AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಣ್ಯ ಗಡಿನಾಡು ಚಾಮರಾಜನಗರದಲ್ಲಿ ಮಹಿಳಾ ಅಧಿಕಾರಿವೃಂದದಿಂದ ವಿನೂತನವಾಗಿ ಅರಣ್ಯ ಹುತಾತ್ಮರ ದಿನಾಚರಣೆ

National Forest Martyrs Day: ನ್ಯಾಯಾಧೀಶೆ ಭಾರತಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಬಿ.ಆರ್.ಟಿ ದೀಪಾ ಕಾಂಟ್ರಾಕ್ಟರ್ ಭಾಗಿಯಾಗಿದ್ದು ವಿಶೇಷವಾಗಿತ್ತು. ಮಹಿಳಾ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಹುತಾತ್ಮರ ದಿನಾಚರಣೆ ಸಂದರ್ಭ ವಿಶೇಷ ಸಂದೇಶ ನೀಡಿದರು. ನ್ಯಾಯಾಧೀಶರು, ಜಿಲ್ಲಾಧಿಕಾರಿ, ಎಸ್.ಪಿ ಹಾಗೂ ಡಿಸಿಎಫ್ ಕೂಡ ಮಹಿಳೆಯರೆ ಎಂಬುದು ಗಮನಾರ್ಹ.

ಅರಣ್ಯ ಗಡಿನಾಡು ಚಾಮರಾಜನಗರದಲ್ಲಿ ಮಹಿಳಾ ಅಧಿಕಾರಿವೃಂದದಿಂದ ವಿನೂತನವಾಗಿ ಅರಣ್ಯ  ಹುತಾತ್ಮರ ದಿನಾಚರಣೆ
ಅರಣ್ಯ ಗಡಿನಾಡು ಚಾಮರಾಜನಗರದಲ್ಲಿ ಅರಣ್ಯ ಹುತಾತ್ಮರ ದಿನಾಚರಣೆ
ಸೂರಜ್ ಪ್ರಸಾದ್ ಎಸ್.ಎನ್
| Updated By: ಸಾಧು ಶ್ರೀನಾಥ್​|

Updated on: Sep 11, 2023 | 10:47 AM

Share

ಚಾಮರಾಜನಗರ, ಸೆಪ್ಟೆಂಬರ್​ 11: ಅರಣ್ಯ ಗಡಿ ನಾಡು ಚಾಮರಾಜನಗರದಲ್ಲಿ ಇಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ (National Forest Martyrs Day) ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲೆಯ ಉನ್ನತ ಅಧಿಕಾರಿವೃಂದ ವಿನೂತನವಾಗಿ ಹುತಾತ್ಮರ ದಿನಾಚರಣೆ ಆಚರಿಸಿದರು. ಸೇವೆ ಸಲ್ಲಿಸುವ ವೇಳೆ ಮೃತಪಟ್ಟ ಅಧಿಕಾರಿಗಳ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ವೇದಿಕೆ ಮೇಲೆ ಮಹಿಳಾ ಅಧಿಕಾರಿಗಳು (Women Officers) ವಿಶೇಷವಾಗಿ ಭಾಗಿಯಾಗಿದ್ದರು. ಚಾಮರಾಜನಗರದ ಫಾರೆಸ್ಟ್ ನರ್ಸರಿ ಮೈದಾನದಲ್ಲಿ (Karnataka Forest Department) ಕಾರ್ಯಕ್ರಮ ನಡೆಯಿತು.

ನ್ಯಾಯಾಧೀಶೆ ಭಾರತಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಬಿ.ಆರ್.ಟಿ ದೀಪಾ ಕಾಂಟ್ರಾಕ್ಟರ್ ಭಾಗಿಯಾಗಿದ್ದು ವಿಶೇಷವಾಗಿತ್ತು. ಮಹಿಳಾ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಹುತಾತ್ಮರ ದಿನಾಚರಣೆ ಸಂದರ್ಭ ವಿಶೇಷ ಸಂದೇಶ ನೀಡಿದರು. ನ್ಯಾಯಾಧೀಶರು, ಜಿಲ್ಲಾಧಿಕಾರಿ, ಎಸ್.ಪಿ ಹಾಗೂ ಡಿಸಿಎಫ್ ಕೂಡ ಮಹಿಳೆಯರೆ ಎಂಬುದು ಗಮನಾರ್ಹ.

Also Read: ಮಂಗಳೂರಿನ ಮೋತಿ ಮಹಲ್ ಹೋಟೆಲ್​ ಸ್ವಿಮ್ಮಿಂಗ್ ಪೂಲ್​ನಲ್ಲಿ ಕೇರಳ ಬ್ಯಾಂಕ್‌ ಅಧಿಕಾರಿ ಮೃತದೇಹ ಪತ್ತೆ

ಚಾಮರಾಜನಗರ ಜಿಲ್ಲೆ ಮಹಿಳಾ ಸಾಕ್ಷರತೆಯಲ್ಲಿ ಹಿಂದುಳಿದಿದೆ ಎಂಬ ಮಾತಿದೆ. ನಾವು ಕೂಡ ಮಹಿಳೆಯರು, ನಾವು ಕಲಿತು ಉನ್ನತ ಸ್ಥಾನಕ್ಕೆ ಏರಿದ್ದೇವೆ. ಅದೇ ರೀತಿ ಹೆಣ್ಮಕ್ಕಳಿಗೂ ಸೂಕ್ತ ವಿದ್ಯಾಭ್ಯಾಸ ಸಿಗಬೇಕು ಅವರು ಕೂಡ ಎಲ್ಲರಂತೆ ಕಲಿಯಬೇಕು. ಮಹಿಳೆಯರು ಕೂಡ ಸಮಾನರು ಎಂಬ ಸಂದೇಶ ಸಾರಬೇಕು ಎಂದು ಕರೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ