ರಸ್ತೆ ಸಾರಿಗೆ ಸಂಸ್ಥೆಯಿಂದ “ನಮ್ಮ ಕಾರ್ಗೋ” ಸೇವೆ ಲೋಕಾರ್ಪಣೆಗೊಂಡಿದ್ದು, ವಿಧಾನಸೌಧದಲ್ಲಿ ನಡೆದ ಕಾರ್ಗೋ ಸೇವೆ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಈ ಚೆಕ್ಗಳನ್ನು ವಿತರಿಸಿದರು. ಸಾರಿಗೆ ಸಚಿವ ಲಕ್ಷ್ಮಣ ಸವದಿ, ಆಹಾರ ಸಚಿವ ಉಮೇಶ್ ಕತ್ತಿ, ಆರೋಗ್ಯ ಸಚಿವ ಡಾ ಕೆ ಸುಧಾಕರ್, ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್, ಬಿಎಂಟಿಸಿ ಎಂಡಿ ಶಿಖಾ ಉಪಸ್ಥಿತರಿದ್ದರು.
ಕೊರೊನಾದಿಂದ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸಿದವು. ಇದರ ಮಧ್ಯೆ ಸಾರಿಗೆ ಇಲಾಖೆ ಕಾರ್ಗೋ ಸೇವೆ ಒದಗಿಸ್ತಿದೆ. ‘ನಮ್ಮ ಕಾರ್ಗೋ’ ಸೇವೆಯಿಂದ ಸಾರಿಗೆ ಸಂಸ್ಥೆಗೆ ಲಾಭವಾಗಲಿದೆ ಎಂದು ಬೆಂಗಳೂರಿನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸಾರಿಗೆ ಸಿಬ್ಬಂದಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದ ಸಾರಿಗೆ ಇಲಾಖೆ ಸಿಬ್ಬಂದಿಯ ಜೊತೆ ಇಲಾಖೆ ಇದೆ. ಕೊರೊನಾಗೆ ಬಲಿಯಾದ ಸಿಬ್ಬಂದಿಗೆ ತಲಾ $ 30 ಲಕ್ಷ ಪರಿಹಾರ ವಿತರಿಸಿದ್ದೇವೆ ಎಂದು ಸವದಿ ತಿಳಿಸಿದರು.
ಹಳೆಯ ಬಸ್‌ಗಳು ಇನ್ನು ಸಂಚಾರಿ ರಕ್ತನಿಧಿ, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗಾಗಿ ಸ್ನಾನಗೃಹಗಳಾಗಲಿವೆ:
ಹಳೇ ಬಸ್ ಮಾರಿದರೆ 1 ರಿಂದ 1.5 ಲಕ್ಷ ರೂ. ಬರುತ್ತಿತ್ತು. ಅದರ ಬದಲು ಆ ಬಸ್‌ಗಳನ್ನು ಸಂಚಾರಿ ರಕ್ತನಿಧಿ ಮಾಡುತ್ತಿದ್ದೇವೆ. ಗುಜರಿಗೆ ಹೋಗುವ ಬಸ್‌ಗಳನ್ನೂ ಬಳಕೆ ಮಾಡಿಕೊಳ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗಾಗಿ ಸ್ನಾನಗೃಹವನ್ನಾಗಿಯೂ, ಬೇಬಿ ಕೇರ್ ಸೆಂಟರ್‌ಗಳಾಗಿಯೂ ಮಾರ್ಪಾಡು ಮಾಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ: ಸಂಪರ್ಕಕ್ಕೆ ಸಿಗುತ್ತಿಲ್ಲ 2 ಸಾವಿರ BMTC ಸಿಬ್ಬಂದಿ.. ಶಿಸ್ತು ಕ್ರಮ ಕೈಗೊಳ್ಳಲು ನಿಗಮಾ ನಿರ್ಧಾರ
ಇದನ್ನೂ ಓದಿ: ಲಂಡನ್‌ನಿಂದ ಬಂದವರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್: ಉಳಿದವರು ಸಾರ್ವಜನಿಕ ಸಾರಿಗೆ ಬಳಸಿ ಮನೆಗೆ ವಾಪಸ್!