ಆಸ್ತಿಗಾಗಿ ಗಂಡನ ಭೀಕರ ಕೊಲೆ ಕೇಸ್​ಗೆ ಸಿಕ್ಕಿದೆ ಟ್ವಿಸ್ಟ್! ಕ್ರಿಕೆಟ್ ಬೆಟ್ಟಿಂಗ್ ಚಟ್ಟ?

ಚಾಮರಾಜನಗರ: ಹಣಕ್ಕಾಗಿ ಅಣ್ಣನ ಜೊತೆ ಸೇರಿ ಪತ್ನಿ ತನ್ನ 2ನೇಪತಿಯನ್ನು ಕೊಂದ ಕೇಸ್​ಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಸುಬ್ರಮಣ್ಯನ ಸಾವಿಗೆ ಕ್ರಿಕೆಟ್ ಬೆಟ್ಟಿಂಗ್ ಚಟವೇ ಕಾರಣವಾಯ್ತಾ ಎಂಬ ಅನುಮಾನ ಮೂಡಿದೆ. ಸುಬ್ರಮಣ್ಯನಿಗೆ ಕ್ರಿಕೆಟ್ ಬೆಟ್ಟಿಂಗ್ ಚಟವಿತ್ತು. ಹೀಗಾಗಿ ಪತ್ನಿ ರಶ್ಮಿಯಿಂದ 50 ಲಕ್ಷ ಹಣ ಪಡೆದಿದ್ದು, ಬೆಟ್ಟಿಂಗ್​ನಲ್ಲಿ ಹಣ ಸೋತು ವಾಪಾಸ್ ಕೊಡಲು ಹಿಂದೇಟು ಹಾಕಿದ್ದಾನೆ ಎಂಬ ಮಾತುಗಳು ಕೇಳಿಬಂದಿವೆ. ರಶ್ಮಿ ಹಾಗೂ ಸಹೋದರ ಹಣ ಹಿಂತಿರುಗಿಸುವಂತೆ ಸುಬ್ರಮಣ್ಯನ ಬೆನ್ನುಬಿದ್ದಿದ್ದಾರೆ. ಹಣ ಕೊಡದ ಹಿನ್ನೆಲೆ […]

ಆಸ್ತಿಗಾಗಿ ಗಂಡನ ಭೀಕರ ಕೊಲೆ ಕೇಸ್​ಗೆ ಸಿಕ್ಕಿದೆ ಟ್ವಿಸ್ಟ್! ಕ್ರಿಕೆಟ್ ಬೆಟ್ಟಿಂಗ್ ಚಟ್ಟ?
ಸಾಧು ಶ್ರೀನಾಥ್​

Updated on: Jan 29, 2020 | 12:24 PM

ಚಾಮರಾಜನಗರ: ಹಣಕ್ಕಾಗಿ ಅಣ್ಣನ ಜೊತೆ ಸೇರಿ ಪತ್ನಿ ತನ್ನ 2ನೇಪತಿಯನ್ನು ಕೊಂದ ಕೇಸ್​ಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಸುಬ್ರಮಣ್ಯನ ಸಾವಿಗೆ ಕ್ರಿಕೆಟ್ ಬೆಟ್ಟಿಂಗ್ ಚಟವೇ ಕಾರಣವಾಯ್ತಾ ಎಂಬ ಅನುಮಾನ ಮೂಡಿದೆ. ಸುಬ್ರಮಣ್ಯನಿಗೆ ಕ್ರಿಕೆಟ್ ಬೆಟ್ಟಿಂಗ್ ಚಟವಿತ್ತು. ಹೀಗಾಗಿ ಪತ್ನಿ ರಶ್ಮಿಯಿಂದ 50 ಲಕ್ಷ ಹಣ ಪಡೆದಿದ್ದು, ಬೆಟ್ಟಿಂಗ್​ನಲ್ಲಿ ಹಣ ಸೋತು ವಾಪಾಸ್ ಕೊಡಲು ಹಿಂದೇಟು ಹಾಕಿದ್ದಾನೆ ಎಂಬ ಮಾತುಗಳು ಕೇಳಿಬಂದಿವೆ.

ರಶ್ಮಿ ಹಾಗೂ ಸಹೋದರ ಹಣ ಹಿಂತಿರುಗಿಸುವಂತೆ ಸುಬ್ರಮಣ್ಯನ ಬೆನ್ನುಬಿದ್ದಿದ್ದಾರೆ. ಹಣ ಕೊಡದ ಹಿನ್ನೆಲೆ ಸುಬ್ರಹ್ಮಣ್ಯಗೆ ರಶ್ಮಿ ಹಾಗೂ ಸಹೋದರ ಸೇರಿ ಥಳಿಸಿದ್ದಾರೆ. ತೀವ್ರ ಗಾಯಗೊಂಡ ಸುಬ್ರಹ್ಮಣ್ಯ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಬೆಟ್ಟಿಂಗ್ ಎಂಬ ಚಟಕ್ಕೆಯೇ ಚಟ್ಟ ಏರುವಂತಾಯ್ತೇ ಎಂಬ ಮತ್ತೊಂದು ಭಿನ್ನವಾದ ಮಾಹಿತಿ ಹೊರಬಿದ್ದಿದೆ. ಏನೇ ಆಗಲಿ, ಪೊಲೀಸರ ತನಿಖೆಯ ನಂತರವಷ್ಟೆ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ.

Published On - 2:53 pm, Tue, 28 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us