Video: ಚಾಮರಾಜನಗರದ ಚೆನ್ನಪ್ಪನಪುರದಲ್ಲಿ ಉರುಳಿತು ವೀರಭದ್ರೇಶ್ವರ ರಥ, ತಪ್ಪಿದ ಭಾರಿ ಅನಾಹುತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 01, 2022 | 1:26 PM

ಭಕ್ತರು ತೇರು ಎಳೆಯುತ್ತಿದ್ದಾಗ ಮೊದಲು ಚಕ್ರ ಮುರಿಯಿತು. ನಂತರ ರಥದ ಮೇಲ್ಭಾಗವು ಉರುಳಿತು.

Video: ಚಾಮರಾಜನಗರದ ಚೆನ್ನಪ್ಪನಪುರದಲ್ಲಿ ಉರುಳಿತು ವೀರಭದ್ರೇಶ್ವರ ರಥ, ತಪ್ಪಿದ ಭಾರಿ ಅನಾಹುತ
ಚಾಮರಾಜನಗರದ ಚೆನ್ನಪ್ಪನಪುರದಲ್ಲಿ ಉರುಳಿರುವ ವೀರಭದ್ರೇಶ್ವರ ರಥ
Follow us on

ಚಾಮರಾಜನಗರ: ತಾಲ್ಲೂಕಿನ ಚೆನ್ನಪ್ಪನಪುರದಲ್ಲಿ ಮಂಗಳವಾರ (ನ 1) ವೀರಭದ್ರೇಶ್ವರ ರಥೋತ್ಸವದ ವೇಳೆ ರಥ ಮುರಿದ ಘಟನೆ ನಡೆದಿದೆ. ಕೆಲವೇ ಕ್ಷಣಗಳಲ್ಲಿ ನಡೆದು ಹೋದ ಅನಾಹುತದಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ. ವೀರಭದ್ರೇಶ್ವರ ರಥೋತ್ಸವ ನಡೆಯುತ್ತಿದ್ದ ವೇಳೆಯಲ್ಲಿ ಭಕ್ತರು ತೇರು ಎಳೆಯುತ್ತಿದ್ದಾಗ ಮೊದಲು ಚಕ್ರ ಮುರಿಯಿತು. ನಂತರ ರಥದ ಮೇಲ್ಭಾಗವು ಉರುಳಿತು. ತುಸು ಹೆಚ್ಚುಕಡಿಮೆಯಾಗಿದ್ದರೂ ನೂರಾರು ಜನರ ಜೀವ ಹೋಗುತ್ತಿತ್ತು. ಅದೃಷ್ಟವಶಾತ್ ಭಕ್ತರು ಅಪಾಯದಿಂದ ಪಾರಾಗಿದ್ದಾರೆ.

ಗ್ರಾಮ ವೀರಭದ್ರೇಶ್ವರ ಸ್ವಾಮಿ ದೇಗುಲಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಕೊವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ಹೀಗಾಗಿಯೇ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ನಿಗದಿಯಂತೆ ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಆರಂಭವಾಯಿತು. ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ದೇಗುಲ ಆವರಣದಲ್ಲಿ ಒಂದು ಸುತ್ತು ರಥ ಎಳೆಯುವುದು ವಾಡಿಕೆ. ಅರ್ಧದಷ್ಟು ದೂರಕ್ಕೆ ಸಂಚರಿಸಿದ ನಂತರ ರಥದ ಚಕ್ರವು ಅಚಾನಕ್ ಆಗಿ ಕಲ್ಲಿನ ಮೇಲೆ ಹತ್ತಿದಾಗ ಸಮತೋಲನ ಏರುಪೇರಾಯಿತು. ಚಕ್ರವು ಮುರಿದಿದಿದ್ದರಿಂದ ರಥವು ಉರುಳಿತು. ಚಾಮರಾಜನಗರ ಜಿಲ್ಲೆಯ ವಿವಿಧ ಗ್ರಾಮಗಳ ನೂರಾರು ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.