ರಸ್ತೆ ಅಗಲೀಕರಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಇನ್ನೂ ಸಿಗದ ಪರಿಹಾರ, ಚಾಮರಾಜನಗರ ಜಿಲ್ಲಾಡಳಿತದ ಲೆಕ್ಕಾಚಾರ ಏನು?

ಈ ಪ್ರಕರಣದ ಕುರಿತು ನಗರಸಭೆ ಹೇಳುವುದೆ ಬೇರೆ. ಈಗಾಗ್ಲೆ ನಿವೇಶನ ಕಳೆದು ಕೊಂಡವರಿಗೆ ಬೇರೆಡೆ ಜಾಗವನ್ನ ಗುರುತು ಮಾಡಲಾಗಿದೆ. ಆದ್ರೆ ಆ ಸ್ಥಳಕ್ಕೆ ಹೋಗಲು ಸಂತ್ರಸ್ಥರು ಒಪ್ಪುತ್ತಿಲ್ಲ, ಜೊತೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಇನ್ನೂ ಬಿಡುಗಡೆ ಆಗಿಲ್ಲ.

ರಸ್ತೆ ಅಗಲೀಕರಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಇನ್ನೂ ಸಿಗದ ಪರಿಹಾರ, ಚಾಮರಾಜನಗರ ಜಿಲ್ಲಾಡಳಿತದ ಲೆಕ್ಕಾಚಾರ ಏನು?
ರಸ್ತೆ ಅಗಲೀಕರಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಇನ್ನೂ ಸಿಗದ ಪರಿಹಾರ
Edited By: ಸಾಧು ಶ್ರೀನಾಥ್​

Updated on: Dec 02, 2023 | 8:35 PM

ಅವ್ರೆಲ್ಲಾ ರಸ್ತೆ ಅಗಲೀಕರಣಕ್ಕಾಗಿ (road widening) ತಮ್ಮ ನಿವೇಶ ಹಾಗೂ ಜಾಗವನ್ನ (land, site) ಬಿಟ್ಟು ಕೊಟ್ಟಿದ್ರು. 2016 ರಲ್ಲಿ ಚಾಮರಾಜನಗರ ನಗರ ಸಭೆ ರಸ್ತೆ ಅಗಲೀಕರಣ ಸಹ ಮಾಡಿತ್ತು. ನಿವೇಶನ ಕಳೆದು ಕೊಂಡವರಿಗೆ ಸೂಕ್ತ ಪರಿಹಾರ (Compensation) ನೀಡಿದ್ದ ಜಿಲ್ಲಾಡಳಿತ 7 ವರ್ಷ ಕಳೆದ್ರು ಇನ್ನು ಒಂದೇ ಒಂದು ಬಿಡಿಗಾಸನ್ನ ಸಹ ನೀಡಿಲ್ಲ. ಇದರಿಂದ ಬೇಸತ್ತ ಸಂತ್ರಸ್ಥರು ಜಿಲ್ಲಾಡಳಿತ ವಿರುದ್ದ (chamarajanagar) ಕೆಂಡ ಕಾರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕಣ್ಣಾಡಿಸಿದ ಕಡೆಯಲ್ಲಾ ಕಾಂಕ್ರೀಟ್ ರಸ್ತೆ ಸುಸಜ್ಜಿತ ರಸ್ತೆಯ ಪಕ್ಕದಲ್ಲಿ ಇರುವ ಅರ್ಧಂಬರ್ಧ ಕೆಡವಿದ ಕಟ್ಟಡಗಳು. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರದಲ್ಲಿ.

2016ರಲ್ಲಿ ರಸ್ತೆ ಅಗಲೀಕರಣ ನಡೆಸುವ ಸಲುವಾಗಿ ನಗರಸಭೆ ರಸ್ತೆಯ ಅಕ್ಕಪಕ್ಕ ಇದ್ದ ನಿವೇಶನಗಳನ್ನ ಒತ್ತುವರಿ ಮಾಡಿ ಒಡೆದು ಹಾಕಿತ್ತು. ಹೀಗೆ ರಸ್ತೆ ಅಗಲೀಕರಣ ಸಮಯದಲ್ಲಿ ನಿವೇಶನಗಳನ್ನ ಕಳೆದುಕೊಂಡವರಿಗೆ ನಗರ ಸಭೆ ಒಂದು ಅಶ್ವಾನಸೆ ನೀಡಿತ್ತು. ಬೇರೆಡೆ ನಿವೇಶ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿತ್ತು. ನಗರಸಭೆ ನೀಡಿದ ಭರವಸೆ ಬೆನ್ನಲ್ಲೆ ನಿವೇಶನ ಕಳೆದು ಕೊಂಡವರು ಪರಿಹಾರದ ಭರವಸೆಯೊಂದಿಗೆ ಸುಮ್ಮನಾಗಿದ್ರು. ಆದ್ರೆ 7 ವರ್ಷ ಕಳೆದ್ರು ನಗರಸಭೆ ಇನ್ನು ಪರಿಹಾರ ನೀಡದ ಕಾರಣ ಈಗ ಸಂತ್ರಸ್ಥರು ನಗರಸಭೆ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.

Also Read: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಅವ್ಯವಹಾರ: ಸಿಬಿಐ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಇನ್ನು ಈ ಪ್ರಕರಣದ ಕುರಿತು ನಗರಸಭೆ ಹೇಳುವುದೆ ಬೇರೆ. ಈಗಾಗ್ಲೆ ನಿವೇಶನ ಕಳೆದು ಕೊಂಡವರಿಗೆ ಬೇರೆಡೆ ಜಾಗವನ್ನ ಗುರುತು ಮಾಡಲಾಗಿದೆ. ಆದ್ರೆ ಆ ಸ್ಥಳಕ್ಕೆ ಹೋಗಲು ಸಂತ್ರಸ್ಥರು ಒಪ್ಪುತ್ತಿಲ್ಲ, ಜೊತೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ನಿವೇಶನವನ್ನ ಕಳೆದು ಕೊಂಡವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಗಾಗಿ ಇನ್ನೂ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂಬುದು ನಗರಸಭೆಯ ವಾದ.

ಒಟ್ಟಾರೆ ಅಭಿವೃದ್ಧಿ ವಿಚಾರವನ್ನ ಮುಂದಿಟ್ಟು ನಗರಸಭೆ ಡೆಮಾಲಿಷನ್ ಕಾರ್ಯ ಮಾಡಿದೆ. ಹೀಗೆ 7 ವರ್ಷಗಳ ಹಿಂದೆ ಡೆಮಾಲಿಷನ್ ಕಾರ್ಯ ಮಾಡಿದರೂ ಇನ್ನು ಸೂಕ್ತ ಪರಿಹಾರ ನೀಡದೆ ತಡ ಮಾಡುತ್ತಿರುವ ನಗರಸಭೆ ವಿರುದ್ದ ಸಂತ್ರಸ್ತರು ಹಿಡಿ ಶಾಪ ಹಾಕುತ್ತಿದ್ದಾರೆ. ಆದಷ್ಟು ಬೇಗ ನಗರಸಭೆ ನಿವೇಶನ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಿದರೆ ಒಳಿತು ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ನಗರಸಭೆ ವಿರುದ್ದ ಸಂತ್ರಸ್ತರು ಉಗ್ರ ಹೋರಾಟದ ಎಚ್ಚರಿಕೆಯನ್ನ ನೀಡಿದ್ದಾರೆ.

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us