ಕಾರಿಗೆ ಪಂಕ್ಚರ್​ ಹಾಕಿದ್ರಾ ಮೈಸೂರು DC ರೋಹಿಣಿ ಸಿಂಧೂರಿ‌? ವಿಡಿಯೋ ಫುಲ್ ವೈರಲ್

ಕಾರಿಗೆ ಪಂಕ್ಚರ್​ ಹಾಕಿದ್ರಾ ಮೈಸೂರು DC ರೋಹಿಣಿ ಸಿಂಧೂರಿ‌? ವಿಡಿಯೋ ಫುಲ್ ವೈರಲ್
ಕಾರಿಗೆ ಪಂಕ್ಚರ್​ ಹಾಕಿದ ಮೈಸೂರು DC ರೋಹಿಣಿ ಸಿಂಧೂರಿ‌

Rohini Sindhuri: ಮೈಸೂರು ಜಿಲ್ಲೆಯ ಡಿಸಿಯಾಗಿರುವ ರೋಹಿಣಿ‌ ಸಿಂಧೂರಿ ಕಾರಿಗೆ ಜಾಕ್ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸಿಂಧೂರಿಯವರು ಕುಟುಂಬದ ಜೊತೆ ಹೊರ ಹೋಗಿದ್ದ ಸಂದರ್ಭದಲ್ಲಿ ಕಾರಿನ ಟೈರ್ ಕಳಚಿ ಪಂಕ್ಚರ್ ಹಾಕಿದ್ದಾರೆ. ಇದೇ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ayesha Banu

| Edited By: Apurva Kumar Balegere

Feb 26, 2021 | 11:28 AM


ಮೈಸೂರು: ಜಿಲ್ಲಾಧಿಕಾರಿ ರೋಹಿಣಿ‌ ಸಿಂಧೂರಿ ತಮ್ಮ ಕಾರಿನ ಟೈರ್ ಕಳಚುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಡಿಸಿ ಅವರ ಈ ಸಾಹಸದ ವಿಡಿಯೋ ನೋಡಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉನ್ನತ ಅಧಿಕಾರಿಯೊಬ್ಬರು ಈ ರೀತಿ ಸಂಕೋಚವಿಲ್ಲದೆ ತಮ್ಮ ಕಾರಿನ ಟೈರ್ ಬಿಚ್ಚಲು ಮುಂದಾಗಿದ್ದಾರೆ ಎಂದು ಅವರ ಸರಳತೆಯನ್ನು ಹೊಗಳಿದ್ದಾರೆ. ಆದ್ರೆ ಕೆಲವರು ಇವರು ರೋಹಿಣಿ ಸಿಂಧೂರಿಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ತನ್ನ ಕುಟುಂಬದ ಜೊತೆ ಹೊರ ಹೋಗಿದ್ದ ಸಂದರ್ಭದಲ್ಲಿ ಕಾರಿನ ಟೈರ್ ಪಂಚರ್ ಆದ ಕಾರಣ ಸ್ವತಃ ರೋಹಿಣಿ‌ ಸಿಂಧೂರಿ ಟೈರ್ ಬದಲು ಮಾಡಲು ಮುಂದಾಗಿದ್ದಾರೆ. ಈ ವೇಳೆ ಮೈಸೂರು ಡಿಸಿ ನೆಲದ ಮೇಲೆ ಕೂತು ಗಜ ಗಾತ್ರ ಭಾರವಿರುವ ಕಾರಿನಿಂದ ಟೈರನ್ನು ಕಳಚಿದ್ದಾರೆ. ಈ ವೇಳೆ ಸಾರ್ವಜನಿಕರೊಬ್ಬರು ಅವರ ಹತ್ತಿರ ಬಂದು ತಾವು ರೋಹಿಣಿ ಸಿಂಧೂರಿ ಅಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರೋಹಿಣಿ‌ಯವರು ನಕ್ಕು ಸುಮ್ಮನಾಗಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ‌ಯವರ ಸಾಹಸದ ವಿಡಿಯೋವನ್ನು ಸಾರ್ವಜನಿಕರು ಚಿತ್ರಿಸಿದ್ದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದೆ. ಮೈಸೂರು ಡಿಸಿಯ ಸರಳತೆ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮೈಸೂರು ಜಿಲ್ಲಾಧಿಕಾರಿಗೆ ಕೊಲೆಸ್ಟ್ರಾಲ್ ತಲೆಗೆ ಹತ್ತಿದೆ, ರೋಹಿಣಿ ಸಿಂಧೂರಿ ವಿರುದ್ಧ MLA, MLC ಆಕ್ರೋಶ

ಸಾರ್ವಜನಿಕರು ಇದನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದೆ. ಮೈಸೂರು ಡಿಸಿಯ ಸರಳತೆ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada