ದಾವಣಗೆರೆಯಲ್ಲಿ ನೊಣಗಳ ಕಾಟ, ಕೋಳಿ ಫಾರ್ಮ್​ಗಳಿಗೆ ನೋಟಿಸ್ ನೀಡಿದ ಜಿಲ್ಲಾ ಪಂಚಾಯಿತಿ ಅಧಿಕಾರಿ

ದಾವಣಗೆರೆ ತಾಲೂಕಿನ ಹುಣಸಿಕಟ್ಟೆ, ಮಂಡಲೂರು ಹಾಗೂ ಹೆಬ್ಬಾಳ್ ಗ್ರಾಮಗಳಲ್ಲಿನ ಗ್ರಾಮಸ್ಥರು ಪ್ರತಿ ದಿನ, ಪ್ರತಿ ಗಂಟೆ ನೊಣಗಳ ಸಮಸ್ಯೆಯಿಂದ ಬೇಸತ್ತಿದ್ದಾರೆ. ಸದ್ಯ ನೊಣಗಳ ಕಾಟಕ್ಕೆ ಕಾರಣವಾದ ಕೋಳಿ ಫಾರ್ಮ್​ಗಳಿಗೆ ಜಿಲ್ಲಾ ಪಂಚಾಯಿತ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ದಾವಣಗೆರೆಯಲ್ಲಿ ನೊಣಗಳ ಕಾಟ, ಕೋಳಿ ಫಾರ್ಮ್​ಗಳಿಗೆ ನೋಟಿಸ್ ನೀಡಿದ ಜಿಲ್ಲಾ ಪಂಚಾಯಿತಿ ಅಧಿಕಾರಿ
ಕೋಳಿ ಫಾರ್ಮ್​ಗಳಿಗೆ ನೋಟಿಸ್
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು

Updated on:Aug 05, 2023 | 10:22 AM

ದಾವಣಗೆರೆ, ಆ.04: ದಾವಣಗೆರೆ ಜಿಲ್ಲೆಯಲ್ಲಿ ನೊಣಗಳ‌(Fly) ಕಾಟ ಹೆಚ್ಚಾಗಿದೆ. ನೊಣಗಳ ಕಾಟಕ್ಕೆ ಜನ ಹೈರಾಣಾಗಿದ್ದಾರೆ. ರಾತ್ರಿ ಹಗಲು ಎನ್ನದೇ ನೊಣಗಳು ಜನರ ಮೇಲೆ ನಿರಂತರ ದಾಳಿ ನಡೆಸಿವೆ. ಬೆಲ್ಲಕ್ಕೆ ಇರುವೆ ಮುತ್ತಿಗೆ ಹಾಕಿದಂತೆ ಇಲ್ಲಿ ನೊಣಗಳು ಮುತ್ತಿಗೆ ಹಾಕುತ್ತಿವೆ. ದಾವಣಗೆರೆ ತಾಲೂಕಿನ ಹುಣಸಿಕಟ್ಟೆ, ಮಂಡಲೂರು ಹಾಗೂ ಹೆಬ್ಬಾಳ್ ಗ್ರಾಮಗಳಲ್ಲಿನ ಗ್ರಾಮಸ್ಥರು ಪ್ರತಿ ದಿನ, ಪ್ರತಿ ಗಂಟೆ ನೊಣಗಳ ಸಮಸ್ಯೆಯಿಂದ ಬೇಸತ್ತಿದ್ದಾರೆ. ಸದ್ಯ ನೊಣಗಳ ಕಾಟಕ್ಕೆ ಕಾರಣವಾದ ಕೋಳಿ ಫಾರ್ಮ್​ಗಳಿಗೆ(Chicken Farms) ಜಿಲ್ಲಾ ಪಂಚಾಯಿತ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಈ ಗ್ರಾಮಗಳಲ್ಲಿ ವಿದ್ಯಾವಂತರು, ಬುದ್ದಿವಂತರು, ಜೊತೆಗೆ ಅಡಿಕೆ ತೆಂಗು ಸೇರಿದಂತೆ ವಾಣಿಜ್ಯ ಬೆಳೆ ಬೆಳೆಯುವ ರೈತರೇ ತುಂಬಿದ್ದಾರೆ. ಇಂತಹ ಗ್ರಾಮದ ಗ್ರಾಮಸ್ಥರ ನೆಮ್ಮದಿ ಹಾಳಾಗಿದೆ. ಕಾರಣ ನೊಣಗಳು. ಎಲ್ಲಿ ನೋಡಿದರಲ್ಲಿ ನೋಣಗಳು ತುಂಬಿಕೊಂಡಿವೆ. ಪ್ರತಿವರ್ಷ ಮಳೆಗಾಲ ಬಂದ್ರೆ ಸಾಕು ಮೂರರಿಂದ ಐದು ತಿಂಗಳಕಾಲ ಗ್ರಾಮದ ಜನರು ಹಿಂಸೆ ಅನುಭವಿಸಬೇಕು. ಸ್ಥಿತಿವಂತರು ಸೊಳ್ಳೆ ಪರದೆ ಬಳಸುತ್ತಾರೆ. ಆದ್ರೆ ಬಡವರು ಏನು ಮಾಡಬೇಕು? ಈ ರೀತಿ ಗ್ರಾಮದಲ್ಲಿ ನೊಣಗಳ ಕಾಟ ಹೆಚ್ಚಾಗಲು ಕಾರಣ ಗ್ರಾಮದಲ್ಲಿ ಸುತ್ತಮುತ್ತಲು ಇರುವ 53ಕ್ಕೂ ಹೆಚ್ಚು ಕೋಳಿ ಫಾರ್ಮ್​ಗಳು. ಕೋಳಿ ಫಾರ್ಮನವರು ತ್ಯಾಜ್ಯ ವಿಲೇವಾರಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆ ಗ್ರಾಮಸ್ಥರು ಹಿಂಸೆ ಅನುಭವಿಸಬೇಕಾಗಿದೆ. ಹೀಗಾಗಿ ಗ್ರಾಮಸ್ಥರು ಕೋಳಿ ಫಾರ್ಮ್​ಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಪಶು ಸಂಗೊಪನೆ ಹಾಗೂ ಜಿಲ್ಲಾ ಪಂಚಾಯಿತ್ ಅಧಿಕಾರಿಗಳು ಕೋಳಿ ಫಾರ್ಮ್​ಗಳಿಗೆ ಭೇಟಿ ನೀಡಿ ಸುಚಿತ್ವ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೂ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: Bengaluru News: 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಆರ್​ಐ

ಇನ್ನು ಈ ನೊಣಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಈ ಗ್ರಾಮಕ್ಕೆ ನೊಣಗಳು ದಾಳಿ ಇಟ್ಟಿದ್ದು 2014ರಲ್ಲಿ. ಗ್ರಾಮದಲ್ಲಿ ಈ ರೀತಿಯ ನೊಣಗಳನ್ನ ನೋಡಿ ಜನ ಭಯಭೀತರಾಗಿದ್ದರು. ಕಾರಣ ಹುಡುಕಿದಾಗ ಮೂಲ ಸಿಕ್ಕಿದ್ದು ಗ್ರಾಮದ ಅಕ್ಕ ಪಕ್ಕದ ಕೋಳಿ ಫಾರ್ಮ್​ಗಳಲ್ಲಿ. ಬಹುತೇಕರು ಆಂಧ್ರಪ್ರದೇಶ ಮೂಲದವರು ಹತ್ತಾರು ವರ್ಷಗಳಿಂದ ಇಲ್ಲಿ ಕೋಳಿ ಫಾರ್ಮ್ ನಡೆಸುತ್ತಿದ್ದಾರೆ. ಅಲ್ಲದೆ ಈ ಕೋಳಿ ಫಾರ್ಮ್​ ನಡೆಸುವವರು ಪ್ರಭಾವಿಗಳು ಕೂಡ. ಹೀಗಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೂ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಯಾರಿಗೆ ಭೇಟಿ ಆಗಬೇಕು ಅವರಿಗೆ ಭೇಟಿ ಆದ್ರೆ ಸಾಕು ಕೆಲ್ಸ ಆಗುತ್ತದೆ ಹೋಗು ಎಂದು ಹೋರಾಟ ಮಾಡುವ ಗ್ರಾಮಸ್ಥರಿಗೆ ಬೇದರಿಸುತ್ತಾರೆ. ಎಂಟು ವರ್ಷಗಳಿಂದ ಆಯಾ ಕಾಲಕ್ಕೆ ಇದ್ದ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದ್ರೆ ಕ್ರಮ ಮಾತ್ರ ಆಗಿಯೇ ಇಲ್ಲ. ಸದ್ಯ ಈಗ ಜಿಲ್ಲಾ ಪಂಚಾಯಿತ್ ಅಧಿಕಾರಿಗಳು ಕೋಳಿ ಫಾರ್ಮ್​ಗಳಿಗೆ ಭೇಟಿ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ.

ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಬಳಿಕ ಜಿಲ್ಲಾಡಳಿತ ಎಚ್ಚತ್ತುಕೊಂಡಿದೆ. ಇದಕ್ಕಾಗಿ ಜಿಲ್ಲಾ ಪಂಚಾಯಿತ್ ಇಲಾಖೆ ಅಧಿಕಾರಿಗಳು ಹಾಗೂ ಪಶು ಸಂಗೊಪನಾ ಇಲಾಖೆಯ ಅಧಿಕಾರಿಗಳು ಕೋಳಿ ಫಾರ್ಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫಾರ್ಮ್ ಮಾಲೀಕರಿಗೆ ತಾಕೀತು ಮಾಡಿದ್ದಾರೆ. ಜೊತೆಗೆ ಕೋಳಿ ಫಾರ್ಮ್ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಸಹ ನೀಡಿದ್ದಾರೆ. ಇನ್ನಾದ್ರು ಈ ಕೋಳಿ ಫಾರ್ಮ್ ಮಾಲೀಕರು ಸ್ವಚ್ಚತೆ ಕಡೆಗೆ ಗಮನ ಕೊಡಬೇಕಾಗಿದೆ.

ಧಾರವಾಡ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:35 pm, Fri, 4 August 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ