ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ಹೆಚ್ಚಾಯ್ತು ಗಾಂಜಾ ಘಮಲು; ಮಾಲು ಸಮೇತ ಲಾಕ್ ಆದ ಮೂವರು ಪೆಡ್ಲರ್​ಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 08, 2023 | 10:26 AM

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಭಿಷೇಕ್ (23), ಆದರ್ಶ(22), ಉದಯ್ ಕುಮಾರ್(22) ಬಂಧಿತ ಆರೋಪಿಗಳು.

ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ಹೆಚ್ಚಾಯ್ತು ಗಾಂಜಾ ಘಮಲು; ಮಾಲು ಸಮೇತ ಲಾಕ್ ಆದ ಮೂವರು ಪೆಡ್ಲರ್​ಗಳು
ಬಂಧಿತ ಆರೋಪಿಗಳು
Follow us on

ಚಾಮರಾಜನಗರ, ಆ.8: ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆಯನ್ನು ತಡೆಯಲು ರಾಜ್ಯ ಪೊಲೀಸರು ಟೊಂಕ ಕಟ್ಟಿ ನಿಂತಂತೆ ಕಾಣುತ್ತಿದೆ. ಹೌದು, ಇತ್ತೀಚೆಗೆ ಇಂತಹ ಅನೇಕ ಪ್ರಕರಣಗಳನ್ನು ಭೇಧಿಸುತ್ತಿರುವ ಪೊಲೀಸರು ಇದೀಗ ಚಾಮರಾಜನಗರ(Chamarajnagar) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಭಕ್ತರಿಗೆ ಮಾರಾಟ ಮಾಡಲು ಒಣ ಗಾಂಜಾ ತಂದಿದ್ದ ಯುವಕರನ್ನು ಮಾಲು ಸಮೇತ ಸೆರೆ ಹಿಡಿದಿದ್ದಾರೆ. ಅಭಿಷೇಕ್ (23), ಆದರ್ಶ(22), ಉದಯ್ ಕುಮಾರ್(22) ಬಂಧಿತ ಆರೋಪಿಗಳು.

190 ಗ್ರಾಂ ಗಾಂಜಾ ವಶಕ್ಕೆ

ಇನ್ನು ಈ ಬಂಧಿತರಿಂದ 190 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ಮಹದೇಶ್ವರ ಬೆಟ್ಟದ ಮುಡಿ ಶೆಡ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:Ganja: ಮಾಜಿ ರಣಜಿ ಕ್ರಿಕೆಟ್ ಆಟಗಾರನನ್ನು ಗಾಂಜಾ ಸಮೇತ ಕ್ಯಾಚ್​ ಹಿಡಿದ ತೆಲುಗು ಪೊಲೀಸರು.. ಎರಡೂ ತೆಲುಗು ರಾಜ್ಯಗಳಲ್ಲಿ 25 ವಂಚನೆ ಪ್ರಕರಣಗಳು

ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಮರಕ್ಕೆ ಡಿಕ್ಕಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ N.R ಪುರ‌ ತಾಲೂಕಿನ ಬಾಳೆಹೊನ್ನೂರು ಸಮೀಪದ C.K ಮಧುಗುಣಿ ಗ್ರಾಮದ ಬಳಿ ನಡೆದಿದೆ. ಗುದ್ದಿದ ರಭಸಕ್ಕೆ ಮರ ಬಸ್ಸಿನ ಮೇಲೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಚಾಲಕ ಸೇರಿದಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ಬಸ್​ ಹಾಸನ ಡಿಪೋಗೆ ಸೇರಿದ್ದು, N.R ಪುರದಿಂದ ಮೈಸೂರಿಗೆ ತೆರಳುತ್ತಿತ್ತು. ಈ ವೇಳೆ ದುರ್ಘಟನೆ ನಡೆದಿದೆ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ