ರಾಜ್ಯದಲ್ಲಿ ನೈಟ್ ಕರ್ಫ್ಯೂ ವಾಪಸ್.. ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
ರಾಜ್ಯದಲ್ಲಿ ನೈಟ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ನೈಟ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಪತ್ರಿಕಾ ಪ್ರಕಟಣೆಯ ವಿವರ ಹೀಗಿದೆ ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಜ್ಞರ ಸಲಹೆಯ ಮೇರೆಗೆ ರಾತ್ರಿ ಕರ್ಫ್ಯೂವನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು.
ಸರ್ಕಾರದ ಈ ತೀರ್ಮಾನದ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ರಾತ್ರಿ ಕರ್ಫ್ಯೂವಿನ ಅಗತ್ಯವಿಲ್ಲವೆಂಬಂತಹ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮರು ಪರಿಶೀಲಿಸಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ.
ಸಾರ್ವಜನಿಕರು ಸ್ವಯಂ ನಿರ್ಬಂ ಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಲು ಕೋರಿದೆ.
ನೈಟ್ ಕರ್ಫ್ಯೂ ವಾಪಸ್ ಪಡೆಯುವುದಕ್ಕೆ ಕಾರಣಗಳು: 1. ಕಾಟಾಚಾರದ ಕರ್ಫ್ಯೂ ವಿರುದ್ಧ ಜನಾಕ್ರೋಶ ಪ್ರಸಾರ ಮಾಡಿದ್ದ ಟಿವಿ೯ 2. ಸರ್ಕಾರದ ಕಾಟಾಚಾರದ ಕರ್ಫ್ಯೂ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕೆ 3. ನಗೆಪಾಟಲಿನ ನೈಟ್ ಕರ್ಫ್ಯೂ ನಿರ್ಧಾರದ ಬಗ್ಗೆ ಹಲವು ಸಚಿವರಿಂದ ಅಪಸ್ವರ, ಅತೃಪ್ತಿ 4. ಯಾವ ಕಾರಣಕ್ಕೆ ಕರ್ಫ್ಯೂ ಎಂದು ಸಕಾರಣ ತಿಳಿಸದ ಪರಿಸ್ಥಿತಿ ತಲುಪಿದ್ದ ಸರ್ಕಾರ 5. ಕರ್ಫ್ಯೂ ಜಾರಿ ಉದ್ದೇಶವನ್ನು ರಾಜ್ಯದ ಜನತೆಗೆ ವಿವರಿಸಲು ಸರ್ಕಾರದ ವೈಫಲ್ಯ 6. ನೈಟ್ ಕರ್ಫ್ಯೂ ನಿರ್ಧಾರದ ವಿರುದ್ಧ ಉದ್ಯಮವಲಯದಿಂದಲೂ ವಿರೋಧ 7. ಉನ್ನತ ಅಧಿಕಾರಿಗಳು, ತಜ್ಞರಿಂದಲೂ ಕಾಟಾಚಾರದ ಕರ್ಫ್ಯೂ ವಿರುದ್ಧ ಅಸಮಾಧಾನ 8. ಕಾಮಿಡಿ ಕರ್ಫ್ಯೂ ವಿರುದ್ಧ ಬೆಂಗಳೂರು ಆರ್ಚ್ ಬಿಷಪ್ ಅಸಮಾಧಾನ, ಕ್ರೈಸ್ತ್ರ ಧರ್ಮಿಯರ ಕಿಡಿ 9. ಸರ್ಕಾರದ ನೈಟ್ ಕರ್ಫ್ಯೂ ಕಾಮಿಡಿ ನಿರ್ಧಾರ ಎಂದಿದ್ದ ಪ್ರತಿಪಕ್ಷಗಳು
ಈ ಎಲ್ಲಾ ಕಾರಣಗಳಿಗೆ ಕೊನೆಗೂ ಕರ್ಫ್ಯೂನ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ಸಿಎಂ ಯಡಿಯೂರಪ್ಪಗೆ ಒಳ್ಳೆಯ ಸಲಹೆಗಾರರು ಇಲ್ಲ, ಇದು ಕಾಮಿಡಿ ಕರ್ಫ್ಯೂ: ವಾಟಾಳ್ ನಾಗರಾಜ್
Published On - 5:12 pm, Thu, 24 December 20