ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುವ ಭಕ್ತರೇ ಎಚ್ಚರ, ಕಾಡಾನೆ ದಾಳಿಗೆ ಮಹಿಳೆ ಸಾವು
ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ವೇಳೆ ಪಾದಯಾತ್ರಿಗಳ ಮೇಲೆ ಕಾಡಾನೆ ಹಠಾತ್ ದಾಳಿ ನಡೆಸಿದ್ದು, ಮಳವಳ್ಳಿ ತಾಲೂಕು ಹೊನ್ನೇನಹಳ್ಳಿಯ ಲಕ್ಷ್ಮಿ (40) ಎಂಬುವವರು ಸಾವನ್ನಪ್ಪಿದ್ದಾರೆ. ಈ ಕುರಿತು ಮಲೆ ಮಹದೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ, ಏ.10: ಮಹದೇಶ್ವರ ಬೆಟ್ಟದ(Male Mahadeshwara Hills) ಆನೆತಲೆದಿಂಬದ ಬಳಿ ಭಕ್ತರ ಮೇಲೆ ಕಾಡಾನೆ ದಾಳಿ(Wild Elephant Attack) ಮಾಡಿದ್ದು, ಮಹಿಳೆಯೋರ್ವಳು ಸಾವನ್ನಪ್ಪಿದ್ದಾರೆ. ಮಳವಳ್ಳಿ ತಾಲೂಕು ಹೊನ್ನೇನಹಳ್ಳಿಯ ಲಕ್ಷ್ಮಿ (40) ಮೃತ ರ್ದುದೈವಿ. ಇವರು ಇತರ ಮೂವರು ಭಕ್ತರ ಜೊತೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದರು. ಈ ವೇಳೆ ಪಾದಯಾತ್ರಿಗಳ ಮೇಲೆ ಕಾಡಾನೆ ಹಠಾತ್ ದಾಳಿ ನಡೆಸಿದ್ದು, ಈ ಕುರಿತು ಮಲೆ ಮಹದೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿ ಮೇಲೆ ಹಲ್ಲೆ
ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ನಡುರಸ್ತೆಯಲ್ಲೇ ಪತಿಯೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಭೀಕರ ಘಟನೆ ನಡೆದಿದೆ. ಹಲ್ಲೆಗೊಳಗಾದ ಪತ್ನಿ ಗೀತಾ, ಮುಂಡರಗಿ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕಿಯಾಗಿ ಸೇವೆಸಲ್ಲಿಸುತ್ತಿದ್ದರು. ಹಲವು ತಿಂಗಳಿಂದ ಗಂಡ ಬೇಲೂರಪ್ಪ ಮತ್ತು ಹೆಂಡತಿ ನಡುವೆ ಜಗಳವಿತ್ತು. ಈ ಹಿನ್ನಲೆ ಇಂದು ಸಿಟ್ಟಿಗೆದ್ದ ಗಂಡ, ನಡುರಸ್ತೆಯಲ್ಲೇ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ:ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮತ್ತೋರ್ವ ಬಲಿ, 3 ದಿನದ ಅಂತರದಲ್ಲೇ ಇಬ್ಬರು ದುರ್ಮರಣ
ಬಳಿಕ ಮಚ್ಚು ಹಿಡಿದುಕೊಂಡು ಗಂಡ ಅಲ್ಲೇ ನಿಂತಿದ್ದಾನೆ. ಈ ಹಿನ್ನಲೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಗೀತಾಳನ್ನು ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕಿದ್ದಾರೆ. ಅಂಚೆ ಸಹಾಯಕಿ ಗೀತಾ ಸ್ಥಿತಿ ಚಿಂತಾಜನಿಕವಾಗಿದ್ದು, ಸ್ಥಳಕ್ಕೆ ಮುಂಡರಗಿ ಪೊಲೀಸರು ದೌಡಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Wed, 10 April 24