ಬಿಜೆಪಿಯವರು ಜೆಡಿಎಸ್​ಗೆ ಒಳ್ಳೇ ಮಕ್ಮಲ್ ಟೋಪಿ ಹಾಕಿದ್ದಾರೆ: ವಿರೋಧ ಪಕ್ಷಗಳ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೇಯರ್, ಉಪಮೇಯರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದಾರೆ. ಬಿಜೆಪಿಯವರು ಜೆಡಿಎಸ್​ಗೆ ಒಳ್ಳೇ ಮಕ್ಮಲ್ ಟೋಕಿ ಹಾಕಿದ್ದಾರೆ ಎಂದಿದ್ದಾರೆ.

ಬಿಜೆಪಿಯವರು ಜೆಡಿಎಸ್​ಗೆ ಒಳ್ಳೇ ಮಕ್ಮಲ್ ಟೋಪಿ ಹಾಕಿದ್ದಾರೆ: ವಿರೋಧ ಪಕ್ಷಗಳ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 06, 2022 | 8:40 PM

ಚಾಮರಾಜನಗರ: ಮೈಸೂರು ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಗುಂಡ್ಲುಪೇಟೆಯಲ್ಲಿ ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೇಯರ್ ಚುನಾವಣೆಯಲ್ಲಿ ಜೆಡಿಎಸ್​ನವರು ಮಂಗಗಳಾಗಿದ್ದಾರೆ. ಮೇಯರ್, ಉಪಮೇಯರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದಾರೆ. ಬಿಜೆಪಿಯವರು ಜೆಡಿಎಸ್​ಗೆ ಒಳ್ಳೇ ಮಕ್ಮಲ್ ಟೋಕಿ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಕ್ಮಲ್ ಟೋಪಿ ಎರಡೂ ಸ್ಥಾನವನ್ನು ಹೊಡೆದುಕೊಂಡಿದ್ದಾರೆ. ಮೂರು ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿದ್ರೆ ಕಾಂಗ್ರೆಸ್​ ಅಧಿಕಾರಕ್ಕೆ ಬರ್ತಿತ್ತು. ಜೆಡಿಎಸ್​​ನವರು ಬಿಜೆಪಿ ಪಕ್ಷದ ಜೊತೆ ಹೋಗುವುದು ಜಾತ್ಯತೀತವಾ? ಜೆಡಿಎಸ್​ ಪಕ್ಷದವರಿಗೆ ರಾಜಕೀಯ ಘನತೆ ಇಲ್ಲ. ಜೆಡಿಎಸ್​ ಅವಕಾಶವಾದಿ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.

ಇನ್ನು ಇದೇ ವೇಳೆ ಶಿಕ್ಷಕರ ನೇಮಕಾತಿ ಹಗರಣ ಸಿಐಡಿಗೆ ವಹಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ತನಿಖೆ ಮಾಡ್ಲಿ ಯಾರು ಉಪ್ಪು ತಿಂದಿದಾರೆ ಅವರು ನೀರು ಕುಡಿತಾರೆ. ನಮ್ಮದು ಅದಕ್ಕೇನು ವಿರೋಧ ಇಲ್ಲ. 2015ರ ವಿಚಾರ ಇದು ಆಗಿನಿಂದ ಏನು ಮಾಡಿದ್ರು ಇವರು. ವಿರೋಧ ಪಕ್ಷದಲ್ಲಿ ಇದ್ರಲಾ ಏನು ಮಾಡಿದ್ರು. ಯಡಿಯೂರಪ್ಪ, ಬೊಮ್ಮಾಯಿ ಮಾತಾಡಿದ್ರಾ, ಜಗದೀಶ ಶೆಟ್ಟರ ಮಾತಾಡಿದ್ರಾ? ತನಿಖೆ ಮಾಡಿಕೊಳ್ಳಲಿ ನಮ್ಮದೇನು ವಿರೋಧ ಇಲ್ಲ. ಆಗ ಮಾತನಾಡದ ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇರೋದಕ್ಕೂ ಫೇಲ್ ಆಗಿದಿರಿ ಅಂತ ಅರ್ಥ. ಆಗಲೇ ಯಾಕೆ ಆರೋಪ ಮಾಡಲಿಲ್ಲ. ಈಗ ಇವರು ಮಾಡ್ತಿರೋದು ದ್ವೇಷದ ರಾಜಕಾರಣ. 40% ಕಮಿಷನ್ ತನಿಖೆ ಮಾಡಿ ಎಂದಿದ್ದಕ್ಕೆ ಈಗ ಶಿಕ್ಷಕರ ನೇಮಕಾತಿ ಹಗರಣ ಅಂತ ಶುರು ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

‘ಕಾಂಗ್ರೆಸ್ ದುರಾಡಳಿತದಿಂದ ಬೆಂಗಳೂರಿನಲ್ಲಿ ಮಳೆ ಅವಾಂತರ’ ಎಂದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಗೆ ಬಿಜೆಪಿಯೇ ನೇರ ಕಾರಣ. ಸಿಎಂ ಹೇಳಿದ್ದೇ ವೇದವಾಕ್ಯವಲ್ಲ. ಬೆಂಗಳೂರು ನಗರದಲ್ಲಿ ಮಳೆ ಏನು ನಿನ್ನೆ, ಮೊನ್ನೆ ಬಂದಿದೆಯಾ? ಪ್ರವಾಹ ಎದುರಿಸಲು ರಾಜ್ಯಸರ್ಕಾರ ಸೂಕ್ತ ಸಿದ್ಧತೆ ಮಾಡಿಕೊಂಡಿಲ್ಲ. ಅಧಿಕಾರಕ್ಕೆ ಬಂದು ಮೂರು ವರ್ಷ ಆಯಿತು, ಏನು ಮಾಡುತ್ತಿದ್ದರು. 2019ರಲ್ಲೂ ಪ್ರವಾಹ ಬಂದಿತ್ತು, 2020ರಲ್ಲೂ ಪ್ರವಾಹ ಬಂದಿದೆ. ಬಿಎಸ್‌ವೈ ಸಿಎಂ ಆದಾಗಲೂ ಬೆಂಗಳೂರಿನಲ್ಲಿ ಪ್ರವಾಹ ಬಂದಿತ್ತು. ರಾಜಕಾಲುವೆ ತೆರವು ಮಾಡಲಿಲ್ಲ, ಒಳಚರಂಡಿ ಸ್ವಚ್ಛಗೊಳಿಸಲಿಲ್ಲ. ನಮ್ಮಿಂದಲೇ ಪ್ರವಾಹ ಬಂದಿದೆ ಅಂದ್ರೆ ಏನರ್ಥ? ಮೂರು ವರ್ಷದ ನಂತರವೂ ನಾವೇ ಕಾರಣನಾ. ಕಳೆದ 3 ವರ್ಷದಿಂದ ಅಧಿಕಾರದಲ್ಲಿದ್ದು ಏನು ಕೆಲಸ ಮಾಡಿದ್ದೀರಿ? ಪ್ರವಾಹ ಇಷ್ಟೆಲ್ಲ ಅವಾಂತರ ಮಾಡಿದೆ ಅಂದ್ರೆ ನೀವು ಏನೂ ಮಾಡಿಲ್ಲ ಅಂತ ಅರ್ಥ ಅಲ್ಲವೇ? ಪ್ರವಾಹ ಪರಿಸ್ಥಿತಿಗೆ ಬಿಜೆಪಿಯೇ ನೇರಕಾರಣ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:45 pm, Tue, 6 September 22