ಚಾಮರಾಜನಗರ: ಕಿರುಕುಳಕ್ಕೆ ಬೇಸತ್ತು ಪಿಡಿಒ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಆದ್ರೆ ಮೃತಳ ಪೋಷಕರು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಅಳಿಯನೇ ಮಗಳ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾ. ಬಾಗಲಕೋಟೆ ಜಿಲ್ಲೆ ಜಮಖಂಡಿ ನಿವಾಸಿ. ಇವರಿಗೆ 3 ವರ್ಷದ ಹಿಂದೆ ಆನಂದ್ ಕಾಂಬ್ಳೆ ಜೊತೆ ವಿವಾಹವಾಗಿತ್ತು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೀರ್ಥ ಗ್ರಾಮದ ನಿವಾಸಿಯಾಗಿರುವ ಆನಂದ್, ಪಿಡಿಒ ಆಗಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತಿಯ ಪಿಡಿಒ ಆಗಿ ಕರ್ತವ್ಯ ನಿರ್ವಹಿಸ್ತಿದ್ದಾರೆ. ಇತ್ತೀಚೆಗೆ ಆನಂದ್ ತಮ್ಮ ಪತ್ನಿಗೆ ಕಿರುಕುಳ ನೀಡ್ತಿದ್ರಂತೆ. ಆಗಾಗ ಕುಡಿದು ಬಂದು ಕಿರುಕುಳ ನೀಡ್ತಿದ್ರಂತೆ. ಈ ವಿಚಾರವನ್ನ ವಿದ್ಯಾ ತಮ್ಮ ಮನೆಯವರಿಗೂ ಹೇಳಿದ್ದರಂತೆ. ಎರಡೂ ಮನೆಯವರು ಇಬ್ಬರಿಗೂ ಬುದ್ಧಿ ಹೇಳ್ತಿದ್ರೂ ಸಮಸ್ಯೆ ಬಗೆಹರಿದಿರಲಿಲ್ಲ. ಆದ್ರೆ, ಅದೇನಾಯ್ತೋ ಏನೋ ವಿದ್ಯಾ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಆತ್ಮಹತ್ಯೆಯಲ್ಲ, ಕೊಲೆ ಅಂತಾ ವಿದ್ಯಾ ಪೋಷಕರು ಆರೋಪಿಸಿದ್ದಾರೆ.
ಇನ್ನು, ವಿದ್ಯಾ ಪೋಷಕರು ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದ್ಯಾ ತಂದೆ ಚಿದಾನಂದ್, ವಿದ್ಯಾ ಪತಿ ಆನಂದ್ ಕಾಂಬ್ಳೆ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ರು, ಈಗಾಗ್ಲೇ ಆನಂದ್ ಕಾಂಬ್ಳೆಯನ್ನ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಇನ್ನು ಆನಂದ್ ಕುಟುಂಬದವರು ಇಬ್ಬರ ನಡುವೆ ಜಗಳ ಇದಿದ್ದನ್ನು ಒಪ್ಪಿಕೊಂಡಿದ್ದಾರೆ. ಆದ್ರೆ, ಜಗಳವಿದ್ರೂ ಇಬ್ಬರು ಚೆನ್ನಾಗಿದ್ರು ಅಂತಾ ಹೇಳ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೊಳ್ಳೇಗಾಲ ಪೊಲೀಸ್ರು, ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರ ಜಗಳದಲ್ಲಿ ಪತ್ನಿ ಬಲಿಯಾಗಿದ್ರೆ, ಇತ್ತ ಪುಟ್ಟ ಕಂದಮ್ಮ ತಬ್ಬಲಿಯಾಗಿದೆ.
ವರದಿ: ದಿಲೀಪ್, ಟಿವಿ9, ಚಾಮರಾಜನಗರ.
ಇದನ್ನೂ ಓದಿ: ಶಾರುಖ್ ಖಾನ್ 8 ಪ್ಯಾಕ್ ಬಾಡಿ ಫೋಟೋ ವೈರಲ್; ‘ಪಠಾಣ್’ ಚಿತ್ರದಲ್ಲಿ ಹೊಸ ಗೆಟಪ್
ಅಸ್ಪೃಷ್ಯತೆ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಹರಿಹಾಯ್ದ ತಿಮ್ಮಾಪುರ: ತಿರುಗೇಟು ಕೊಟ್ಟ ಸಿಸಿ ಪಾಟೀಲ