ಇನ್ನು ಮಲೆ ಮಹದೇಶ್ವರ ಬೆಟ್ಟ ಮದ್ಯ ಮುಕ್ತ: ಇದು ಸಿಎಂ ಸಿದ್ದರಾಮಯ್ಯ ಕೊಡುಗೆ

| Updated By: ಸಾಧು ಶ್ರೀನಾಥ್​

Updated on: Feb 03, 2024 | 12:29 PM

ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಈ ಕುರಿತು ಚಾಮರಾಜನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಚಾರವನ್ನ ಪ್ರಸ್ತಾಪಿಸಿದ್ದರು. ಅಬಕಾರಿ ಇಲಾಖೆಯ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ರು. ಈಗ ಅಬಕಾರಿ ಇಲಾಖೆ ಸ್ಪೆಷಲ್ ಡ್ರೈವ್ ಅಭಿಯಾನದ ಮೂಲಕ ಮದ್ಯ ಮುಕ್ತ ಮಹದೇಶ್ವರ ಬೆಟ್ಟವನ್ನಾಗಿಸಲು ಮುಂದಾಗಿದ್ದಾರೆ.

ಇನ್ನು ಮಲೆ ಮಹದೇಶ್ವರ ಬೆಟ್ಟ ಮದ್ಯ ಮುಕ್ತ: ಇದು ಸಿಎಂ ಸಿದ್ದರಾಮಯ್ಯ ಕೊಡುಗೆ
ಇನ್ನು ಮಲೆ ಮಹದೇಶ್ವರ ಬೆಟ್ಟ ಮದ್ಯ ಮುಕ್ತ: ಸಿಎಂ ಸಿದ್ದರಾಮಯ್ಯ ಆರ್ಡರ್​​​
Follow us on

ತನ್ನ ಪವಾಡದಿಂದಲೇ ಹೆಸುರುವಾಸಿಯಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಈಗ ಮದ್ಯದ ಘಾಟು ಹೆಚ್ಚಾಗಿ ಸದ್ದು ಮಾಡ್ತಾ ಇದೆ. ಸ್ವತಃ ಸಿಎಂ ಸಿದ್ದರಾಮಯ್ಯ ಮಾದಪ್ಪನ ಸನ್ನಿಧಾನಕ್ಕೆ ಬಂದಾಗ ಈ ಕುರಿತು ಚರ್ಚೆ ನಡೆಸಿ ಅಬಕಾರಿ ಇಲಾಖೆಗೆ ಖಡಕ್ ವಾರ್ನಿಂಗ್ ನೀಡಿದ್ದರು. ಯಾವಾಗ ಸ್ವತಃ ಸಿಎಂ ಎಚ್ಚರಿಕೆ ನೀಡಿದ್ರೊ ಈಗ ಅಬಕಾರಿ ಇಲಾಖೆ ಫುಲ್ ಆಕ್ಟಿವ್ ಆಗಿದ್ದು ಮದ್ಯ ಮುಕ್ತ ಮಹದೇಶ್ವರ ಬೆಟ್ಟ ಮಾಡ್ಲಿಕ್ಕೆ ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.

ಮಲೆ ಮಹದೇಶ್ವರ ಬೆಟ್ಟ ಈ ಹೆಸ್ರು ಕೇಳಿದ್ರೆ ಸಾಕು.. ಶಿವನ ಭಕ್ತರು ಭಕ್ತಿ ಪರವಶವಾಗಿ ಬಿಡ್ತಾರೆ. ತನ್ನದೆ ಪವಾಡದಿಂದ ರಾಜ್ಯ ಹೊರ ರಾಜ್ಯದಿಂದ ಅಪಾರ ಭಕ್ತಗಣವನ್ನ ಹೊಂದಿರುವ ಈ ಪುಣ್ಯ ಕ್ಷೇತ್ರಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಾದಪ್ಪನ ಕೃಪೆಗೆ ಪಾತ್ರರಾಗುತ್ತಾರೆ. ಇಂತಹ ಪವಿತ್ರ ಸ್ಥಳದಲ್ಲಿ ಈಗ ಮದ್ಯದ ಘಾಟು ಹೆಚ್ಚಾಗುತ್ತಿದೆ.

ಪ್ರವಾಸಿಗರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಮೂಲಕ ಸ್ಥಳೀಯವಾಗಿ ಕೆಲ ಅಂಗಡಿ ವ್ಯಾಪಾರಸ್ಥರು ಅಕ್ರಮವಾಗಿ ಹಣ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಈ ಕುರಿತು ಚಾಮರಾಜನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಚಾರವನ್ನ ಪ್ರಸ್ತಾಪಿಸಿದ್ದರು. ಅಬಕಾರಿ ಇಲಾಖೆಯ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ರು. ಈಗ ಅಬಕಾರಿ ಇಲಾಖೆ ಸ್ಪೆಷಲ್ ಡ್ರೈವ್ ಅಭಿಯಾನದ ಮೂಲಕ ಮದ್ಯ ಮುಕ್ತ ಮಹದೇಶ್ವರ ಬೆಟ್ಟವನ್ನಾಗಿಸಲು ಮುಂದಾಗಿದ್ದಾರೆ.

Also Read: ಗ್ರಾಮಸ್ಥರೆಲ್ಲ ಸೇರಿ ದಲಿತ ಯುವಕನಿಗೆ ದೇವಸ್ಥಾನದಲ್ಲಿ ಜಾತ್ಯತೀತವಾಗಿ ಅದ್ದೂರಿ ಮದುವೆ ಮಾಡಿಸಿದರು! ಏನಿದರ ವಿಶೇಷ?

ಸಿಎಂ ಖಡಕ್ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಈಗ ಎಚ್ಚೆತ್ತ ಅಬಕಾರಿ ಇಲಾಖೆ ವಿಶೇಷ ತಂಡವನ್ನ ಮಾಡಿಕೊಂಡು ಸ್ಪೆಷಲ್ ಡ್ರೈವ್ ಮಾಡ್ತಾಯಿದೆ. ಅಕ್ರಮವಾಗಿ ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಕೇಸ್ ಬುಕ್ ಮಾಡುವ ಮೂಲಕ ಬಿಸಿ ಮುಟ್ಟಿಸಿದೆ. ಜೊತೆಗೆ ಮದ್ಯ ಮಾರಾಟಗಾರರ ಸಂಘದವರ ಜತೆ ಸಭೆ ನಡೆಸಿ ಯಾವುದೇ ಕಾರಣಕ್ಕೂ ಮಲೆ ಮಹದೇಶ್ವರ ಬೆಟ್ಟದ ಅಂಗಡಿ ಮಾಲೀಕರಿಗೆ ಲಿಕ್ಕರ್ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮದ್ಯ ಸರಬರಾಜು ಆಗದಂತೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಮದ್ಯ ಮುಕ್ತ ಮಹದೇಶ್ವರ ಬೆಟ್ಟವನ್ನಾಗಿ ಮಾರ್ಪಡಿಸಲು ಅಬಕಾರಿ ಇಲಾಖೆ ಮುಂದಾಗಿದ್ದು ಅಬಕಾರಿ ಇಲಾಖೆಯ ಈ ಕಾರ್ಯ ವೈಖರಿ ಎಷ್ಟರ ಮಟ್ಟಿಗೆ ಮುಂಬರುವ ದಿನಗಳಲ್ಲಿ ಪ್ರಭಾವ ಬೀರುವುದೋ ಕಾದು ನೋಡ್ಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ