ಚಾಮರಾಜನಗರ: ವರದಕ್ಷಿಣೆ ನೀಡಿಲ್ಲವೆಂದು ಮಾವನ ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್​ಗೆ ಬೆಂಕಿ ಹಚ್ಚಿದ ಅಳಿಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 20, 2024 | 5:29 PM

ಚಾಮರಾಜನಗರ(Chamarajanagar)ದ ಗಾಳಿಪುರದ ಅಬ್ದುಲ್ ಕಲಾಂ ನಗರದಲ್ಲಿ ಮಾವ ವರದಕ್ಷಿಣೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನೆ ಮುಂದೆ ಪಾರ್ಕ್ ಮಾಡಿದ್ದ ಎರಡು ಬೈಕ್​ಗಳಿಗೆ ಅಳಿಯ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಸದ್ಯ ಅಳಿಯನ ಆಟಾಟೋಪಕ್ಕೆ ತಕ್ಕ ಶಾಸ್ತಿ ಮಾಡುವಂತೆ ನೊಂದ ಕುಟುಂಬದವರು ಮನವಿ ಮಾಡಿದ್ದಾರೆ.

ಚಾಮರಾಜನಗರ: ವರದಕ್ಷಿಣೆ ನೀಡಿಲ್ಲವೆಂದು ಮಾವನ ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್​ಗೆ ಬೆಂಕಿ ಹಚ್ಚಿದ ಅಳಿಯ
ವರದಕ್ಷಿಣೆ ನೀಡಿಲ್ಲವೆಂದು ಮಾವನ ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್​ಗೆ ಬೆಂಕಿ ಹಚ್ಚಿದ ಅಳಿಯ
Follow us on

ಚಾಮರಾಜನಗರ, ಜೂ.20: ಮಾವ ವರದಕ್ಷಿಣೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನೆ ಮುಂದೆ ಪಾರ್ಕ್ ಮಾಡಿದ್ದ ಎರಡು ಬೈಕ್​ಗಳಿಗೆ ಅಳಿಯ ಬೆಂಕಿ ಹಚ್ಚಿದ ಘಟನೆ ಚಾಮರಾಜನಗರ(Chamarajanagar)ದ ಗಾಳಿಪುರದ ಅಬ್ದುಲ್ ಕಲಾಂ ನಗರದಲ್ಲಿ ನಡೆದಿದೆ. ಕಳೆದ ಏಳು ತಿಂಗಳ ಹಿಂದೆಯಷ್ಟೇ ಹತೀಜಾ ಖೂಬ್ರಳ ಜತೆ ಸಲ್ಮಾನ್ ಮೊಹಮ್ಮದ್ ಷರೀಫ್ ಎಂಬಾತ ಮದುವೆ ಆಗಿದ್ದ. ಇದಾದ ಬಳಿಕ ಹಣ ಹಾಗೂ ಚಿನ್ನಾಭರಣಕ್ಕೆ ಡಿಮ್ಯಾಂಡ್ ಮಾಡಿದ್ದ.

ಮಾವನ ಮನೆ ಮುಂದೆ ನಿಲ್ಲಿಸಿದ್ಥ ಬೈಕ್​ಗೆ ಬೆಂಕಿ

ವರದಕ್ಷಿಣೆ ನೀಡದ ಹಿನ್ನಲೆ ತಡರಾತ್ರಿ ಮಾವನ ಮನೆ ಮುಂದೆ ನಿಲ್ಲಿಸಿದ್ಥ ಎರಡು ಬೈಕ್​ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ. ಈ ಹಿನ್ನಲೆ ಅಳಿಯನಿಗೆ ಬುದ್ದಿವಾದ ಹೇಳಲು ಹೋದ ಅತ್ತೆಯ ಕೈಯನ್ನೂ ಮುರಿದು ಹಾಕಿದ್ದಾನೆ. ಮನೆಯ ಮುಂದೆ ನಿಂತಿದ್ದ ಬೈಕ್ ಧಗ ಧಗಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿಂದೆಯೇ ಅಳಿಯನ ವಿರುದ್ದ ಚಾಮರಾಜನಗರ ಟೌನ್ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ವಿಚಾರಣೆ ನಡೆಸಿರಲಿಲ್ಲ. ಸದ್ಯ ಅಳಿಯನ ಆಟಾಟೋಪಕ್ಕೆ ತಕ್ಕ ಶಾಸ್ತಿ ಮಾಡುವಂತೆ ನೊಂದ ಕುಟುಂಬದವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ವರದಕ್ಷಿಣೆ ತಗೊಂಡು ಬಾ, ಇಲ್ಲದಿದ್ದರೆ ತಮ್ಮನ ಜೊತೆ ಮಲಗು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ

ಚಿಕ್ಕಮಗಳೂರು: ಕಾಡಾನೆಗಳ ಹಾವಳಿ ಜಿಲ್ಲೆಯಲ್ಲಿ ಮಿತಿಮೀರಿದೆ. ಅದರಲ್ಲೂ ಕಳಸ ತಾಲೂಕಿನ ತನೋಡಿ, ಆಳಗೋಡು ಗ್ರಾಮದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ಕಾಡಾನೆಗಳ ದಾಳಿಯಿಂದ ಅಪಾರ ಮೌಲ್ಯದ ಕಾಫಿ, ಅಡಕೆ, ಬಾಳೆ ನಾಶವಾಗಿದೆ. ಇನ್ನು ಕಾಡಾನೆ ದಾಳಿಗೆ ತೋಟಕ್ಕೆ ಹೋಗಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಈ ಹಿನ್ನಲೆ ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Thu, 20 June 24