ಇಡ್ಲಿಗುರು ಹೋಟೆಲ್ ಮಾಲೀಕ ಕಾರ್ತಿಕ್ ವಶ​: ಮುಂಬೈನಿಂದ ಕರೆತಂದು ವಿಚಾರಣೆ

| Updated By: ಆಯೇಷಾ ಬಾನು

Updated on: Feb 18, 2024 | 2:39 PM

ಇಡ್ಲಿಗುರು ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ನಂಬಿಸಿ, ಚೇತನ್ ಎಂಬುವವರಿಗೆ ವಂಚಿಸಿದ ಆರೋಪ ಕೇಳಿಬಂದಿತ್ತು. ಈ ಕುರಿತು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿ, ಅವರ ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಇದೀಗ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟು ಕಳಿಸಲಾಗಿದೆ.

ಇಡ್ಲಿಗುರು ಹೋಟೆಲ್ ಮಾಲೀಕ ಕಾರ್ತಿಕ್ ವಶ​: ಮುಂಬೈನಿಂದ ಕರೆತಂದು ವಿಚಾರಣೆ
ಇಡ್ಲಿ ಗುರು ಹೋಟೆಲ್​ ಮಾಲೀಕ ವಶ
Follow us on

ಬೆಂಗಳೂರು, ಫೆ.14: ಫ್ರಾಂಚೈಸಿ ಹೆಸರಿನಲ್ಲಿ ವಂಚನೆ ಸಂಬಂಧ ಇಡ್ಲಿಗುರು(Idly guru) ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿ  ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು(Kamakshipalya Police) ಮುಂಬೈನಲ್ಲಿ ವಶಕ್ಕೆ ಪಡೆದು ಕರೆತಂದು ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ. ಇನ್ನು ಫ್ರಾಂಚೈಸಿ ನೀಡುವುದಾಗಿ ನಂಬಿಸಿ ಚೇತನ್ ಎಂಬುವವರಿಗೆ ವಂಚಿಸಿದ್ದಾಗಿ ಆರೋಪ ಕೇಳಿಬಂದಿದ್ದು, ಈ ಕುರಿತು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.

ಎಫ್​ಐಆರ್​ ದಾಖಲಾಗುತ್ತಿದ್ದಂತೆ ಎಸ್ಕೇಪ್​

ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ‌ರು. ಚೇತನ್ ಅವರನ್ನ ನಂಬಿಸಿದ್ದ ಆರೋಪಿಗಳು, ಆತನ ಬಳಿ ಬರೊಬ್ಬರಿ ಮೂರು ಲಕ್ಷ ರೂ. ಪಡೆದಿದ್ದರು. ಅಷ್ಟೇ ಅಲ್ಲ, ಫುಡ್ ಕಾರ್ಟ್ ತಂದು ನಿಲ್ಲಿಸಿ. ಅದು ಸ್ವಲ್ಪ ದಿನಗಳ ಬಳಿಕ ವ್ಯಾಪಾರ ಆಗುತ್ತಿಲ್ಲ ಎಂದು ಬೇರೆಡೆ ವ್ಯಾಪಾರ ಮಾಡೋಣ ಎಂದು ಶಿಫ್ಟ್ ಮಾಡಿದ್ದರು. ನಂತರ ಕಮಿಷನ್ ನೀಡುವುದಾಗಿ ಹೇಳಿ, ಯಾವುದೇ ಕಮಿಷನ್ ನೀಡದೆ ವಂಚನೆ ಮಾಡಿದ್ದಾರಂತೆ. ಇದೀಗ ಅಂಗಡಿಗಾಗಿ ಖರ್ಚಾದ ಹಣವನ್ನೂ ನೀಡದೆ ಮೋಸ ಎಸಗಿದ್ದಾರೆ. ಇದೆಲ್ಲವಾದ ಬಳಿಕ ಆರೋಪಿಗಳನ್ನ ಭೇಟಿಯಾಗಿ ವಿಚಾರಿಸಿದಾಗ ಜೀವ ಬೆದರಿಕೆ ಹಾಕಿದ್ದರು ಎಂದು ಕೇಸ್ ದಾಖಲಾಗಿತ್ತು. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ:ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ; 60 ಜನರಿಗೆ 15 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ ಗ್ಯಾಂಗ್ ಬಂಧನ

ಪುಷ್ಪ ಸಿನಿಮಾ ಮಾದರಿಯಲ್ಲಿ ಕ್ಯಾಂಟರ್​ನಲ್ಲಿ ಗಾಂಜಾ ಸಾಗಿಸುತ್ತಿದ್ದ ಐನಾತಿಗಳು ಲಾಕ್

ಚಾಮರಾಜನಗರ: ಪುಷ್ಪ ಸಿನಿಮಾ ಮಾದರಿಯಲ್ಲಿ ಕ್ಯಾಂಟರ್​ನಲ್ಲಿ 221 ಕೆಜಿ ಗಾಂಜಾ ಸಾಗಿಸುತ್ತಿದ್ದ ಖದೀಮರನ್ನು ಪೊಲೀಸರು ಲಾಕ್​ ಮಾಡಿದ್ದಾರೆ. ಕ್ಯಾಂಟರ್​ನಲ್ಲಿ ಫ್ಲೈಡ್ ಶೀಟ್​ಗಳ 4 ಚೀಲಗಳ ಮಧ್ಯೆ ಗಾಂಜಾ ಅಡಗಿಸಿಟ್ಟಿದ್ದರು. ಇನ್ನು ಚಾಮರಾಜನಗರ ಇತಿಹಾಸದಲ್ಲೇ ಮೊದಲ ಬಾರಿಗೆ 1 ಕೋಟಿ 10 ಲಕ್ಷ ಮೌಲ್ಯದ 221 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಖದೀಮರು ನೆರೆಯ ರಾಜ್ಯ ಆಂಧ್ರದಿಂದ ಕೊಳ್ಳೆಗಾಲ ಮಾರ್ಗವಾಗಿ ಹನೂರಿಗೆ ತೆರಳುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ತಡ ರಾತ್ರಿ ದಾಳಿ ನಡೆಸಿದ ಕೊಳ್ಳೆಗಾಲ ಗ್ರಾಮಾಂತರ ಪೊಲೀಸರು, ಸಿನಿಮೀಯ ಮಾದರಿಯಲ್ಲಿ ಕ್ಯಾಂಟರ್, ಚೇಸ್ ಮಾಡಿ ಅಡ್ಡ ಹಾಕಿದ್ದಾರೆ.

ಇದರಿಂದ ಎಚ್ಚೆತ್ತ ಆರೋಪಿಗಳು, ಪೊಲೀಸರ ಸುಳಿವು ಸಿಗುತ್ತಿದ್ದಂತೆ ಮಾಲು ಸಮೇತ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಬರೊಬ್ಬರಿ 10 ಕಿಲೋ ಮೀಟರ್ ವಾಹನವನ್ನ ಪೊಲೀಸರು ಚೇಸ್ ಮಾಡಿ ಅಡ್ಡ ಹಾಕಿ ಪರಿಶೀಲಿಸಿದಾಗ ಫ್ಲೇವುಡ್ ಶೀಟ್ ಬಾಕ್ಸ್ ಗಳ ಮಧ್ಯೆ ಇದ್ದ 4 ಚೀಲ ಗಾಂಜಾ ಚೀಲ ಪತ್ತೆಯಾಗಿದೆ. ಸದ್ಯ ಆರೋಪಿಗಳಾದ ಸೆಂದಿಲ್ ಕುಮಾರ್, ರವಿ ಕುಮಾರ್, ಉಮಾ ಶಂಕರ್ ಹಾಗೂ ವಿನಾಯಕನನ್ನ ಕೊಳ್ಳೆಗಾಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳನ್ನ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Wed, 14 February 24