ಚಾಮರಾಜನಗರ, ಜೂ.02: ಮನೆ ಬೀಗ ಮುರಿದು ಬರೋಬ್ಬರಿ 14 ಲಕ್ಷ ರೂಪಾಯಿ ಮೌಲ್ಯದ 200 ಗ್ರಾಂ ಚಿನ್ನಾಭರಣವನ್ನ ಕಳ್ಳರು ದೋಚಿಕೊಂಡು ಪರಾರಿ ಆಗಿರುವ ಘಟನೆ ಚಾಮರಾಜನಗರ(Chamarajanagar)ದ ಚನ್ನೀಪುರಮೋಳೆ ಬಡಾವಣೆಯಲ್ಲಿ ನಡೆದಿದೆ. ರಾಯರ ದರ್ಶನ ಪಡೆದು ಮನೆಗೆ ವಾಪಸ್ಸಾದವರಿಗೆ ಬಿಗ್ ಶಾಕ್ ಎದುರಾಗಿದ್ದು, ಜನನಿಬಿಡ ಪ್ರದೇಶದಲ್ಲಿರುವ ಮನೆಗೆ ಕದೀಮರು ಕನ್ನ ಹಾಕಿದ್ದಾರೆ.
ಇದು ಬಡಾವಣೆಯ ರಾಘವೇಂದ್ರ ಎಂಬುವವರ ಮನೆ ಆಗಿದ್ದು, ಎಲ್ಲರೂ ಮಂತ್ರಾಲಯದ ರಾಯರ ದರ್ಶನಕ್ಕೆ ಹೋಗಿದ್ದರು. ಮಂತ್ರಾಲಯದಿಂದ ಬರುವಷ್ಟರಲ್ಲಿ ಮನೆ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಚಿನ್ನದ ಜೊತೆಗೆ 20 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನೆಯಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಹಂದಿಗಳನ್ನೂ ಬಿಡದ ಕಳ್ಳರು; ಎರಡೇ ತಿಂಗಳಲ್ಲಿ 300 ಕ್ಕೂ ಹೆಚ್ಚು ಸಾಕು ಹಂದಿ ಕಳ್ಳತನ
ಬೆಂಗಳೂರು: ನಗರದಲ್ಲಿ ಹಾಡಹಗಲೇ ಮನೆಕಳವು ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕಾರ್ಜುನ ಅಲಿಯಾಸ್ ಪುಟ್ಟು ಬಂಧಿತ ಆರೋಪಿ. ಇತ ಜೂನ್ 3 ರಂದು ಹೆಚ್ಎಎಲ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳವು ಮಾಡಿದ್ದ. ಅಡುಗೆ ಮನೆಯ ಕಿಟಕಿಯಲ್ಲಿದ್ದ ಮನೆ ಕೀ ಎಗರಿಸಿ, 25 ಗ್ರಾಂ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದ. ಇದೀಗ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿ ಮಲ್ಲಿಕಾರ್ಜುನನ್ನು ಅರೆಸ್ಟ್ ಮಾಡಲಾಗಿದೆ. ಜೊತೆಗೆ ಕದ್ದಿದ್ದ 25 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಹಾವೇರಿ: ಅಂತರ್ ಜಿಲ್ಲಾ ಮೂವರು ಕಳ್ಳರನ್ನು ಬಂಧಿಸಿ ಬರೋಬ್ಬರಿ 23 ಲಕ್ಷ ರೂ. ಮೌಲ್ಯದ 29 ಬೈಕ್ಗಳನ್ನು ರಾಣೆಬೆನ್ನೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಮೊಹಮ್ಮದ್ ಮುಗಳಗೇರಿ, ತನ್ವೀರ್ ಲಕ್ಷ್ಮೇಶ್ವರ, ಖಲಂದರ್ ಪಠಾಣ್ ಬಂಧಿತ ಆರೋಪಿಗಳು. ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ, ಬೆಂಗಳೂರು ನಗರ, ಹಾಸನ ಜಿಲ್ಲೆಯಲ್ಲಿ ಬೈಕ್ಗಳನ್ನ ಕಳ್ಳತನ ಮಾಡಿದ್ದರು. ರೈಲ್ವೆ ಹಾಗೂ ಬಸ್ ನಿಲ್ದಾಣ, ಪಾರ್ಕಿಂಗ್ ಸ್ಥಳಗಳನ್ನೇ ಟಾರ್ಗೆಟ್ ಮಾಡಿ ಬೈಕ್ ಎಗರಿಸುತ್ತಿದ್ದರು. ಈ ಕುರಿತು ರಾಣೆಬೆನ್ನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ