ಚಾಮರಾಜನಗರ, ಆಗಸ್ಟ್ 04: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡಲು ಆರಂಭಿಸಿದ ಪರಿಣಾಮ ಈಗಾಗಲೇ 50 ಡೆಂಗಿ (Dengue) ಪಾಸಿಟಿವ್ ಕೇಸ್ಗಳು ಪತ್ತೆ ಆಗಿವೆ. ಹೀಗಾಗಿ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ತಗೆದುಕೊಂಡಿದೆ. ಆ ಮೂಲಕ ನಗರದೆಲ್ಲೆಡೆ ಜನರಲ್ಲಿ ಅರಿವು ಮೂಡಿಸಲು ನಗರಸಭೆ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.
ಚಾಮರಾಜನಗರ ತಾಲ್ಲೂಕು ಒಂದರಲ್ಲಿಯೇ 34 ಪ್ರಕರಣಗಳು ದಾಖಲಾಗಿವೆ. ಈಡೀಸ್ ಸೊಳ್ಳೆಗಳು ಮೊಟ್ಟೆ ಇಡದಂತೆ ಸ್ವಚ್ಛತೆ ಬಗ್ಗೆ ಗಮನ ಹರಿಸುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ನಿಂತ ನೀರಿನಲ್ಲಿ ಲಾರ್ವಾ ಪತ್ತೆ ಹಚ್ಚಿ ನಾಶಪಡಿಸಲು ಕ್ರಮಕ್ಕೆ ಮುಂದಾಗಿದೆ.
ಗಡಿಭಾಗದ ಕೇರಳದಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದ್ದು, ಗಡಿ ಭಾಗದ 150 ಹಳ್ಳಿಗಳಲ್ಲಿ ನಿತ್ಯ ಮನೆಮನೆ ಸಮೀಕ್ಷಾ ಕಾರ್ಯ ನಡೆಯಲಿದೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಪ್ರತ್ಯೇಕ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಮಕ್ಕಳನ್ನು ಭಾದಿಸುತ್ತಿದೆ ವಿಚಿತ್ರ ಚರ್ಮರೋಗ
ಮಾರಕ ಡೆಂಘಿ ಖಾಯಿಲೆಗೆ ಗಡಿನಾಡು ಚಾಮರಾಜನಗರ ಜಿಲ್ಲಾ ಜನತೆ ಬೆಚ್ಚಿ ಬಿದ್ದಿದ್ದಾರೆ. ವೈರಲ್ ಫೀವರ್ ನಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು. ಆರೋಗ್ಯ ಇಲಾಖಾ ಸಿಬ್ಬಂದಿ ಫೀಲ್ಡ್ ಗೆ ಇಳಿದು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಡೆಂಗಿ ಹಾಗೂ ವೈರಲ್ ಫೀವರ್ ಹೆಚ್ಚಾಗಲು ಕಾರಣವೇನು ಎಂದು ನೋಡುವುದಾದರೆ, ಮನ್ಸೂನ್ ಹಿನ್ನಲೆ ಚಳಿ ಹಾಗೂ ಜಡಿ ಮಳೆಯ ಕಾರಣ ಮನೆ ಮುಂದೆ ಬಿಸಾಡಿರುವ ಸ್ಥಳಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಕಾಲರ, ಮಲೇರಿಯಾ, ಡೆಂಗಿಯಂತಹ ಪ್ರಕರಣಗಳು ದಿನ ನಿತ್ಯ ರಿಪೋರ್ಟ್ ಆಗುತ್ತಲೇ ಇವೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಟೊಮೆಟೊ ಬೆಳೆ ನಾಶ ಪ್ರಕರಣ: ಸ್ಥಳಕ್ಕೆ ಆಗಮಿಸಿದ ಶ್ವಾನದಳ
ಕಳೆದ ಒಂದು ತಿಂಗಳಿನಲ್ಲೇ ಬರೋಬ್ಬರಿ 50 ಪಾಸಿಟಿವ್ ಕೇಸ್ ರಿಜಿಸ್ಟರ್ ಆಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ಹೊಸತೊಂದು ತಲೆ ನೋವು ಎದುರಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಪೈಕಿ ಶೇಕಡ 15 ರಿಂದ 20 ಪರ್ಸೆಂಟ್ ವೈರಲ್ ಫೀವರ್ ಪ್ರಕರಣಗಳೇ ಹೆಚ್ಚಾಗಿವೆ.
ಸದ್ಯ ಫೀಲ್ಡಿಗಿಳಿದಿರುವ ಆರೋಗ್ಯ ಇಲಾಖಾ ಸಿಬ್ಬಂದಿ ವೈರಲ್ ಫೀವರ್ ಗುಣ ಲಕ್ಷಣವಿರುವ ಮಾಹಿತಿ ಕಲೆ ಹಾಕಿ ಸ್ಥಳದಲ್ಲೇ ಕೆಲ ಮಾತ್ರೆಗಳನ್ನ ನೀಡುತ್ತಿದ್ದಾರೆ. ಡೆಂಗಿಯಿಂದ ಸೂಕ್ತ ಚಿಕಿತ್ಸೆ ಪಡೆಯಲು ಈಗಾಗಲೇ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದ್ದು. ವೈರಲ್ ಫೀವರ್ ರೋಗಿಗಳಿಗಾಗಿಯೇ ವಿಶೇಷ ವಾರ್ಡ್ನ ಆಸ್ಪತ್ರೆಗಳಲ್ಲಿ ಮೀಸಲಿಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.