ಚಾಮರಾಜನಗರ: ಹಬ್ಬಕ್ಕೆ ಕರೆದೊಯ್ಯಲು ಬಾರದ ಪತಿ; ಮನನೊಂದು ಪತ್ನಿ ಆತ್ಮಹತ್ಯೆ
ಹಬ್ಬಕ್ಕೆ ತನ್ನ ಪತಿ ಕರೆದೊಯ್ಯಲು ಬರಲಿಲ್ಲವೆಂದು ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಸೋಮವಾರಪೇಟೆಯಲ್ಲಿ ನಡೆದಿದೆ. ಕೌಟಂಬಿಕ ಕಲಹ ಹಿನ್ನಲೆ ತವರು ಮನೆಯಲ್ಲೇ ಇದ್ದಳು. ಕೊತ್ತಲವಾಡಿಯಲ್ಲಿ ಮಾರಮ್ಮನ ಹಬ್ಬಕ್ಕೆ ಪತಿ ಕರೆದುಕೊಂಡು ಹೋಗಲು ಬರುತ್ತಾನೆಂದು ಕಾದು ಕುಳಿತಿದ್ದಳು. ಆದರೆ, ಪತಿ ಬಾರದ ಹಿನ್ನೆಲೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಚಾಮರಾಜನಗರ, ಮಾ.4: ಹಬ್ಬಕ್ಕೆ ತನ್ನ ಪತಿ ಕರೆದೊಯ್ಯಲು ಬರಲಿಲ್ಲವೆಂದು ಮನನೊಂದ ಪತ್ನಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಚಾಮರಾಜನಗರದ (Chamarajanagar) ಸೋಮವಾರಪೇಟೆಯಲ್ಲಿ ನಡೆದಿದೆ. ರಚನಾ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಐದು ವರ್ಷಗಳ ಹಿಂದೆ ಕೊತ್ತಲವಾಡಿದ ಸೋಮೇಶ್ ಜೊತೆ ರಚನಾಳ ವಿವಾಹವಾಗಿತ್ತು. ಆದರೆ, ಕೌಟಂಬಿಕ ಕಲಹ ಹಿನ್ನಲೆ ರಚನಾ ತನ್ನ ತವರು ಮನೆ ಸೇರಿದ್ದಳು.
ಇಂದು ಕೊತ್ತಲವಾಡಿಯಲ್ಲಿ ಮಾರಮ್ಮನ ಹಬ್ಬವಿತ್ತು. ಈ ಹಬ್ಬಕ್ಕೆ ಕರೆದೊಯ್ಯಲು ಪತಿ ಬರುತ್ತಾನೆ ಎಂದು ರಚನಾ ಕಾದು ಕುಳಿತಿದ್ದಳು. ಆದರೆ, ಪತಿ ಸೋಮೇಶ್ ಬಂದೇ ಇಲ್ಲ. ಇದರಿಂದ ಮನನೊಂದ ರಚನಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಟೌನ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಲಿದ್ದಾರೆ.
ಇದನ್ನೂ ಓದಿ: ಧಾರವಾಡ: ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಮಗ
ಆತ್ಮಹತ್ಯೆ ಸಹಾಯವಾಣಿ
ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821, ಆರೋಗ್ಯ ವಾಣಿ: 104, ಸಹಾಯ್ ಸಹಾಯವಾಣಿ: 080-25497777
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ