ಅಕ್ರಮ ಸಂಬಂಧ: ಪತ್ನಿಯನ್ನು ಪೊಲೀಸ್ ಠಾಣೆಯ ಸಮೀಪವೇ ಕೊಂದ ಪತಿ

ರಾಜಿ ಸಂಧಾನಕ್ಕೆ ಬಂದ ಪತ್ನಿಯನ್ನು ಪತಿ ಪೊಲೀಸ್ ಠಾಣೆಯ ಬಳಿಯೇ ಕೊಚ್ಚಿ ಕೊಂದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕರನಂಜಿಪುರದ ವಿದ್ಯಾ ಮೃತಳು, ಸೋಮವಾರಪೇಟೆಯ ಗಿರೀಶ್ ಆರೋಪಿ.ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ಅಕ್ರಮ ಸಂಬಂಧ: ಪತ್ನಿಯನ್ನು ಪೊಲೀಸ್ ಠಾಣೆಯ ಸಮೀಪವೇ ಕೊಂದ ಪತಿ
ಆರೋಪಿ ಗಿರೀಶ್​
Updated By: ವಿವೇಕ ಬಿರಾದಾರ

Updated on: Jun 03, 2025 | 10:18 PM

ಚಿಕ್ಕಬಳ್ಳಾಪುರ, ಜೂನ್​ 03: ರಾಜಿ ಸಂಧಾನಕ್ಕೆ ಬಂದಿದ್ದ ಪತ್ನಿಯನ್ನು ಪೊಲೀಸ್ ಠಾಣೆಯ (Police Station) ಸಮೀಪವೇ ಪತಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಕರನಂಜಿಪುರದ ನಿವಾಸಿ ವಿದ್ಯಾ ಮೃತ ದುರ್ದೈವಿ. ಸೋಮವಾರಪೇಟೆ (Somwarpet) ನಿವಾಸಿ ಗಿರೀಶ್​ ಕೊಲೆ ಮಾಡಿದ ಆರೋಪಿ. 8 ವರ್ಷಗಳ ಹಿಂದೆ ಗಿರೀಶ್ ಮತ್ತು ವಿದ್ಯಾ ವಿವಾಹವಾಗಿತ್ತು. ಆದರೆ, ವಿದ್ಯಾರಿಗೆ ದೊಡ್ಡಮೂಡಹಳ್ಳಿ ನಿವಾಸಿ ಶ್ರೀನಾಥ್ ಜೊತೆ ಅಕ್ರಮ ಸಂಬಂಧವಿತ್ತು. ಮೂರು ತಿಂಗಳ ಹಿಂದೆ ಶ್ರೀನಾಥ್ ಜೊತೆ ವಿದ್ಯಾ ಓಡಿ ಹೋಗಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಚಾಮರಾಜನಗರ (Chamrajanagar) ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಫ್​ಐಆರ್ ದಾಖಲಾದ ನಾಲ್ಕೇ ದಿನಕ್ಕೆ ಕೊಯಮತ್ತೂರಿನಲ್ಲಿದ್ದ ವಿದ್ಯಾ ಹಾಗೂ ಪ್ರಿಯಕರ ಶ್ರೀನಾಥ್​ರನ್ನು ಪೊಲೀಸರು ಠಾಣೆಗೆ ಕರೆ ತಂದು ಬುದ್ದಿವಾದ ಹೇಳಿದ್ದರು. ಆಗ, ವಿದ್ಯಾ ತನ್ನ ಪತಿ ಜೊತೆ ಹೋಗಲು ನಿರಾಕರಿಸಿದ್ದರು. ಹೀಗಾಗಿ, ವಿದ್ಯಾರನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಮಂಗಳವಾರ ಗಿರೀಶ್​ ಮತ್ತು ವಿದ್ಯಾರನ್ನು ಠಾಣೆಗೆ ಕರೆಸಿಕೊಂಡು ಬುದ್ದಿವಾದ ಸಹ ಹೇಳಲಾಗಿತ್ತು. ಆದರೆ, ಠಾಣೆಯಿಂದ ಆಚೆ ಬರುತ್ತಿದ್ದಂತೆ ಪತಿ ಗಿರೀಶ್​ ಪತ್ನಿ ವಿದ್ಯಾರನ್ನು ಕೂಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಪ್ರೇಯಸಿಗೆ ಸ್ಕ್ರೂಡ್ರೈವರ್​​ನಿಂದ 18 ಬಾರಿ ಇರಿದು ಕೊಂದ ಪ್ರೇಮಿ

ಗಿರೀಶ್​ ಮತ್ತು ವಿದ್ಯಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿದ್ಯಾ ಅನ್ಯ ಜಾತಿಯ ಶ್ರೀನಾಥ್ ಜೊತೆ ಪರಾರಿಯಾಗಿದ್ದರ ಪರಿಣಾಮ ಪತಿ ಗಿರೀಶ್ ಏರಿಯಾದಲ್ಲಿ ತಲೆ ಎತ್ತಿಕೊಂಡು ತಿರುಗಲು ಸಾಧ್ಯವಾಗಲಿಲ್ಲವಂತೆ. ಅವಮಾನದಿಂದ ಗಿರೀಶ್ ಖುದ್ದು ಹೋಗಿದ್ದನಂತೆ. ಸೋಮವಾರ (ಜೂ.02) ರಾತ್ರಿ ಮಹಿಳಾ ಸಾಂತ್ವಾನ ಕೇಂದ್ರದ ಬಳಿ ಹೋಗಿ ಮೊಬೈಲ್ ವಿಚಾರಕ್ಕೆ ಗಿರೀಶ್ ಪತ್ನಿ ವಿದ್ಯಾ ಜೊತೆ ಕ್ಯಾತೆ ತೆಗೆದಿದ್ದನು. ಆಗ, ವಿದ್ಯಾ 112 ಗೆ ಕರೆ ಮಾಡಿ ದೂರು ನೀಡಿದ್ದರು. ಸ್ಥಳಕ್ಕೆ ತೆರಳಿದ್ದ ಪೊಲೀಸರು ಗೀರಿಶ್​ಗೆ ವಾರ್ನ್ ಮಾಡಿ ಇಂದು (ಜೂ.03) ಠಾಣೆಗೆ ಬರುವಂತೆ ಸೂಚಿಸಿದ್ದರು. ಇಂದು ಪೊಲೀಸ್ ಠಾಣೆಗೆ ಬಂದು ವಾಪಸ್​ ತೆರಳುವಾಗ ಕೊಲೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 pm, Tue, 3 June 25