ಚೈತ್ರಾ ಕಬಾಬ್ ಗ್ಯಾಂಗ್ ಡೀಲಿಂಗ್​ ಆಡಿಯೋ ಬಹಿರಂಗ, ಸುನಿಲ್ ಕುಮಾರ್ ಹೆಸರು ಪ್ರಸ್ತಾಪ

| Updated By: Rakesh Nayak Manchi

Updated on: Sep 16, 2023 | 8:14 AM

ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್​ ವಂಚನೆ ಕೃತ್ಯ ಎಸಗಲು ಅಗ್ಗಾಗ ಸ್ಥಳ ಬದಲಾವಣೆ ಮಾಡಲಾಗುತ್ತಿತ್ತು. ಇದೇ ಕಾರಣಕ್ಕೆ ನಿನ್ನೆ ಮೂರು ಸ್ಥಳಗಳಲ್ಲಿ ಮಹಜರು ನಡೆಸಿದ ಸಿಸಿಬಿ ಪೊಲೀಸರು ಇಂದು ಮತ್ತೆ ಹಲವೆಡೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಈ ನಡುವೆ ಚೈತ್ರಾ ಕಬಾಬ್ ಗ್ಯಾಂಗ್ ಡೀಲಿಂಗ್​ ನಡೆಸಿದ ಆಡಿಯೋ ಬಹಿರಂಗವಾಗಿದೆ.

ಚೈತ್ರಾ ಕಬಾಬ್ ಗ್ಯಾಂಗ್ ಡೀಲಿಂಗ್​ ಆಡಿಯೋ ಬಹಿರಂಗ, ಸುನಿಲ್ ಕುಮಾರ್ ಹೆಸರು ಪ್ರಸ್ತಾಪ
ಚೈತ್ರಾ ಕುಂದಾಪುರ
Follow us on

ಬೆಂಗಳೂರು, ಸೆ.16: ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಹಣ ಪಡೆದ ವಂಚನೆ ಎಸಗಿದ ಪ್ರಕರಣ ಸಂಬಂಧ ಆರೋಪಿಗಳಾದ ಚೈತ್ರಾ ಕುಂದಾಪುರ (Chaitra Kundapur) ಮತ್ತು ಗ್ಯಾಂಗ್ ಕೃತ್ಯ ಎಸಗಲು ಸ್ಕ್ರಿಪ್ಟ್​​ಗೆ ತಕ್ಕಂತೆ ಅಗ್ಗಾಗ ಲೊಕೋಶನ್​ಗಳನ್ನು ಬದಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ನಿನ್ನೆ ಕೆಲವೆಡೆ ಸ್ಥಳ ಮಹಜರು ನಡೆಸಿದ ಸಿಸಿಬಿ ಪೊಲೀಸರು ಇಂದು ಮತ್ತೆ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಈ ನಡುವೆ ಚೈತ್ರಾ ಕಬಾಬ್ ಗ್ಯಾಂಗ್ ಡೀಲಿಂಗ್​ ನಡೆಸಿದ ಆಡಿಯೋ ಬಹಿರಂಗವಾಗಿದೆ.

ಪ್ರಸಾದ ಮತ್ತು ಚೈತ್ರಾ ನಡುವಿನ ಆಡಿಯೋ ಸಂಭಾಷಣೆ ಇದಾಗಿದೆ. ಅಲ್ಲದೆ, ಈ ಸಂಭಾಷಣೆ ವೇಳೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಪ್ರಸಾದ್ ಚೈತ್ರಾಗೆ ಪರಿಚಯಿಸಿದ್ದಾನೆ. ಅಷ್ಟು ಮಾತ್ರವಲ್ಲದೆ, ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು ಕೂಡ ಪ್ರಸ್ತಾಪವಾಗಿದೆ.

ಆಡಿಯೋ ಸಂಭಾಷಣೆ

ಚೈತ್ರಾ: ಹಾ ಪ್ರಸಾದ್

ಪ್ರಸಾದ್: ಮುಗಿಸ್ದೆ

ಚೈತ್ರಾ: ಹೋ ಆಯ್ತಾ?

ಪ್ರಸಾದ್: ಹಾ

ಚೈತ್ರಾ: ಇಷ್ಟು ಬೇಗಾ! 6.22 ಆಗೇ ಹೋಯ್ತಲ್ಲ, ನಂಗೊತ್ತೆ ಇಲ್ಲ, ಬೇಗ ಹೋಗಿದ್ರಾ?

ಪ್ರಸಾದ್: ಬೇಗ ಏನಲ್ಲ ಲೇಟಾಗಿತ್ತು

ಚೈತ್ರಾ: ಹೌದಾ

ಪ್ರಸಾದ್: ಹಾ, ಅಂದ್ರೆ 6 ಗಂಟೆ ಹೇಳಿದ್ರಲ್ಲ, ಆರು ಕಾಲಾಯ್ತು ಈಗ ಜಸ್ಟ್ ಮುಗಿಸ್ದೆ

ಚೈತ್ರಾ: ಹೌದಾ, ಓಕೆ

ಪ್ರಸಾದ್: ಹೌದು

ಚೈತ್ರಾ: ಗಗನ್​ಗೆ ಫೋನ್ ಮಾಡಿ ಹೇಳ್ಬೇಕಿತ್ತು

ಪ್ರಸಾದ್: ಗಗನ್​ಗೆ ಹೇಳ್ದೆ

ಚೈತ್ರಾ: ಹಂ, ಸರಿ ಸರಿ

ಪ್ರಸಾದ್: ಗಗನ್​ಗೆ ಮಾಡಿ ನಿನಗೆ ಮಾಡಿದೆ

ಚೈತ್ರಾ: ಹೌದಾ.. ಸರಿ

ಪ್ರಸಾದ್: ನಾರ್ಮಲ್ ಸಂಘಟನೆ ಇದ್ದ ಹುಡುಗರಿದ್ರು ಅಷ್ಟೆ

ಚೈತ್ರಾ: ಹೌದಾ ಸರಿ

ಪ್ರಸಾದ್: ಹಾಂ

ಚೈತ್ರಾ: ಎಲ್ಲಿದ್ದಿದ್ರು

ಪ್ರಸಾದ್: ಅದು… ಯಾವುದೊ ಕಾರ್ಕಳ ರೋಡಲ್ಲಿ ಒಳಗೆ

ಚೈತ್ರಾ: ಹೌದ, ಸರಿ ಮೋಸ್ಟ್ಲಿ ಸುನೀಲ್ ಕುಮಾರ್ ಮನೆಗೆ ಹೋಗ್ತಾರೆ ಅನಿಸುತ್ತೆ

ಪ್ರಸಾದ್: ಸುನೀಲ್ ಕುಮಾರ್ ಮನೆಗಾ?

ಚೈತ್ರಾ: ಮೇ ಬೀ.. ಇಲ್ಲ ಅಲ್ಲಿ ಯಾಕೆ ಬರ್ತಾರೆ

ಪ್ರಸಾದ್: ಹೌದು.. ಹೌದು

ಚೈತ್ರಾ: ನೋಡುವಾ

ಪ್ರಸಾದ್: ಹೌದಾ.. ಸರಿ ಸರಿ, ಅವರಿಗೊಂದು ಹೇಳಿಬಿಡಿ

ಚೈತ್ರಾ: ಯಾರಿಗೆ?

ಪ್ರಸಾದ್: ನಾನು ಮಾಡಿದ್ದೇನೆ, ನೀವು‌ ಒಂದ್ಸಲ ಫೋನ್ ಮಾಡಿ

ಚೈತ್ರಾ: ಇನ್ನೊಂದ್ ಸಲ ಕಾಲ್ ಮಾಡ್ತೇನೆ

ಪ್ರಸಾದ್: ಸರಿ

ಚೈತ್ರಾ: ಸರಿ.. ಸರಿ

ಕೃತ್ಯಕ್ಕೆ ಲೊಕೇಶನ್ ಬದಲಾಯಿಸುತ್ತಿದ್ದ ಚೈತ್ರಾ ಆ್ಯಂಡ್ ಗ್ಯಾಂಗ್

ಕೃತ್ಯಕ್ಕೆ ಆಗಾಗ ಲೊಕೇಶನ್​ ಬದಲಿಸುತ್ತಿದ್ದ ಹಿನ್ನೆಲೆ ನಿನ್ನೆ ಆರೋಪಿಗಳನ್ನು ಮೂರು ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದ ಸಿಸಿಬಿ ಪೊಲೀಸರು, ಇಂದು ಮತ್ತೆ ಹಲವೆಡೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಾಬೂನು ನೊರೆ ಬಾಯಿಗೆ ಹಾಕಿ ಮೂರ್ಛೆ ಬಂದಂತೆ ನಟನೆ; ಚೈತ್ರಾ ಕುಂದಾಪುರ ನಾಟಕಕ್ಕೆ ಸಿಸಿಬಿ ಪೊಲೀಸರು ಸುಸ್ತು

ಮಂಗಮ್ಮನಪಾಳ್ಯ ದಲ್ಲಕರುವ ಗೋವಿಂದ ಬಾಬು ಪೂಜಾರಿ ಕಚೇರಿ, ವಿಜಯನಗರದಲ್ಲಿರುವ ಅಭಿನವ ಹಾಲಶ್ರೀ ನಿವಾಸ, ಕೆ.ಕೆ ಗೆಸ್ಟ್ ಹೌಸ್ ಸೆಕೆಂಡ್ ಫ್ಲೋರ್​​ನಲ್ಲಿರುವ 207 ನಂಬರ್ ರೂಮ್ ಅನ್ನು ನಿನ್ನೆ ಮಹಜರು ನಡೆಸಲಾಗಿದೆ.

ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ಮೀಟಿಂಗ್ ನಡೆಸಿ ಆರೋಪಿ ಗಗನ್ ಅಲ್ಲಿಂದಲೇ ಹಣ ತೆಗೆದುಕೊಂಡು ಹೋಗಿರುವುದು ತಿಳಿದುಬಂದಿದೆ. ಅಭಿನವ ಹಾಲಶ್ರೀ ಅವರು ವಿಜಯನಗರ ನಿವಾಸದಲ್ಲೇ ಒಂದೂವರೆ ಕೋಟಿ ಪಡೆದ್ದು, ಕೆ.ಕೆ.ಗೆಸ್ಟ್ ಹೌಸ್​ನಲ್ಲಿ ಹಲವು ಬಾರಿ ಮೀಟಿಂಗ್ ನಡೆದಿತ್ತು. ಕಬಾಬ್ ವ್ಯಾಪಾರಿ ಚನ್ನಾ ನಾಯ್ಕ್ ಚುನಾವಣ ಸಮಿತಿ ಸದಸ್ಯ ಎಂದು ಭೆಟಿಯಾಗಿದ್ದು ಇಲ್ಲೇ ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ