ಚಾಮರಾಜನಗರ ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಭಕ್ತರ ದಂಡು
ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ನಡೆಯಿತು. ಜಾತ್ರೆಯಲ್ಲಿ ಕಾದ ಎಣ್ಣೆಯೊಳಗಿಂದ ಅರ್ಚಕ ಕಜ್ಜಾಯ ತೆಗೆದಿದ್ದಾರೆ. ನಂತರ ಕಾದ ಎಣ್ಣೆಯನ್ನ ನೆರದಿದ್ದ ಭಕ್ತರಿಗೆ ಎರಚಿದ್ದಾರೆ.
ಇಂದು (ನ.19) ಕಡೆಯ ಕಾರ್ತಿಕ ಸೋಮವಾರ ಹಿನ್ನೆಲೆ ದೇವಾಲಯಗಳತ್ತ ಭಕ್ತರು ಆಗಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ಬಂದು ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಇಷ್ಟಾರ್ಥ ಸಿದ್ಧಿಸು ಅಂತ ಬೇಡಿಕೊಳ್ಳುತ್ತಿದ್ದಾರೆ. ಇನ್ನು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ಭಕ್ತರ ದಂಡು ಹರಿದು ಬಂದಿದೆ. ಕೊವಿಡ್ ಗೈಡ್ಲೈನ್ಸ್ ಅನುಸರಿಸಿ ದರ್ಶನಕ್ಕೆ ಅವಕಾಶಕ್ಕೆ ಅವಕಾಶ ನೀಡಲಾಗುತ್ತಿದೆ. ಮಳೆ ನಡುವೆಯೂ ಭಕ್ತ ಸಮೂಹ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಿದೆ. ವಿವಿಧ ಹೂವುಗಳಿಂದ ಮಾದಪ್ಪನ ದೇವಾಲಯವನ್ನು ಅಲಂಕಾರ ಮಾಡಲಾಗಿದೆ. ಮಾದಪ್ಪನ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ಭಕ್ತರು ಬರುತ್ತಿದ್ದಾರೆ.
ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ನಡೆಯಿತು. ಜಾತ್ರೆಯಲ್ಲಿ ಕಾದ ಎಣ್ಣೆಯೊಳಗಿಂದ ಅರ್ಚಕ ಕಜ್ಜಾಯ ತೆಗೆದಿದ್ದಾರೆ. ನಂತರ ಕಾದ ಎಣ್ಣೆಯನ್ನ ನೆರದಿದ್ದ ಭಕ್ತರಿಗೆ ಎರಚಿದ್ದಾರೆ. ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮುವಾರದಂತ ಈ ಜಾತ್ರೆ ನಡೆಯುತ್ತದೆ. ಎಣ್ಣೆಯಿಂದ ಹೊರ ತೆಗೆದ ಕಜ್ಜಾಯ ಸಿದ್ದಪ್ಪಾಜಿ ಪ್ರಸಾದ ಅಂತ ಭಕ್ತರು ನಂಬಿದ್ದಾರೆ.