ಚಾಮರಾಜನಗರ: ಸಿಡಿಮದ್ದು ಸ್ಫೋಟಗೊಂಡು ಹಸುಗಳಿಗೆ ಗಂಭೀರ ಗಾಯ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆಯೋಂದು ನಡೆದಿದೆ. ಕಿಡಿಗೇಡಿಗಳು ಇಟ್ಟ ಸಿಡಿಮದ್ದು ಸ್ಫೋಟಗೊಂಡು ಎರಡು ಹಸುಗಳು ಗಾಯಗೊಂಡಿವೆ. ಸಿಡಿಮದ್ದು ಇಟ್ಟ ಕಿಡಿಗೇಡಿಗಳ ವಿರುದ್ಧ ಹಸುಗಳ ಒಡತಿ ಅಕ್ಕಮ್ಮ ಹಿಡಿಶಾಪ ಹಾಕಿದ್ದಾರೆ.

ಚಾಮರಾಜನಗರ: ಸಿಡಿಮದ್ದು ಸ್ಫೋಟಗೊಂಡು ಹಸುಗಳಿಗೆ ಗಂಭೀರ ಗಾಯ
ಗಾಯಗೊಂಡಿರುವ ಹಸು
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ವಿವೇಕ ಬಿರಾದಾರ

Updated on:Aug 20, 2024 | 3:04 PM

ಚಾಮರಾಜನಗರ, ಆಗಸ್ಟ್​ 20: ಸಿಡಿಮದ್ದು ಸ್ಫೋಟಗೊಂಡು ಎರಡು ಹಸುಗಳು (Cows) ಗಂಭೀರವಾಗಿ ಗಾಯಗೊಂಡಿರುವ ಘಟನೆ ಹನೂರು (Hanur) ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ನಡೆದಿದೆ. ಕೌದಳ್ಳಿ ಗ್ರಾಮದ ಅಕ್ಕಮ್ಮ ಎಂಬುವರಿಗೆ ಸೇರಿದ ಹಸುಗಳು ಮೇಯಲು ಹುಲ್ಲಿಗೆ ಬಾಯಿ ಹಾಕುತ್ತಿದ್ದಂತೆ ಕಿಡಿಗೇಡಿಗಳು ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡಿದೆ. ಇದರಿಂದ ಹಸುಗಳ ಮುಖ, ದೇಹದ ಭಾಗಕ್ಕೆ ಗಂಭೀರ ಗಾಯವಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ. ಸಿಡಿಮದ್ದು ಇಟ್ಟ ಕಿಡಿಗೇಡಿಗಳ ವಿರುದ್ಧ ಹಸುಗಳ ಒಡತಿ ಅಕ್ಕಮ್ಮ ಹಿಡಿಶಾಪ ಹಾಕಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಹಿಂದೆ ಕೇರಳದ ಮಲ್ಲಪ್ಪುರಂ ಗ್ರಾಮದಲ್ಲಿ ಇದೇ ರೀತಿಯಾದ ಘಟನೆ ನಡೆದಿತ್ತು. ಹೆಣ್ಣು ಆನೆಯೊಂದು ನದಿ ಪಾತ್ರದಲ್ಲಿ ಆಹಾರ ಅರಸಿ ಮಲ್ಲಪ್ಪುರಂ ಗ್ರಾಮಕ್ಕೆ ಬಂದಿತ್ತು. ಈ ವೇಳ ಸ್ಥಳೀಯರು ತಿನ್ನಲು ಆನೆಗೆ ಸಿಡಿಮದ್ದುಗಳನ್ನು ಇರಿಸಿದ್ದ ಅನಾನಸ್​ ಹಣ್ಣನ್ನು ನೀಡಿದ್ದರು. ಇದನ್ನು ತಿಳಿಯ ಮೂಕ ಜೀವಿ ಆನೆ ಅನಾನಸ್​ ಹಣ್ಣನ್ನು ಬಾಯಿಗೆ ಹಾಕಿಕೊಂಡಿತ್ತು. ತಕ್ಷಣವೇ ಸಿಡಿಮದ್ದು ಸ್ಫೋಟಗೊಂಡಿತ್ತು. ಇದರಿಂದ ಆನೆಯ ಬಾಯಿಯಿಂದ ರಕ್ತ ಹಿರಿಯಿತು. ಇದೇ ನೋವಿನಲ್ಲಿ ಆನೆ 2020ರ ಮೇ 27 ರಂದು ನಿಧನವಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:23 pm, Tue, 20 August 24