ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ; 60 ಜನರಿಗೆ 15 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ ಗ್ಯಾಂಗ್ ಬಂಧನ

ಆ ಯುವಕರ ಗುಂಪು ಸುಲಭವಾಗಿ ಹಣ ಮಾಡಲು ಕೆಲಸ ಹುಡುಕುವವರನ್ನೇ ಟಾರ್ಗೆಟ್ ಮಾಡಿದ್ದರು, ಬಿಬಿಎಂಪಿಯಲ್ಲಿ ಕೆಲಸ ಕೊಡಿಸ್ತಿವಿ, ನಿವೇಶನ ಕೊಡಿಸ್ತೀವಿ ಅಂತೇಳಿ ಅಮಾಯಕರನ್ನ ವಂಚಿಸಿ ಹಣ ಪೀಕ್ತಿದ್ದರು. ಇದೀಗ ಆ ಮೂವರ ಗ್ಯಾಂಗ್ ಲಾಕ್ ಆಗಿದೆ‌. ಕೆಲಸ ಕೊಡಿಸೋದಾಗಿ ನಂಬಿಸಿ 8 ರಿಂದ 10 ಸಾವಿರ ಹಣ ಪಡೆದುಕೊಂಡು ನಂತರ ಎಸ್ಕೇಪ್ ಆಗುತ್ತಿದ್ದರು. ಹೀಗೆ 60 ಕ್ಕೂ ಹೆಚ್ಚು ಅಮಾಯರಿಗೆ ವಂಚಿಸಿ 15 ಲಕ್ಷ ಹಣವನ್ನು ವಂಚಿಸಿದ್ದಾರೆಂದು ತನಿಖೆಯಲ್ಲಿ ಗೊತ್ತಾಗಿದೆ.

ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ; 60 ಜನರಿಗೆ 15 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ ಗ್ಯಾಂಗ್ ಬಂಧನ
ಸಾಂದರ್ಭಿಕ ಚಿತ್ರ
Follow us
Shivaprasad
| Updated By: ಆಯೇಷಾ ಬಾನು

Updated on: Feb 07, 2024 | 3:00 PM

ಬೆಂಗಳೂರು, ಫೆ.07: ಬಿಬಿಎಂಪಿಯಲ್ಲಿ (BBMP) ಕೆಲಸ ಕೊಡಿಸುವುದಾಗಿ ಹೇಳಿ 60 ಜನರಿಗೆ 15 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ (Cheating) ಘಟನೆ ನಡೆದಿದೆ. ದೀಪಕ್, ಹರೀಶ್ ಸೇರಿದಂತೆ ಇನ್ನು ಕೆಲ ಸ್ನೇಹಿತರು ಸೇರಿಕೊಂಡು ಯುವಕರಿಗೆ, ಮಹಿಳೆಯರಿಗೆ ಬಿಬಿಎಂಪಿ, ಸಬ್ಸಿಡಿ ಹಣ ಸಿಗುತ್ತೆ ಕಾರು, ಸೈಟ್, ಮನೆ ಕೊಡಿಸುವ ನೆಪದಲ್ಲಿ ವಂಚಿಸ್ತಿದ್ದರು. ಅಮಾಯಕ ಹೆಂಗಸರು, ಗೃಹಿಣಿಯರ ನಂಬರ್ ಪಡೆದುಕೊಂಡು ಬಿಬಿಎಂಪಿಯಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ 8 ರಿಂದ 10 ಸಾವಿರ ಹಣ ಪಡೆದುಕೊಂಡು ನಂತರ ಎಸ್ಕೇಪ್ ಆಗುತ್ತಿದ್ದರು. ಹೀಗೆ 60 ಕ್ಕೂ ಹೆಚ್ಚು ಅಮಾಯರಿಗೆ ವಂಚಿಸಿ 15 ಲಕ್ಷ ಹಣವನ್ನು ವಂಚಿಸಿದ್ದಾರೆಂದು ತನಿಖೆಯಲ್ಲಿ ಗೊತ್ತಾಗಿದೆ. ಇದೀಗ ಈ ಆರೋಪಿಗಳ ಗ್ಯಾಂಗ್ ಕಂಬಿ ಹಿಂದೆ ಬಿದ್ದಿದೆ.

ಇನ್ನು ಕಾರು ಸೇರಿದಂತೆ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ದೀಪಕ್, ತೇಜಸ್ ಮತ್ತು ಭರತ್ ಈ ಮೂವರು‌ ಸಹ ಆರ್.ಆರ್‌ ನಗರ, ಹನುಮಂತನಗರ ಸೇರಿಸಿದಂತೆ ಅನೇಕ ಕಡೆಗಳಲ್ಲಿ ಮನೆ ಮುಂದೆ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಕಾರು, ಬೈಕ್​ಗಳನ್ನು ನಕಲಿ ಕೀ ಬಳಸಿ ಕ್ಷಣಾರ್ಧದಲ್ಲಿ ಎಗರಿಸುತ್ತಿದ್ದರು. ಇದೀಗ ಈ ಮೂವರಿಂದ ಹತ್ತು ಲಕ್ಷ ಮೌಲ್ಯದ 5 ಕಾರು ಮತ್ತು 2 ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕಚೇರಿಯೊಳಗೆ ನುಗ್ಗಲು, ವಿಧಾನಸೌಧದ ದಕ್ಷಿಣ ದ್ವಾರಕ್ಕೆ ಬೀಗ ಹಾಕಲು ಯತ್ನಿಸಿದ ಅಶೋಕ್​, ವಿಜಯೇಂದ್ರ

ಇನ್ನು ಕೆ.ಆರ್ ಪುರಂ ಪೊಲೀಸರು ‌ಚೈನ್ ಸ್ನ್ಯಾಚ್ ಮಾಡುತ್ತಿದ್ದ ಪ್ರಜ್ವಲ್ ಎಂಬ ಖದೀಮನೊಬ್ಬನನ್ನು ಬಂಧಿಸಿದ್ದಾರೆ. ಕಳೆದ ಜನವರಿ 11ರಂದು ಬೆಳಗ್ಗಿನ ಜಾವ ಮಹಿಳೆಯೊಬ್ಬರು ಒಬ್ಬರೇ ಹೋಗುವಾಗ ಈ ಪ್ರಜ್ವಲ್ ಮತ್ತು ಈತನ ಸಹಚರರು ಅವರ ಕತ್ತಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಈತನನ್ನು ವಶಕ್ಕೆ ಪಡೆದು ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಅದೇನೆ ಇರಲಿ ಒಟ್ನಲ್ಲಿ ಬಿಬಿಎಂಪಿ, ಬಿಡಿಎ, ಸಬ್ಸಿಡಿ ಹಣ, ಕಾರು ಸೈಟ್, ಮನೆ ಕೊಡಿಸುವ ನೆಪದಲ್ಲಿ ವಂಚಿಸ್ತಿದ್ದ ಗ್ಯಾಂಗ್ ಮತ್ತಷ್ಟು ಜನರಿಗೆ ವಂಚಿಸಿರುವ ಆರೋಪ ಇದ್ದು ಆರೋಪಿಗಳಾದ ದೀಪಕ್ ಮತ್ತು ಹರೀಶ್​ನನ್ನು ಮತ್ತಷ್ಟು ತನಿಖೆಗೆ ಒಳಪಡಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ