AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರದಲ್ಲಿ ಮಕ್ಕಳನ್ನು ಭಾದಿಸುತ್ತಿದೆ ವಿಚಿತ್ರ ಚರ್ಮರೋಗ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ ಗ್ರಾಮಗಳಲ್ಲಿ ವಿಚಿತ್ರ ಚರ್ಮರೋಗ ಕಾಣಿಸಿಕೊಂಡಿದೆ.

ಚಾಮರಾಜನಗರದಲ್ಲಿ ಮಕ್ಕಳನ್ನು ಭಾದಿಸುತ್ತಿದೆ ವಿಚಿತ್ರ ಚರ್ಮರೋಗ
ವಿಚಿತ್ರ ಚರ್ಮರೋಗ
Follow us
TV9 Web
| Updated By: ವಿವೇಕ ಬಿರಾದಾರ

Updated on: Jul 31, 2023 | 10:31 AM

ಚಾಮರಾಜನಗರ: ಜಿಲ್ಲೆಯ ಹನೂರು (Hanur) ತಾಲೂಕಿನ ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ ಗ್ರಾಮಗಳಲ್ಲಿ ವಿಚಿತ್ರ ಚರ್ಮರೋಗ (Skin disease) ಕಾಣಿಸಿಕೊಂಡಿದೆ. ಈ ವಿಚಿತ್ರ ಚರ್ಮರೋಗದಿಂದ ನಾಲ್ವರು ಮಕ್ಕಳು ಬಳಲುತ್ತಿದ್ದಾರೆ. ಈ ಚರ್ಮರೋಗ ಆರು ತಿಂಗಳ ಮಗುವಾಗಿದ್ದಾಗಲೇ ಕಾಣಿಸಿಕೊಳ್ಳುತ್ತಿದೆ. ದೇಹದ ಚರ್ಮದ ಮೇಲೆ ಚುಕ್ಕಿಗಳಾಗಾಗುತ್ತವೆ.

ಇದರಿಂದ ಕಾಲಕ್ರಮೇಣ ಮಕ್ಕಳಲ್ಲಿ ದೃಷ್ಟಿದೋಷ ಹಾಗೂ ಶ್ರವಣದೋಷ ಸಮಸ್ಯೆ ಉಂಟಾಗುತ್ತಿದೆ. ಕಳೆದ 20-25 ವರ್ಷಗಳ ಹಿಂದೆಯೂ ಕೆಲವು ಮಕ್ಕಳಲ್ಲಿ ಈ ಚರ್ಮರೋಗ ಕಾಣಿಸಿಕೊಂಡಿತ್ತು. ರಕ್ತ ಸಂಬಂಧದಲ್ಲೇ ವಿವಾಹದ ಕಾರಣ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕುರುಡು ಕಾಂಚಾಣ ತಾಂಡವ? ಆಡಿಯೋ ಹೇಳುತ್ತಿದೆ ಲಂಚಾವತಾರದ ಕಥೆ

ಕೈ ಕಾಲು, ಮುಖದ ಮೇಲೆ ಕಪ್ಪು ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವ ರೋಗಕ್ಕೆ ಚುಕ್ಕಿ ಚರ್ಮರೋಗ ಎಂದು ಕರೆಯಲಾಗುತ್ತದೆ. ಮಕ್ಕಳಿಗೆ ಒಂಬತ್ತು ವರ್ಷ ತುಂಬಿದ ನಂತರ ಚರ್ಮದಲ್ಲಿ ಹುಣ್ಣು, ಬಿಳಿ ಮಚ್ಚೆ, ಚರ್ಮ ಕಪ್ಪು ಬಣ್ಣಕ್ಕೆ ತಿರುಗುವುದು, ಕಣ್ಣು ಊದಿಕೊಳ್ಳುವಿಕೆ ಈ ರೀತಿ ನಾನಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸದ್ಯ ಹನೂರು ಸುತ್ತಲಿನ ನಾಲ್ಕಕ್ಕೂ ಹೆಚ್ಚಿನ ಮಕ್ಕಳಲ್ಲಿ ರೋಗ ಲಕ್ಷಣ ಪತ್ತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ