ಶಿವನೇ ನನಗೆ ಹುಡುಗಿ ಕರುಣಿಸು… ದೇವರಿಗೆ ಪತ್ರ ಬರೆದು ಹುಂಡಿಗೆ ಹಾಕಿರುವ ಭೂಪ

ದೇವರೇ ನನಗೆ ಹುಡುಗಿ ಕರುಣಿಸು ಎಂದು ವ್ಯಕ್ತಿಯೊಬ್ಬ ದೇವರಿಗೆ ಪತ್ರ ಬರೆದು ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಕಾಣಿಕೆ ಹುಂಡಿಗೆ ಹಾಕಿದ್ದಾನೆ. ಮತ್ತೊಂದು ಪತ್ರವೂ ಪತ್ತೆಯಾಗಿದೆ.

ಶಿವನೇ ನನಗೆ ಹುಡುಗಿ ಕರುಣಿಸು... ದೇವರಿಗೆ ಪತ್ರ ಬರೆದು ಹುಂಡಿಗೆ ಹಾಕಿರುವ ಭೂಪ
ಶ್ರೀ ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮತ್ತು ಹುಂಡಿಯಲ್ಲಿ ಪತ್ತೆಯಾದ ಪತ್ರ
Edited By: Rakesh Nayak Manchi

Updated on: Dec 23, 2022 | 12:01 PM

ಚಾಮರಾಜನಗರ: ಇಷ್ಟಾರ್ಥಗಳನ್ನು ಕರುಣಿಸು ಎಂದು ದೇವರಿಗೆ ಕಾಣಿಕೆ ಹಾಕುವುದನ್ನು ನೋಡಿದ್ದೇವೆ. ತೀರ ಅಪರೂಪವೆಂಬಂತೆ ಕಾಣಿಕೆ ಹಾಕುವ ಹುಂಡಿಯಲ್ಲಿ ಕೆಲವೊಂದು ವಿಚಿತ್ರ ಪತ್ರಗಳು ಪತ್ತೆಯಾಗುತ್ತವೆ. ಅಂತಹದ್ದೇ ಪತ್ರವೊಂದು ಇದೀಗ ಚಾಮರಾಜನಗರ (Chamarajanagar)ದ ಶ್ರೀ ಚಾಮರಾಜೇಶ್ವರ ದೇವಾಲಯ (Sri Chamarajeshwara Temple)ದ ಹುಂಡಿಯಲ್ಲಿ ಪತ್ತೆಯಾಗಿದೆ. ಅದು ಕೂಡ ಒಂದು ಹುಡುಗಿಗಾಗಿ. ಹುಂಡಿ ಎಣಿಸುವ ಕಾರ್ಯ ಮುಂದುವರಿಯುತ್ತಿದ್ದಂತೆ ಮತ್ತೊಂದು ಪತ್ರವೂ ಪತ್ತೆಯಾಗಿದೆ. ಇದರಲ್ಲಿ ದೇವರ ರಾಜ್ಯ ಸಮೀಪಿಸಿದೆ ಎಂದು ಬರೆಯಲಾಗಿದೆ.

Sri Chamarajeshwara Temple

ಹುಡುಗಿಗಾಗಿ ದೇವರಿಗೆ ಬರೆದ ಪತ್ರ

ಇದನ್ನೂ ಓದಿ: Karnataka Startup Policy: ಸ್ಟಾರ್ಟಪ್​ಗಳ ಉತ್ತೇಜನಕ್ಕೆ ಮಾಸ್ಟರ್ ಪ್ಲ್ಯಾನ್; 100 ಕೋಟಿ ರೂ. ನಿಧಿಗೆ ಸಚಿವ ಸಂಪುಟ ಅಸ್ತು

ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಸುವಾಗ ಹಣದ ಜೊತೆ ಎರಡು ಪತ್ರಗಳು ಪತ್ತೆಯಾಗಿವೆ. ರಾಜೇಂದ್ರ ಉಪ್ಪಾರ ಬೀದಿ ಎಂದು ಬರೆದಿರುವ ಪತ್ರದಲ್ಲಿ ದೇವರೇ ನನಗೆ ಹುಡುಗಿಯನ್ನು ಕರುಣಿಸು ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೆ, ದೇವರ ರಾಜ್ಯವು ಸಮೀಪಿಸಿದೆ ಎಂಬ ಒಕ್ಕಣೆಯುಳ್ಳ ಮತ್ತೊಂದು ಪತ್ರವೂ ಪತ್ತೆಯಾಗಿದೆ. ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದುಕೊಂಡು ದೇವರ ಪ್ರೀತಿ ಕಳೆದುಕೊಂಡ ಎಂದು ಪತ್ರದಲ್ಲಿ ಬರೆಯಲಾಗಿದೆ.

Sri Chamarajeshwara Temple

ಕಾಣಿಕೆ ಹುಂಡಿಯಲ್ಲಿ ಪತ್ತೆಯಾದ ಮತ್ತೊಂದು ಪತ್ರ

ಇದನ್ನೂ ಓದಿ: Karnataka Winter Session 2022 Live: ಚಳಿಗಾಲದ ಅಧಿವೇಶನದ ಐದನೇ ದಿನವೂ ಸಾಲು ಸಾಲು ಪ್ರತಿಭಟನೆಗಳು

ಚಾಮರಾಜೇಶ್ವರನಿಗೆ 7 ಲಕ್ಷ ಹಣ ಅರ್ಪಿಸಿದ ಭಕ್ತರು

ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಈ ಬಾರಿ ಚಾಮರಾಜೇಶ್ವರ ಲಕ್ಷಾಧಿಪತಿಯಾಗಿದ್ದಾನೆ. ಹುಂಡಿಯಲ್ಲಿ 7,61,641 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

Hundi Counting: ಶ್ರೀಚಾಮರಾಜೇಶ್ವರ ದೇವಾಲಯ ಹುಂಡಿಯಲ್ಲಿ ಸಿಕ್ತು ಲೆಟರ್ | #TV9D

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Fri, 23 December 22

Follow Us