ಗೂಗಲ್ ಮ್ಯಾಪ್ ಎಡವಟ್ಟು: ದಿಂಬಂ ಘಾಟ್​ನಲ್ಲಿ ಹಾದಿ ತಪ್ಪಿ ದಟ್ಟ ಕಾಡಿನಲ್ಲಿ ಸಿಲುಕಿದ ಟೆಕ್ಕಿಗಳು!

ಬೆಂಗಳೂರಿನಿಂದ ಮೈಸೂರು ದಸರಾಗೆ ತೆರಳಿ ಅಲ್ಲಿಂದ ಚೆನ್ನೈಗೆ ತೆರಳುತ್ತಿದ್ದ ಒಂಬತ್ತು ಟೆಕ್ಕಿಗಳು ಗೂಗಲ್ ಮ್ಯಾಪ್ ತೋರಿಸಿದ ಮಾರ್ಗವನ್ನು ಅನುಸರಿಸಿ ದಟ್ಟ ಕಾಡಿನ ಕಂದಕದಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಕಾಡಾನೆ ಘೀಳಿಡುವ ಶಬ್ದ ಕೇಳಿ ರಾತ್ರಿ ಇಡೀ ಕಾರಿನಿಂದ ಕೆಳಗಿಳಿಯದೆ ಕಾಲ ಕಳೆದ ತಂಡಕ್ಕೆ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ತಮಿಳುನಾಡು ಪೊಲೀಸರಿಂದ ನೆರವು ದೊರೆತಿದೆ.

ಗೂಗಲ್ ಮ್ಯಾಪ್ ಎಡವಟ್ಟು: ದಿಂಬಂ ಘಾಟ್​ನಲ್ಲಿ ಹಾದಿ ತಪ್ಪಿ ದಟ್ಟ ಕಾಡಿನಲ್ಲಿ ಸಿಲುಕಿದ ಟೆಕ್ಕಿಗಳು!
ರಸ್ತೆ ಬದಿಯ ಕಂದಕದಲ್ಲಿ ಸಿಲುಕಿಕೊಂಡ ಕಾರು
Image Credit source: tv9
Edited By:

Updated on: Oct 17, 2026 | 10:03 AM

ಮುಖ್ಯಾಂಶಗಳು

  • ಗೂಗಲ್ ಮ್ಯಾಪ್ ತೋರಿದ ಮಾರ್ಗದಲ್ಲಿ ತೆರಳಿ ಕಾಡಿನಲ್ಲಿ ಸಿಲುಕಿದ ಒಂಬತ್ತು ಟೆಕ್ಕಿಗಳು
  • ಕಾಡಾನೆ ಘೀಳಿಡವ ಶಬ್ದದ ನಡುವೆ ಕಾರಿನೊಳಗೇ ರಾತ್ರಿ ಕಳೆದ ತಂಡ
  • ಅಗ್ನಿಶಾಮಕ ಸಿಬ್ಬಂದಿಯಿಂದ ಕಾರು ಮೇಲಕ್ಕೆತ್ತಿ ರಕ್ಷಣೆ

ಚಾಮರಾಜನಗರ, ಅಕ್ಟೋಬರ್ 17: ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗಿ ಸೇತುವೆಯಿಂದ ಕೆಳಬಿದ್ದ ಕಾರು, ಗೂಗಲ್ ಮ್ಯಾಪ್ ನೋಡಿಕೊಂಡು ಹೋಗಿ ಅಪಘಾತಕ್ಕೀಡಾದ ಸುದ್ದಿಗಳನ್ನು ನಾವು ನೋಡಿದ್ದೇವೆ. ಆದರೀಗ ನವರಾತ್ರಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಬಂದಿದ್ದ ಒಂಬತ್ತು ಟೆಕ್ಕಿಗಳು, ಗೂಗಲ್ ಮ್ಯಾಪ್ ತೋರಿಸಿದ ಮಾರ್ಗವನ್ನು ಅನುಸರಿಸಿ ದಟ್ಟ ಕಾಡಿನಲ್ಲಿ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದ ಈ ತಂಡ, ಉತ್ಸವ ವೀಕ್ಷಿಸಿದ ಬಳಿಕ ಚೆನ್ನೈಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ರೋಜರ್ ಪ್ರಿನ್ಸ್, ಪ್ರಿನ್ಸ್ ಮಾರ್ಟಿನ್, ಮಣಿ, ಅರಿವುಮತಿ, ಗಣ, ಶರ್ಮಿಳಾ, ತ್ರಿಷಾ, ಬೊಪೇಶ್ ಹಾಗೂ ಜೋಸಯ್ಯ ಸೇರಿದಂತೆ ಒಂಬತ್ತು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಮರಾಜನಗರ ಮಾರ್ಗವಾಗಿ ದಿಂಬಂ ಘಾಟ್ ಮೂಲಕ ಚೆನ್ನೈಗೆ ತೆರಳಲು ನಿರ್ಧರಿಸಿದ್ದ ತಂಡ, ರಾತ್ರಿ ಗೂಗಲ್ ಮ್ಯಾಪ್ ಸಹಾಯದಿಂದ ಪ್ರಯಾಣ ಮುಂದುವರಿಸಿತ್ತು.

ಈ ವೇಳೆ ಗೂಗಲ್ ಮ್ಯಾಪ್ ಕಾಡಿನ ಒಳಭಾಗದ ರಸ್ತೆಯನ್ನು ತೋರಿಸಿದ್ದು, ಅದೇ ಮಾರ್ಗದಲ್ಲಿ ಸಾಗಿದ ಕಾರು ರಸ್ತೆ ಬದಿಯ ಕಂದಕದಲ್ಲಿ ಸಿಲುಕಿಕೊಂಡಿದೆ. ದಟ್ಟ ಕಾಡಿನ ಮಧ್ಯೆ ಸಿಲುಕಿದ ತಂಡಕ್ಕೆ ರಾತ್ರಿ ಅಲ್ಲಿಯೇ ಕಳೆಯುವ ಪರಿಸ್ಥಿತಿ ಎದುರಾಗಿದೆ.

ಕಾಡಾನೆಯ ಶಬ್ದ ಕೇಳಿ ರಾತ್ರಿ ಜಾಗರಣೆ

ರಾತ್ರಿ ವೇಳೆ ಕಾಡಾನೆ ಘೀಳಿಡುವ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಟೆಕ್ಕಿಗಳು ಕಾರಿನಿಂದ ಕೆಳಗಿಳಿಯದೆ ಒಳಗೇ ಉಳಿದುಕೊಂಡಿದ್ದಾರೆ. ಬೆಳಗ್ಗೆಯವರೆಗೂ ದಟ್ಟ ಕಾಡಿನಲ್ಲೇ ಕಾಲ ಕಳೆದ ತಂಡ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆ. ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಂದಕದಲ್ಲಿ ಸಿಲುಕಿದ್ದ ಕಾರನ್ನು ಮೇಲಕ್ಕೆತ್ತಿದ್ದಾರೆ. ತಮಿಳುನಾಡು ಪೊಲೀಸರು ಒಂಬತ್ತು ಟೆಕ್ಕಿಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.
Google map Mistake: ಗೂಗಲ್​ ಮ್ಯಾಪ್ ನಂಬಿ ಹೋದ ಟೆಕ್ಕಿಗಳು ಕಾಡಿನಲ್ಲಿ ಇಡೀ ರಾತ್ರಿ ಕಳೆದ್ರು | #TV9D
ಗೂಗಲ್ ಮ್ಯಾಪ್ ತೋರಿಸಿದ ಮಾರ್ಗವನ್ನು ಅನುಸರಿಸಿದ ಪರಿಣಾಮ ತಂಡ ದಟ್ಟ ಕಾಡಿನಲ್ಲಿ ಸಿಲುಕಿಕೊಂಡಿದ್ದು, ರಾತ್ರಿ ಇಡೀ ಆತಂಕದಲ್ಲೇ ಕಾಲ ಕಳೆಯುವಂತಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 am, Sat, 17 October 26

ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More
Loading...
Unable to load recommendations.
Follow Us