‘ಡಾ. ರಾಜ್‌ಕುಮಾರ್ ಸಂಬಂಧಿ ಮನೆ ಬಳಿ ಸ್ಫೋಟಗೊಂದಿದ್ದು ನಾಡಬಾಂಬ್ ಅಲ್ಲ’: ಪತ್ರಿಕಾ ಪ್ರಕಟಣೆ ಮೂಲಕ ಪೊಲೀಸರಿಂದ ಮಾಹಿತಿ
ಗಾಜನೂರಿನ ಡಾ. ರಾಜ್‌ಕುಮಾರ್ ಸಂಬಂಧಿ ಮನೆ ಬಳಿ ನಡೆದ ಸ್ಫೋಟ ನಾಡಬಾಂಬ್ ಅಲ್ಲ, ಪಟಾಕಿಎಂದು ತಮಿಳುನಾಡು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ, ಇದು ಕಚ್ಚಾ ಬಾಂಬ್ ದಾಳಿಯೇ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟಾಕಿ ಸ್ಫೋಟವಾದರೆ ಮನೆಯ ಬಾಗಿಲು ಒಡೆದು ಹೋಗಲು ಸಾಧ್ಯವಿದೆಯಾ? ಗಾಜುಗಳೆಲ್ಲ ಪುಡಿ ಪುಡಿಯಾಗಿದೆ. ಬಾಗಿಲು ಚೂರಾಗಿದೆ, ಸೋಫಾಗೆ ಬೆಂಕಿ ತಗುಲಿದೆ. ಇದೆಲ್ಲ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಚಾಮರಾಜನಗರ, ನವೆಂಬರ್ 10: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ. ರಾಜ್‌ಕುಮಾರ್ ಅವರ ಸಂಬಂಧಿ ಮನೆಯಲ್ಲಿ ಸ್ಫೋಟ ಪ್ರಕರಣ ಸಂಬಂಧ ಈರೋಡ್ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಫೋಟಗೊಂಡಿರುವುದು ನಾಡಬಾಂಬ್ ಅಥವಾ ಕಚ್ಚಾ ಬಾಂಬ್ ಅಲ್ಲ. ಪಟಾಕಿಯ ಜೋರು ಶಬ್ದಕ್ಕೆ ಮನೆಯ ಕಿಟಕಿ ಗಾಜುಗಳು ಒಡೆದಿವೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಘಟನೆ ಸಂಬಂಧ ಸ್ಥಳೀಯ ಐವರನ್ನು ವಶಕ್ಕೆ ಪಡೆದಿರುವ ತಾಳವಾಡಿ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸ್ಫೋಟ ನಡೆದ ಸಂದರ್ಭದಲ್ಲಿ ಇವರು ಹತ್ತಿರದಲ್ಲೇ ಇದ್ದರು ಎನ್ನಲಾಗಿದೆ.
‘ಪ್ರಕರಣವನ್ನ ಮುಚ್ಚಿ ಹಾಕುವ ಕೆಲಸ ಆಗಬಾರದು’
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರಯವ ಕುಟುಂಬಸ್ಥರು, ನಮ್ಮ ಮನೆ ಮೇಲೆ ನಡೆದಿರುವುದು ಕಚ್ಚಾ ಬಾಂಬ್ ದಾಳಿಯೇ. ಪ್ರಕರಣವನ್ನ ಮುಚ್ಚಿ ಹಾಕುವ ಕೆಲಸ ಆಗಬಾರದು. ನಾವು ಡಾ. ರಾಜಕುಮಾರ್ ಅವರ ಸಂಬಂಧಿಕರೇ ಆಗಿದ್ದು, ಸುಳ್ಳು ಅಪಪ್ರಚಾರ ಮಾಡಬೇಡಿ. ಪಟಾಕಿ ಸ್ಫೋಟವಾದರೆ ಮನೆಯ ಬಾಗಿಲು ಒಡೆದು ಹೋಗಲು ಸಾಧ್ಯವಿದೆಯಾ? ಗಾಜುಗಳೆಲ್ಲ ಪುಡಿ ಪುಡಿಯಾಗಿದೆ. ಬಾಗಿಲು ಚೂರಾಗಿದೆ, ಸೋಫಾಗೆ ಬೆಂಕಿ ತಗುಲಿದೆ. ಇದೆಲ್ಲ ಹೇಗೆ ಸಾಧ್ಯ? ಮನೆ ಮುಂದೆ ಸಿಡಿದಿರುವುದು ಪಟಾಕಿ ಅಲ್ಲ, ಸ್ಪೋಟಕ ಎಂದು ಟಿವಿ9ಗೆ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಡಾ. ರಾಜಕುಮಾರ್ ಸಂಬಂಧಿ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ?: ನಿಗೂಢ ಸ್ಫೋಟಕ್ಕೆ ಬೆಚ್ಚಿಬಿದ್ದ ಕುಟುಂಬ
ಡಾ. ರಾಜ್‌ಕುಮಾರ್ ಅವರ ಸಂಬಂಧಿ ಮನೆಯಲ್ಲಿ ರಾತ್ರಿ 10.22ರ ವೇಳೆಗೆ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮನೆಯ ಗಾಜು ಪುಡಿ ಪುಡಿಯಾಗಿದ್ದವು. ದೀಪಾವಳಿ ಹಿನ್ನೆಲೆ ಪಟಾಕಿಯಿಂದ ಈ ಸ್ಫೋಟ ಆಗಿರಬಹುದೆಂದು ಮೊದಲು ಅನುಮಾನವಿತ್ತಾದರೂ, ಸ್ಫೋಟದ ತೀವ್ರತೆ ಗಮನಿಸಿದಾಗ ಕಚ್ಚಾ ಬಾಂಬ್ನಿಂದ ಸ್ಫೋಟ ಆಗಿರುವ ಶಂಕೆ ವ್ಯಕ್ತವಾಗಿತ್ತ. ಹೀಗಾಗಿ ಸ್ಫೋಟಕದ ಮಾದರಿಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಈ ನಡುವೆ ಘಟನೆ ಬಗ್ಗೆ ಈರೋಡ್ ಜಿಲ್ಲಾ ಪೊಲೀಸರು ನೀಡಿರುವ ಪತ್ರಿಕಾ ಪ್ರಕಟಣೆ ಮಹತ್ವ ಪಡೆದುಕೊಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
