ ಬಾವಿಯ ಸುತ್ತಾಮುತ್ತಾ ಆಳೆತ್ತರಕ್ಕೆ ನೀರು ತುಂಬಿಕೊಳ್ಳುತ್ತದೆ. ಈ ವೇಳೆ ಮಜ್ಜನ ಬಾವಿಗೆ, ಕೊಳಚೆ ನೀರು, ಕಸಗಳು ಬಂದು ಮಿಶ್ರಣಗೊಳ್ಳುತ್ತದೆ. ಪ್ರತಿ ನಿತ್ಯ ಮುಂಜಾನೆ ಮೂರು ಗಂಟೆಗೆ ಮುಖ್ಯ ಅರ್ಚಕರು, ಈ ಮಜ್ಜನ ಬಾವಿಯಿಂದ ನೀರನ್ನು ತಂದು ಅಭಿಷೇಕವನ್ನು ಮಾಡುತ್ತಾರೆ. ಆದ್ರೆ, ಮಳೆ ಬಂದಾಗ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೋಗಿ ಮಜ್ಜನ ಬಾವಿಯಿಂದ ನೀರು ತರಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.

ಈ ರೀತಿ ಮಳೆ ಬಂದಾಗಲೆಲ್ಲ ಮಜ್ಜನ ಬಾವಿಯ ಸುತ್ತ ನೀರು ತುಂಬಿಕೊಳ್ಳುತ್ತಿದೆ. ಇದು ನಿನ್ನೆ ಮೊನ್ನೆಯಿಂದ ಆಗುತ್ತಿರುವುದಲ್ಲ. ಕಳೆದ 10 ವರ್ಷಗಳಿಂದಲೂ ಮಳೆ ಬಂದಾಗ ಈ ರೀತಿ ಆಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಅರ್ಚಕರು ಮನವಿ ಮಾಡುತ್ತಿದ್ದಾರೆ. ಪ್ರತಿ ದಿನ ಮಾದಪ್ಪನ ಸನ್ನಿಧಾನಕ್ಕೆ ಸಾವಿರಾರು ಭಕ್ತರು ಬರ್ತಾರೆ, ಪ್ರಾಧಿಕಾರಕ್ಕೆ ಕೋಟ್ಯಾಂತರ ರೂಪಾಯಿ ಹರಿದು ಬರುತ್ತೆ. ಇಷ್ಟೆಲ್ಲ ಇದ್ದರೂ ಈ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಪ್ರಾಧಿಕಾರ ಯಾಕೆ ಮುಂದಾಗಿಲ್ಲ ಎಂದು ಮುಖ್ಯ ಅರ್ಚಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ:ಮಲೆ ಮಹದೇಶ್ವರ ಲಾಡು ತಯಾರಿಕಾ ಕೇಂದ್ರದಲ್ಲಿ ಬೆಂಕಿ ಅಪಘಡ; 36 ಸಾವಿರ ಲಾಡು ಪ್ರಸಾದ ಬೆಂಕಿಗಾಹುತಿ

ಅದೇನೆ ಹೇಳಿ ಕೋಟ್ಯಾಂತರ ಜನರ ಆರಾಧ್ಯ ದೈವವಾಗಿರುವ ಮಾದಪ್ಪನಿಗೆ ಇಂತಹ ಸಂಕಷ್ಟ ಎದುರಾದ್ರೆ ಹೇಗೆ ಎಂಬುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ. ಆದಷ್ಟು ಬೇಗ ಮಜ್ಜನ ಬಾವಿಯ ಸುತ್ತ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಒದಗಿಸುವಂತೆ ಅರ್ಚಕರು ಹಾಗೂ ಭಕ್ತರು ಮನವಿ ಮಾಡಿ ಕೊಳ್ಳುತ್ತಿದ್ದಾರೆ. ಈಗಲಾದರೂ ಸರ್ಕಾರ ಇತ್ತ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Suraj Prasad SN
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More