AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ರಿಲೀಸ್​; ಹಲವೆಡೆ ಪ್ರವಾಹ ಭೀತಿ

ಕರ್ನಾಟಕ ಹಲವೆಡೆ ಮಳೆ ಆರ್ಭಟ ಜೋರಾಗಿದೆ. ಅದರಲ್ಲೂ ಮಳೆಗೆ ರಾಜ್ಯದಲ್ಲೆ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಕಬಿನಿ ಜಲಾಶಯ(Kabini Dam)ಕ್ಕಿದೆ. ಇದೀಗ ಈ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅಧಿಕ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದ ಹಲವೆಡೆ ಪ್ರವಾಹ ಬೀತಿ ಎದುರಾಗಿದೆ.

ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ರಿಲೀಸ್​; ಹಲವೆಡೆ ಪ್ರವಾಹ ಭೀತಿ
ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ರಿಲೀಸ್​; ಹಲವೆಡೆ ಪ್ರವಾಹ ಭೀತಿ
ದಿಲೀಪ್​, ಚೌಡಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 17, 2024 | 10:48 PM

Share

ಮೈಸೂರು, ಜು.17: ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕಬಿನಿ(Kabini Dam) ಒಡಲು ಭರ್ತಿಯಾಗಿದೆ. ಕಳೆದ ಒಂದು ತಿಂಗಳ ಹಿಂದೆ ಖಾಲಿ ಖಾಲಿಯಾಗಿದ್ದ ಜಲಾಶಯ ಇದೀಗ ಸಂಪೂರ್ಣ ತುಂಬಿದ್ದು, ಜಲಾಶಯದಲ್ಲಿ 83 ಅಡಿ ನೀರಿದೆ. ಹೌದು, ಮೈಸೂರು(Mysore)ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ‌ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ವರ್ಷದಲ್ಲಿ ಎರಡು ಬಾರಿ ಮತ್ತು ರಾಜ್ಯದಲ್ಲೆ ಮೊದಲ ಬಾರಿಗೆ ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಇದೆ. ಇದೀಗ ಈ ಜಲಾಶಯಕ್ಕೆ 23 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಸದ್ಯ ಜಲಾಶಯ ಭರ್ತಿಯಾಗಿರುವ ಕಾರಣ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಹಲವೆಡೆ ಪ್ರವಾಹ ಭೀತಿ

ಇದರಿಂದ ತಮಿಳುನಾಡಿಗೆ ನೀರು ಹರಿಸುವಂತೆ ಹೇಳಿದ್ದ CWRC ಆದೇಶ ಪಾಲನೆ ಮಾಡಿದಂತಾಗಿದ್ದು, ಈ ಮೂಲಕ ಸಂಕಷ್ಟ ಪರಿಹಾರವಾದಂತಾಗಿದೆ. ಆದರೆ, ಜಲಾಶಯ ಭರ್ತಿಯಾಗಿರುವ ಕಾರಣ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ. ಈ ನಡುವೆ ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಸ್ನಾನ ಘಟ್ಟ ಕೂಡ ಮುಳುಗಿದ್ದು, ಇದರಿಂದ ಭಕ್ತಾದಿಗಳು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:ವಿಜಯನಗರ; ತುಂಗಾಭದ್ರ ಜಲಾಶಯದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ, ವಿಡಿಯೋ ನೋಡಿ

ಅದಷ್ಟೆ ಅಲ್ಲದೆ. ಸ್ನಾನ ಘಟ್ಟದ ಬಳಿ ಬ್ಯಾರಿಕೇಡ್ ಅಳವಡಿಸಿ ದೇವಾಲಯ ಆಡಳಿತ ಮಂಡಳಿಯಿಂದ ಭಕ್ತಾಧಿಗಳಿಗೆ ಎಚ್ವರಿಕೆ ನೀಡಲಾಗುತ್ತಿದೆ. ಇದರ ಜೊತೆ 16 ಕಾಲು ಮಂಟಪ ಕೂಡ ಅರ್ಧದಷ್ಟು ಮುಳುಗಡೆಯಾಗಿದೆ. ಒಟ್ಟಾರೆ, ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕೇರಳದಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಹೀಗೆ ಮಳೆ ಪ್ರಮಾಣ ಹೆಚ್ಚಾದರೆ ನದಿಗೆ ಮತ್ತಷ್ಟು ನೀರನ್ನು ಬಿಡುವ ಸಾಧ್ಯತೆ ಇದೆ‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು