ಎರಡು ದಶಕ ಕಾಲ ಸೇನೆಯಲ್ಲಿ ಸೇವೆ: ಮರಳಿ ಬಂದ ಯೋಧನಿಗೆ ಧಾರವಾಡ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನ ಕಳೆದುಕೊಂಡಿದ್ದ ಸಿದ್ದಪ್ಪನವರಿಗೆ ಸೇನೆ ಸೇನೆ ಸೇರುವುದು ಅನಿವಾರ್ಯವಾಗಿತ್ತು. ಅದರೊಂದಿಗೆ ದೇಶವನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು ಎನ್ನುವುದು ಕೂಡ ಕನಸಾಗಿತ್ತು.

ಎರಡು ದಶಕ ಕಾಲ ಸೇನೆಯಲ್ಲಿ ಸೇವೆ: ಮರಳಿ ಬಂದ ಯೋಧನಿಗೆ ಧಾರವಾಡ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ
ಸೇನೆಯಿಂದ ಮರಳಿದ ಯೋಧರಿಗೆ ಅದ್ದೂರಿ ಸ್ವಾಗತ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Feb 26, 2021 | 12:34 PM

ಧಾರವಾಡ: ಸುಮಾರು 20 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಹೋಗಿ, ದೇಶದ ಗಡಿ ರಕ್ಷಣೆ ಮಾಡುವ ಸೇವೆಯಲ್ಲಿ ನಿರತನಾಗಿದ್ದ ಯೋಧರೊಬ್ಬರು ಮರಳಿ ತನ್ನೂರಿಗೆ ಬಂದಿದ್ದು ಇವರಿಗೆ ಊರಿನ ಜನರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಧಾರವಾಡ ತಾಲೂಕಿನ ತಡಕೋಡ-ಖಾನಾಪುರ ಗ್ರಾಮದ ಸಿದ್ದಪ್ಪ ಗುಂಡಗೋವಿ 20 ವರ್ಷಗಳ ಹಿಂದೆ ಭಾರತೀಯ ಸೇನೆಯನ್ನು ಸೇರಿದ್ದರು. ಗ್ರಾಮದ ಶಿವರುದ್ರಪ್ಪ-ಗಂಗವ್ವ ದಂಪತಿಯ ನಾಲ್ಕನೇ ಮಗನಾಗಿದ್ದ ಸಿದ್ದಪ್ಪ, ಪಿಯುಸಿ ಮುಗಿಯುತ್ತಿದ್ದಂತೆಯೇ ಭಾರತೀಯ ಸೇನೆಯ ಮದ್ರಾಸ್ ಇಂಜಿನೀಯರಿಂಗ್ ಗ್ರೂಪ್​ನ 13 ನೇ ರೆಜಿಮೆಂಟ್​ಗೆ ಭರ್ತಿಯಾದರು.

ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನ ಕಳೆದುಕೊಂಡಿದ್ದ ಸಿದ್ದಪ್ಪನವರಿಗೆ ಸೇನೆ ಸೇರುವುದು ಅನಿವಾರ್ಯವಾಗಿತ್ತು. ಅದರೊಂದಿಗೆ ದೇಶವನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು ಎನ್ನುವುದು ಕೂಡ ಕನಸಾಗಿತ್ತು. ಹೀಗಾಗಿ ಸೇನೆ ಸೇರಿದ ಸಿದ್ದಪ್ಪ, ಸುಮಾರು 20 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ, ಇದೀಗ ನಿವೃತ್ತರಾಗಿ ತಮ್ಮೂರಿಗೆ ಮರಳಿದ್ದಾರೆ. ನಿವೃತ್ತ ಯೋಧ ಸಿದ್ದಪ್ಪನವರಿಗೆ ಗ್ರಾಮಸ್ಥರು ವಿಭಿನ್ನವಾಗಿ ಸ್ವಾಗತ ಕೋರಿದ್ದು, ಶಾಲಾ ಮಕ್ಕಳು ಮತ್ತು ಗ್ರಾಮದ ಮಹಿಳೆಯರು ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು.

ಶಾಲಾ ಮಕ್ಕಳಿಂದ ನಿವೃತ್ತ ಯೋಧರೊಂದಿಗೆ ಸೆಲ್ಫಿ: ಗುರುವಾರ ಬೆಳಗ್ಗೆ ಸಿದ್ದಪ್ಪ ಗ್ರಾಮಕ್ಕೆ ಬರುತ್ತಿದ್ದಂತೆಯೇ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಸಿದ್ದಪ್ಪ ಅವರನ್ನು ಆದರದಿಂದ ಬರಮಾಡಿಕೊಂಡರು. ಬಳಿಕ ಗ್ರಾಮದ ಬಸ್ ನಿಲ್ದಾಣದಿಂದ ಸಿದ್ದಪ್ಪ ಅವರನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆದು ತಂದರು‌. ಇದೇ ಶಾಲೆಯಲ್ಲಿ ವ್ಯಾಸಾಂಗ ಮುಗಿಸಿದ್ದ ಸಿದ್ದಪ್ಪ ಅವರಿಗೆ ತಮ್ಮದೇ ಶಾಲೆಯಲ್ಲಿ ಇಂತಹದೊಂದು ಅದ್ಭುತ ಸ್ವಾಗತ ಸಿಕ್ಕಿದ್ದು ಖುಷಿ ತಂದುಕೊಟ್ಟಿದೆ.

soldier dharwad

ಯೋಧರನ್ನು ಆರತಿ ಬೆಳಗಿ ಸ್ವಾಗತಿಸಿದ ಮಹಿಳೆಯರು

ತಾನು ಓದಿದ ಶಾಲೆಗೆ ಸಿದ್ದಪ್ಪ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಇದೇ ವೇಳೆ ಸಿದ್ದಪ್ಪ ಅವರ ಮಗಳು ಸ್ಪೂರ್ತಿ ಹಾಗೂ ಮಗ ರೋಹಿತ್ ಓಡಿ ಬಂದು ಅಪ್ಪಿಕೊಂಡು ಭಾವನಾತ್ಮಕ ಸನ್ನಿವೇಶ ಸೃಷ್ಟಿಸಿದರು. ಇಬ್ಬರನ್ನೂ ಅಪ್ಪಿಕೊಂಡು ಮುದ್ದಾಡಿದ ಸಿದ್ದಪ್ಪ ಕೆಲ ಕಾಲ ವರ್ತಮಾನವನ್ನೇ ಮರೆತಂತೆ ಕಾಣುತ್ತಿದ್ದರು.

soldier dharwad

ಸಿದ್ದಪ್ಪ ಅವರ ಕುಟುಂಬ

ಆತ್ಮೀಯ ಗೆಳೆಯನ ನೆನಪು: ಕುಟುಂಬಸ್ಥರು, ಗ್ರಾಮಸ್ಥರು ಸಿದ್ದಪ್ಪ ಅವರ ಆಗಮನದಿಂದ ಖುಷಿ ಖುಷಿಯಾಗಿದ್ದರೆ.. ಇತ್ತ ಒಳಗೊಳಗೇ ಸಿದ್ದಪ್ಪ ತನ್ನ ಗೆಳೆಯನನ್ನು ನೆನೆದು ಭಾವನಾತ್ಮಕ ಲೋಕದಲ್ಲಿ ಮುಳುಗಿದ್ದರು. ಸಿದ್ದಪ್ಪ ಸೇನೆಗೆ ಸೇರುವಾಗ ಇವರೊಂದಿಗೆ ಗ್ರಾಮದ ಮತ್ತೊಬ್ಬ ಯುವಕ ಬಸವರಾಜ ಕೂಡ ಸೇನೆ ಸೇರಿದ್ದರು. ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಸೇನೆಗೆ ಸೇರಿದ ಮೂರು ವರ್ಷದಲ್ಲಿ ಬಸವರಾಜ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದಿದ್ದ ಕಾಳಗದಲ್ಲಿ ವೀರಮರಣವನ್ನಪ್ಪಿದ್ದರು.

ಬಸವರಾಜ ಅವರ ನೆನಪಿಗೋಸ್ಕರ ಗ್ರಾಮದ ಬಸ್ ನಿಲ್ದಾಣದಲ್ಲಿ ಅವರ ಪುತ್ಥಳಿಯನ್ನು ಕೂಡ ಸ್ಥಾಪಿಸಲಾಗಿದೆ. ಅದನ್ನು ನೆನಪಿಸಿಕೊಂಡ ಸಿದ್ದಪ್ಪ ಒಂದು ಕ್ಷಣ ಭಾವನಾತ್ಮಕವಾದರು. ಒಂದು ವೇಳೆ ಆತ ಬದುಕಿದ್ದಿದ್ದರೆ, ಆತನೂ ತನ್ನೊಂದಿಗೆ ಇಂದು ನಿವೃತ್ತರಾಗುತ್ತಿದ್ದರು ಎಂದು ಸಿದ್ದಪ್ಪ ನೋವಿನಿಂದ ಹೇಳಿದರು.

soldier dharwad

ಸಿದ್ದಪ್ಪ

ಸೇನೆಯಿಂದ ನಿವೃತ್ತಿಯಾಗಿ ಬಂದಿರುವ 39 ವರ್ಷದ ಸಿದ್ದಪ್ಪ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿಯೇ ಇದ್ದು, ಯುವಕರಿಗೋಸ್ಕರ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಅದರಲ್ಲೂ ಸೇನೆಗೆ ಭರ್ತಿಯಾಗುವ ಕನಸು ಹೊತ್ತಿರುವ ಯುವಕರಿಗೆ ತರಬೇತಿ ನೀಡುವ ಕನಸನ್ನು ಹೊಂದಿದ್ದು, ತಮ್ಮೂರಿನಲ್ಲಿ ಇಷ್ಟೊಂದು ಪ್ರೀತಿ ತೋರಿಸಿರುವ ಜನರಿಗಾಗಿ ಏನಾದರೂ ಮಾಡಲೇಬೇಕು. ನನ್ನನ್ನು ಇಷ್ಟೊಂದು ಪ್ರೀತಿಸುವ ಜನರಿಗೆ ತಾವು ಯಾವತ್ತೂ ಋಣಿ ಎಂದು ಹೇಳಿದ್ದಾರೆ.

ಎರಡು ದಶಕಗಳ ಕಾಲ ದೇಶ ಸೇವೆ ಸಲ್ಲಿಸಿರುವ ಸಿದ್ದಪ್ಪ ಅವರ ಬಗ್ಗೆ ಗ್ರಾಮಸ್ಥರಲ್ಲಿ ತುಂಬಾನೇ ಅಭಿಮಾನ ಮತ್ತು ಪ್ರೀತಿ ಇದೆ. ಈ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯ ಭೀಮಪ್ಪ ಕಸಾಯಿ ಅವರು ಮಾತನಾಡಿದ್ದು, ಸಿದ್ದಪ್ಪ ನಮ್ಮ ಗ್ರಾಮದ ಹೆಮ್ಮೆ. ಇಪ್ಪತ್ತು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ, ಇದೀಗ ನಿವೃತ್ತಿಯಾಗಿ ಗ್ರಾಮಕ್ಕೆ ಬಂದಿದ್ದಾರೆ. ಅವರಿಂದ‌ ಗ್ರಾಮಕ್ಕೆ ಅನುಕೂಲವಾಗುವ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಯುವಕರಿಗೆ ಸಿದ್ದಪ್ಪ ಅವರಿಂದ ಅನುಕೂಲವಾಗುವಂತೆ ಏನಾದರೂ ಯೋಜನೆ ರೂಪಿಸಬೇಕಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಿದ್ದಪ್ಪ ಅವರೊಂದಿಗೆ ಚರ್ಚಿಸಿ, ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಒಟ್ಟಿನಲ್ಲಿ ಎರಡು ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶ ಸೇವೆ ಮಾಡಿ ಇದೀಗ ಗ್ರಾಮಕ್ಕೆ ಮರಳಿರುವ ಸಿದ್ದಪ್ಪ ಅವರಿಂದ ಉಳಿದ‌ ಯುವಕರು ಸ್ಪೂರ್ತಿ ಪಡೆಯಬೇಕಿದೆ. ಆ ಮೂಲಕ ತಮ್ಮ ಉಜ್ವಲ ಭವಿಷ್ಯದತ್ತ ಯೋಚನೆ ಮಾಡಬೇಕಿದೆ.

ಇದನ್ನೂ ಓದಿ: ಪಾದಚಾರಿಗೆ ಡಿಕ್ಕಿ ಹೊಡೆದು.. ಅಡಿಕೆ ತೋಟಕ್ಕೆ ನುಗ್ಗಿದ ಕಾರು: ವೃದ್ಧ ತಂದೆಯ ಸಾವಿಗೆ ಬಿಕ್ಕಿ ಬಿಕ್ಕಿ ಅತ್ತ ಯೋಧ

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ