‘ಮಾಸ್ಕ್ ಹಾಕಿದ್ದರೂ ಪೊಲೀಸರು ದಂಡ ವಿಧಿಸಿದ್ದಾರೆ!’ ಮೂಡಿಗೆರೆ ಕ್ಷೇತ್ರದ BJP ಶಾಸಕ ಎಂ.ಪಿ. ಕುಮಾರಸ್ವಾಮಿ ಅಳಲು
ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಪೊಲೀಸರು 250 ರೂ. ದಂಡ ವಿಧಿಸಿದ್ದಾರೆ.

ಶಾಸಕ ಎಂ.ಪಿ ಕುಮಾರಸ್ವಾಮಿ
ಬೆಂಗಳೂರು: ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಇಂದು ಮಧ್ಯಾಹ್ನ(12.30) ಬೆಂಗಳೂರಿನ ಶೇಷಾದ್ರಿಪುರಂನಲ್ಲಿ 250 ರೂ. ದಂಡ ವಿಧಿಸಲಾಗಿದೆ. ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ.
ಬಾಡಿಗೆ ಕಾರೊಂದರಲ್ಲಿ ಎಂ.ಪಿ ಕುಮಾರಸ್ವಾಮಿ ಶೇಷಾದ್ರಿಪುರಂನಿಂದ ಶಾಸಕ ಭವನಕ್ಕೆ ತೆರಳುತ್ತಿದ್ದರು. ಟ್ರಾಫಿಕ್ನಲ್ಲಿ ಕಾರು ನಿಂತಿತ್ತು. ಈ ವೆಳೆಯಲ್ಲಿ ಕಾರಿನ ಗ್ಲಾಸ್ ಇಳಿಸುವಂತೆ ಪೊಲೀಸರು ಹೇಳಿದ್ದಾರೆ.
ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ದಂಡ ಹಾಕಿದ್ದಾರೆ. ಮಾಸ್ಕ್ ಧರಿಸಿದ್ದರೂ ದಂಡ ಪಾವತಿಸಲು ತಾಕೀತು ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ ಎಂ.ಪಿ. ಕುಮಾರಸ್ವಾಮಿ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ದೂರು ಸಹ ನೀಡಿದ್ದಾರೆ.
Published On - 4:51 pm, Thu, 24 December 20



