ಬಂಡೀಪುರ ಮಾರ್ಗವಾಗಿ ಸಂಚರಿಸುವಾಗ ಜಿಂಕೆಗೆ ತಿಂಡಿ ತಿನ್ನಿಸಿದ ಪತ್ರಕರ್ತನಿಗೆ ದಂಡ ವಿಧಿಸಿದ ಅರಣ್ಯಾಧಿಕಾರಿಗಳು!

ಸಾಮಾಜಿ ಜಾಲತಾಣದಲ್ಲಿ ದೃಶ್ಯವನ್ನು ಹರಿಬಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಬಂಡೀಪುರದ ಅರಣ್ಯಾಧಿಕಾರಿಗಳು ಕಾರನ್ನು ಹಿಂಬಾಲಿಸಿ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಬಂಡೀಪುರ ಮಾರ್ಗವಾಗಿ ಸಂಚರಿಸುವಾಗ ಜಿಂಕೆಗೆ ತಿಂಡಿ ತಿನ್ನಿಸಿದ ಪತ್ರಕರ್ತನಿಗೆ ದಂಡ ವಿಧಿಸಿದ ಅರಣ್ಯಾಧಿಕಾರಿಗಳು!
ಬಂಡೀಪುರ ಮಾರ್ಗವಾಗಿ ಸಂಚರಿಸುವಾಗ ಜಿಂಕೆಗೆ ತಿಂಡಿ ಕೊಟ್ಟ ಪತ್ರಕರ್ತನಿಗೆ ದಂಡ ವಿಧಿಸಿದ ಅರಣ್ಯಾಧಿಕಾರಿಗಳು!

ಚಾಮರಾಜನಗರ: ಬಂಡೀಪುರ ಮಾರ್ಗವಾಗಿ ಸಂಚರಿಸುವಾಗ ಪ್ರಯಾಣಿಕರ ಹಿತದೃಷ್ಟಿಯಿಂದ ವಾಹನಗಳನ್ನು ನಿಲ್ಲಿಸಬಾರದು ಮತ್ತು ಪ್ರಾಣಿಗಳಿಗೆ ಆಹಾರಗಳನ್ನು ಕೊಡಬಾರದು ಎಂಬ ನಿಯಮವಿದೆ. ಈ ನಿರ್ಬಂಧನೆಗಳನ್ನು ಉಲ್ಲಂಘಿಸಿ ದೆಹಲಿಯ ಪತ್ರಕರ್ತ ಜಿಂಕೆಗೆ ಆಹಾರ ನೀಡುತ್ತಿರುವ ಫೋಟೋ ವೈರಲ್ ಆಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪರ್ತಕರ್ತನನ್ನು ಹಿಂಬಾಲಿಸಿದ ಅರಣ್ಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಪತ್ರಕರ್ತ ಜಿಂಕೆಗೆ ಆಹಾರ ನೀಡುತ್ತಿರುವ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗರೋರ್ವರು ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಬಂಡೀಪುರದ ಅರಣ್ಯಾಧಿಕಾರಿಗಳು ಕಾರನ್ನು ಹಿಂಬಾಲಿಸಿ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಆಗ ಇವರು ದೆಹಲಿಯ ಪರ್ತಕರ್ತ ವಾಖ್ಹರ್ ಅಹಮ್ಮದ್ ಎಂಬ ಮಾಹಿತಿ ತಿಳಿದು ಬಂದಿದೆ.

ವರದಿಗಾರ ವಾಖ್ಹರ್ ಅಹಮ್ಮದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಜಿಂಕೆ ಕಂಡಿದೆ. ತಕ್ಷಣ ಕಾರನ್ನು ನಿಲ್ಲಿಸಿ ತಿಂಡಿ ತಿನ್ನಿಸಿದ್ದಾರೆ. ಘಟನೆ ಬುಧವಾರ ಬೆಳಿಗ್ಗೆಯ ಸಮಯದಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತಾಗಿ ಟ್ವೀಟ್ ಕೂಡಾ ಮಾಡಲಾಗಿದೆ.

ಬಂಡೀಪುರ ಅರಣ್ಯ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ವನ್ಯ ಪ್ರಾಣಿಗಳು ಅಡ್ಡ ಬರಬಹುದು, ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಪ್ರಯಾಣಿಕರು ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಬಾರದು ಎಂಬ ನಿಯಮವಿದೆ. ಅದರಲ್ಲಿಯೂ ಮುಖ್ಯವಾಗಿ ಮಾನವರು ಸೇವಿಸುತ್ತಿರುವ ಜಂಕ್​ಫುಡ್​ಗಳನ್ನು ನೀಡುವುದು ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಅದಾಗ್ಯೂ ಕೂಡಾ ಪ್ರವಾಸಿಗರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಪ್ರಾಣಿಗಳನ್ನು ನೋಡಿದಾಕ್ಷಣ ವಾಹನಗಳಿಂದ ಇಳಿದು ಸೆಲ್ಫಿ ತೆಗೆದುಕೊಳ್ಳುವುದು, ವಿಡಿಯೋ ಮಾಡುವುದು ಜತೆಗೆ ತಾವು ಸೇವಿಸುವ  ಜಂಕ್​ ಫುಡ್​ಗಳನ್ನು ನೋಡುತ್ತಿರುವುದು ಕಂಡು ಬರುತ್ತಿದೆ.

ಇದನ್ನೂ ಓದಿ:

ಬಂಡೀಪುರದಲ್ಲಿ ಸಫಾರಿ ದರ ಏರಿಕೆ; ಕೊರೊನಾ ನಡುವೆ ದರ ಹೆಚ್ಚಳಕ್ಕೆ ಪ್ರವಾಸಿಗರ ಅಸಮಾಧಾನ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಳೂರಿನ NGO ಸದಸ್ಯರ ಮೋಜು ಮಸ್ತಿ!

Click on your DTH Provider to Add TV9 Kannada