ಚಾಮರಾಜನಗರ, ಜು.23: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ(Kollegala) ತಾಲೂಕಿನ ದಾಸನಪುರ ಗ್ರಾಮದಲ್ಲಿ ಅಪಾಯದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿದೆ. ಈ ಹಿನ್ನಲೆ ನದಿಯ ಪಕ್ಕದಲ್ಲೇ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಕಳೆದ ವರ್ಷ ಮಳೆಯಿಲ್ಲದೆ ಭೀಕರ ಬರಗಾಲವಿತ್ತು. ಆದ್ರೆ, ಈ ವರ್ಷ ಅತಿಯಾದ ಮಳೆ ಹಿನ್ನಲೆ ಕಬಿನಿ ಹಾಗೂ ಕನ್ನಂಬಾಡಿ ಕಟ್ಟೆಯಿಂದ ಔಟ್ ಫ್ಲೋ ಹೆಚ್ಚಳವಾಗಿದೆ. ಇದರಿಂದ ಕೊಳ್ಳೇಗಾಲ ತಾಲೂಕಿನ 12 ಗ್ರಾಮಗಳು ಅಪಾಯದ ಅಂಚಿಗೆ ತಲುಪಿದೆ.
ಇನ್ನು ಕಳೆದ ಮೂರು ವರ್ಷದ ಹಿಂದೆ ಅತಿಯಾದ ಮಳೆಯಿಂದ ದಾಸನಪುರ ಗ್ರಾಮ ಸೇರಿದಂತೆ 12 ಗ್ರಾಮಗಳು ಸಂಪೂರ್ಣ ಜಲಾವೃತವಾಗಿತ್ತು. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಜೊತೆಗೆ ಬೆಳೆದ ಬೆಳೆಗಳೆಲ್ಲವೂ ನೀರು ಪಾಲಾಗಿತ್ತು. ಈ ಹಿನ್ನಲೆ ಗ್ರಾಮಕ್ಕೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣ ಮಾಡಬೇಕಿತ್ತು. ತಡೆಗೋಡೆ ನಿರ್ಮಾಣ ಮಾಡಿದ್ರೆ ಗ್ರಾಮಗಳಿಗೆ ನೀರು ನುಗ್ಗುವುದಿಲ್ಲವೆಂದು ಸಾಭೀತಾಗಿತ್ತು.
ಇದನ್ನೂ ಓದಿ:ಮೈದುಂಬಿ ಹರಿಯುತ್ತಿವೆ ಬೆಳಗಾವಿಯ ಸಪ್ತನದಿಗಳು: ಪ್ರವಾಹ ಭೀತಿ ಪ್ರದೇಶಗಳಿಗೆ ಡಿಸಿ ನೇತೃತ್ವದ ತಂಡ ಭೇಟಿ
ಆದ್ರೆ, 12 ಗ್ರಾಮಸ್ಥರು ಮನವಿ ಮಾಡಿದರೂ ತಡೆಗೋಡೆ ಮಾತ್ರ ನಿರ್ಮಾಣ ಮಾಡಿಲ್ಲ. ಇದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ 12 ಗ್ರಾಮಸ್ದರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಅದೇನೆ ಇರಲಿ, ಪ್ರತಿ ವರ್ಷ ಮಳೆಗಾಲದಲ್ಲಿ ಕೊಳ್ಳೇಗಾಲ ತಾಲೂಕಿನ 12 ಗ್ರಾಮಸ್ದರು ಆತಂಕದಲ್ಲೇ ಕಾಲ ಕಳೆಯುವಂತಾಗಿದ್ದು, ತಡೆಗೋಡೆ ನಿರ್ಮಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ದುರಃತವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ