ಕೊಡಗಾಪುರ ಶಾಲೆಯ ಶಿಕ್ಷಕ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ, ರಾಜ್ಯದಲ್ಲಿ ಸೋಂಕಿನ ಪ್ರಮಾಣ ಎಷ್ಟಿದೆ ಗೊತ್ತಾ?

ಕೊಡಗಾಪುರ ಶಾಲೆಯ 2 ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕನಲ್ಲೂ ಸೋಂಕು ಪತ್ತೆಯಾಗಿದೆ. ಶಿಕ್ಷಕನಿಂದಲೇ ಮಕ್ಕಳಿಗೆ ಕೊರೊನಾ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ. ಕೊರೊನಾ ಲಕ್ಷಣ ಕಾಣಿಸಿ ಕೊಂಡ ಮಕ್ಕಳಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ.

ಕೊಡಗಾಪುರ ಶಾಲೆಯ ಶಿಕ್ಷಕ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ, ರಾಜ್ಯದಲ್ಲಿ ಸೋಂಕಿನ ಪ್ರಮಾಣ ಎಷ್ಟಿದೆ ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Dec 01, 2021 | 9:50 AM

ಚಾಮರಾಜನಗರ: ಕೊರೊನಾ 2ನೇ ಅಲೆ ಕಡಿಮೆಯಾಯ್ತು. ಎಲ್ಲ ನಾರ್ಮಲ್ ಅಂತಾ ಶಾಲಾ-ಕಾಲೇಜುಗಳನ್ನ ಓಪನ್ ಮಾಡಿ ಇನ್ನೇನು ಮಕ್ಕಳು ಶಾಲೆ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಅನ್ನುವಷ್ಟರಲ್ಲೇ ಕೊರೊನಾ ಮತ್ತೆ ಅಬ್ಬರಿಸೋಕೆ ಶುರು ಮಾಡಿದೆ. ಅದರಲ್ಲೂ ಈ ಬಾರಿ ಕೊರೊನಾ ಹೆಚ್ಚಾಗಿ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡ್ತಿರೋದು ಆತಂಕಕ್ಕೆ ಕಾರಣವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇನ್ನು ಕೊಡಗಾಪುರ ಶಾಲೆಯ 2 ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕನಲ್ಲೂ ಸೋಂಕು ಪತ್ತೆಯಾಗಿದೆ. ಶಿಕ್ಷಕನಿಂದಲೇ ಮಕ್ಕಳಿಗೆ ಕೊರೊನಾ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ. ಕೊರೊನಾ ಲಕ್ಷಣ ಕಾಣಿಸಿ ಕೊಂಡ ಮಕ್ಕಳಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಶಿಕ್ಷಣ ಇಲಾಖೆ ಕೊಡಗಾಪುರ ಹಿರಿಯ ಪ್ರಾಥಮಿಕ ಶಾಲೆಯನ್ನ ಸ್ಯಾನಿಟೈಸ್ ಮಾಡಿದ್ದು ಕೊರೊನಾ ಸೋಂಕಿತ ಮೂವರಿಗೂ ಹೋಂ ಕ್ವಾರೈಂಟೆನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದೆ. ಹಾಗಾದ್ರೆ ನವೆಂಬರ್ ತಿಂಗಳಲ್ಲಿ ಬದಲಾದ ಕೊರೊನಾ ಚಿತ್ರಣ ಏನು ಅಂತ ಇಲ್ಲಿ ನೋಡಿ ನವೆಂಬರ್ ಮೊದಲ ವಾರದಲ್ಲಿ ರಾಜ್ಯದ ಪಾಸಿಟಿವಿಟಿ ದರ -0.31% ನವೆಂಬರ್ ಕೊನೆಯ ವಾರದಲ್ಲಿ ರಾಜ್ಯದ ಪಾಸಿಟಿವಿಟಿ ದರ -0.42% ಏರಿಕೆ ಆಗಿದೆ ಬೆಂಗಳೂರಲ್ಲಿ ನವೆಂಬರ್ ಮೊದಲ ವಾರದ ಪಾಸಿಟಿವಿಟಿ ದರ -0.39% ಬೆಂಗಳೂರಲ್ಲಿ ನವೆಂಬರ್ ಮೊದಲ ವಾರದ ಪಾಸಿಟಿವಿಟಿ ದರ -0.55% ಗೆ ಏರಿಕೆ ಆಗಿದೆ

ನವೆಂಬರ್ ನಲ್ಲಿ ಪಾಸಿಟಿವಿಟಿ ದರ ಹೆಚ್ಚಿದ ಜಿಲ್ಲೆಗಳು ಜಿಲ್ಲೆ-ಮೊದಲ ವಾರ-ಕೊನೆಯ ವಾರ ಬೆಂಗಳೂರು- 0.39%- 0.55% ಧಾರವಾಡ- 0.23%.- 1.79% ಮೈಸೂರು- 0.88%- 0.94% ಉಡುಪಿ- 0.53%- 0. 61% ಚಿತ್ರದುರ್ಗ- 0.18% -0.55%

ಇದನ್ನೂ ಓದಿ: Viral Video: ಅಪರಿಚಿತ ವ್ಯಕ್ತಿ ನೀಡಿದ ಚಾಕಲೇಟ್​ಗೆ ಮಕ್ಕಳ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ