Chamarajanagar News: ಹಳೆ ದ್ವೇಷಕ್ಕೆ ಟೊಮೆಟೊ ಬೆಳೆ ನಾಶ, ಮುಗಿಲು ಮುಟ್ಟಿದ ಅನ್ನದಾತನ ಆಕ್ರಂದನ
ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಹಳೆ ವೈಶಮ್ಯ ಹಿನ್ನಲೆ ತೋಟಕ್ಕೆ ನುಗ್ಗಿ ಟೊಮೆಟೊ ಬೆಳೆಯನ್ನ ನಾಶಪಡಿಸಿದ ಘಟನೆ ನಡೆದಿದೆ. ವಿಷಯ ತಿಳಿದ ರೈತ ಜಮೀನಿನಲ್ಲಿ ಹೊರಳಾಡಿ ಕಣ್ಣೀರು ಹಾಕುತ್ತಿದ್ದಾನೆ.
ಚಾಮರಾಜನಗರ, ಆ.3: ಹಳೆ ವೈಶಮ್ಯ ಹಿನ್ನಲೆ ತೋಟಕ್ಕೆ ನುಗ್ಗಿ ಟೊಮೆಟೊ(Tomato) ಬೆಳೆಯನ್ನ ನಾಶಪಡಿಸಿದ ಘಟನೆ ಚಾಮರಾಜನಗರ (Chamarajanagar) ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜು ಎಂಬುವವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆಯನ್ನು ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ ದುಷ್ಕರ್ಮಿಗಳು ಕಿತ್ತು ಹಾಕಿದ ಘಟನೆ ನಡೆದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊಗೆ ಶತಕ ದಾಟಿದೆ. ಈ ವೇಳೆ ಕಷ್ಟಪಟ್ಟು ಬೆಳೆದ ಟೊಮೆಟೊ ನಾಶವಾದ ಸುದ್ದಿ ತಿಳಿದ ಮಾಲೀಕರು ಜಮೀನಿನಲ್ಲಿ ಮಲಗಿ ಹೊರಳಾಡಿ ಕಣ್ಣೀರು ಹಾಕುತ್ತಿದ್ದು, ಅನ್ನದಾತನ ಆಕ್ರಂದನ ಮುಗಿಲು ಮುಟ್ಟಿದೆ.
ರೈತನ ಆಕ್ರಂದನ ನೋಡಿ ಮಮ್ಮಲ ಮರಗಿದ ಗ್ರಾಮಸ್ಥರು
ಹೌದು, ಇದೇ ಮೊದಲ ಬಾರಿಗೆ ಇಷ್ಟೊಂದು ಬೆಲೆ ಟೊಮೆಟೊಗೆ ಬಂದಿದೆ. ಪ್ರತಿ ಬಾರಿ ಸಾಲ ಮಾಡಿ ಬೆಳೆಯುತ್ತಿದ್ದ ಬೆಳೆಗೆ ಮೂರು ಮತ್ತೊಂದು ಬೆಲೆ ಸಿಗುತ್ತಿತ್ತು. ಆದರೀಗ ಎಷ್ಟು ವರ್ಷಗಳ ಬಳಿಕ ಅತ್ಯಧಿಕ ಬೆಲೆ ಬಂದಿದೆ. ಈ ಹಿನ್ನಲೆ ಈ ಬಾರಿಯಾದರೂ ಲಾಭ ಗಳಿಸಬೇಕೆಂಬ ಆಸೆ ಹೊತ್ತಿದ್ದ ರೈತನಿಗೆ, ದುಷ್ಕರ್ಮಿಗಳು ಮಾಡಿದ ಕೃತ್ಯದಿಂದ ಸಿಡಿಲು ಬಡಿದಂತಾಗಿದೆ. ಕಷ್ಟಪಟ್ಟು ಬೆಳೆದಿದ್ದ ಟೊಮ್ಯಾಟೊ ಗಿಡವನ್ನು ಬುಡಸಮೇತ ಕತ್ತರಿಸಿ ಹಾಕಿದ್ದಾರೆ. ಈ ಹಿನ್ನಲೆ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೊ ನಾಶವಾಗಿದ್ದು, ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Tomato Price Hike: ಟೊಮೆಟೊ ಬೆಲೆ ಏರಿಕೆ; ಲಕ್ಷ, ಕೋಟಿ ರೂಪಾಯಿಗಳಲ್ಲಿ ಆದಾಯ ಗಳಿಸುತ್ತಿದ್ದಾರೆ ಕರ್ನಾಟಕದ ರೈತರು
ಒಂದುವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು 15 ಲಕ್ಷ ಲಾಭ ಬರುವ ನಿರೀಕ್ಷೆ
ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮದ ಬಸವನಗೌಡ ತಿಮ್ಮನಗೌಡರ ಎಂಬ ರೈತ ತನ್ನ ಒಂದುವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು 15 ಲಕ್ಷ ಲಾಭ ಬರುವ ನಿರೀಕ್ಷೆಯಲ್ಲಿ ಫುಲ್ ಖುಷ್ ಆಗಿದ್ದಾನೆ. ಹೌದು, ಜಿಲ್ಲೆಯಲ್ಲಿ ಬಹುತೇಕ ರೈತರು ಬೆಳೆದ ಟೊಮೆಟೊ ನಾಶವಾಗಿದ್ದು, ಈಗ ರೈತರು ಮತ್ತೆ ನಾಟಿ ಮಾಡುತ್ತಿದ್ದಾರೆ. ಆದರೆ, ಈಗಾಗಲೇ ಟೊಮೆಟೊ ಬೆಳೆದು ತಮ್ಮ 50 ವರ್ಷದ ಕೃಷಿ ಕಾಯಕದಲ್ಲಿ ಇಷ್ಟೊಂದು ಬೆಲೆ ಕಂಡಿಲ್ಲವೆಂದು ರೈತ ಹೇಳುತ್ತಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:47 am, Thu, 3 August 23