ಚಾಮರಾಜನಗರ: ಜಿಲ್ಲೆಯ ಹನೂರು(Hanur)ತಾಲೂಕಿನಲ್ಲಿರುವ ಮಾದಪ್ಪನ ಬೆಟ್ಟಕ್ಕೆ ಹೋಗುವ ಭಕ್ತರಿಗೆ ಮಲೆ ಮಹದೇಶ್ವರ (Male Mahadeshwara Hill) ಪ್ರಾಧಿಕಾರ ನಾಲ್ಕು ಹೊಸ ಬಸ್ ಖರೀದಿಸುವ ಮೂಲಕ ಸಿಹಿ ಸುದ್ದಿ ನೀಡಿದೆ. ಅತೀ ಹೆಚ್ಚು ಭಕ್ತರು ಮಾದಪ್ಪನ ದರ್ಶನ ಪಡೆಯಲು ಬರುತ್ತಿದ್ದು, ಈ ಹಿಂದೆ ಇದ್ದ ಬಸ್ಗಳು ಹಳೆಯದಾಗಿತ್ತು. ಈ ಕುರಿತು ಪ್ರಯಾಣಿಕರು ಸಾಕಷ್ಟು ದೂರು ಕೂಡ ನೀಡಿದ್ದರು. ಈ ಕಾರಣ ನಾಲ್ಕು ಹೊಸ ಬಸ್ ಖರೀದಿ ಮಾಡಿರುವ ಪ್ರಾಧಿಕಾರ, ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ. ಇನ್ನು ಹೊಸ ಬಸ್ ಆಗಮನವಾಗುತ್ತಲೇ ಸಾಲೂರು ಮಠದ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದ ಅವರು ಪೂಜೆ ಸಲ್ಲಿಸಿದರು.
ನೂತನ ಬಸ್ಗಳಿಗೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರಿಂದ ಚಾಲನೆ ನೀಡುವ ಸಾದ್ಯತೆಯಿದೆ. ಇದಾದ ಬಳಿಕ ಬಸ್ಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತವೆ ಎಂದು ಪ್ರಾಧಿಕಾರದ ಅಧಿಕಾರಿಗಳು ರೂಟ್ ಫಿಕ್ಸ್ ಮಾಡಲಿದ್ದಾರೆ.
ಇದನ್ನೂ ಓದಿ:Chamrajnagar: ಮಲೆ ಮಹಾದೇಶ್ವರದ ಮಾದಪ್ಪನ ಸನ್ನಿಧಿಯಲ್ಲಿ ಮಹಿಳೆಯರದ್ದೇ ಬಹುಪರಾಕ್
ಇನ್ನು ಇದೇ ವರ್ಷ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದ್ದ ಶಿವರಾತ್ರಿ ಜಾತ್ರಾ ಮಹೋತ್ಸವದಂದು ಹರಕೆ, ಪ್ರಸಾದ ವಿತರಣೆಯಿಂದ ಬರೊಬ್ಬರಿ 2.70 ಕೋಟಿಗೂ ಅಧಿಕ ಹಣ ಹರಿದು ಬಂದಿತ್ತು. ಕರ್ನಾಟಕದಲ್ಲಿ ಅತೀ ಹೆಚ್ಚು ಭಕ್ತರು ಭೇಟಿ ನೀಡುವ ದೇವಸ್ಥಾನಗಳಲ್ಲಿ ಮಲೆ ಮಹದೇಶ್ವರ ಬೆಟ್ಟವು ಒಂದಾಗಿದೆ. ಅದಕ್ಕೆ ಸಾಕ್ಷಿಯೆಂಬಂತೆ ಶಿವರಾತ್ರಿಯಂದು ಕಾಲ್ನಡಿಗೆಯಲ್ಲಿ 10 ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟವನ್ನ ಹತ್ತಿ ಮಾದಪ್ಪನ ದರ್ಶನ ಪಡೆದಿದ್ದರು. ಈ ಮೂಲಕ ಬೆಟ್ಟಕ್ಕೆ ಬರುವವರ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೆ ಇದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ