ಕೈ ಕಟ್ಟಿ ಕುಳಿತ ಸರ್ಕಾರಗಳಿಗೆ ಎಚ್ಚರಿಕೆ.. ಇಂದು ಲಾರಿ ಮಾಲೀಕರಿಂದ ಒಂದು ದಿನ ಸಾಂಕೇತಿಕ ಧರಣಿ

Bharat Bandh 2021 | ಒಂದ್ಕಡೆ ಕೊರೊನಾಘಾತ.. ಮತ್ತೊಂದ್ಕಡೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ.. ಇದ್ರ ನಡುವೇ ದಿನೇ ದಿನೆ ಹೆಚ್ಚುತ್ತಿರೋ ಡೀಸೆಲ್ ದರ.. ಜನ ಸಾಮಾನ್ಯರಷ್ಟೇ ಅಲ್ಲ ಈ ದುಬಾರಿ ದುನಿಯಾದಿಂದ ಲಾರಿ ಮಾಲೀಕರು ತತ್ತರಿಸಿ ಹೋಗಿದ್ದಾರೆ. ಬೆಲೆ ಏರಿಕೆಗೆ ಕಡಿವಾಣ ಹಾಕದ ಸರ್ಕಾರಗಳ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದು, ಇದು ಕೇವಲ ಸ್ಯಾಂಪಲ್ ಅಷ್ಟೇ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

ಕೈ ಕಟ್ಟಿ ಕುಳಿತ ಸರ್ಕಾರಗಳಿಗೆ ಎಚ್ಚರಿಕೆ.. ಇಂದು ಲಾರಿ ಮಾಲೀಕರಿಂದ ಒಂದು ದಿನ ಸಾಂಕೇತಿಕ ಧರಣಿ
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ
Follow us
ಆಯೇಷಾ ಬಾನು
|

Updated on: Feb 26, 2021 | 7:13 AM

ಬೆಂಗಳೂರು: ಕಳೆದೊಂದು ವರ್ಷದಿಂದ ಅಬ್ಬರಿಸ್ತಿರೋ ಕೊರೊನಾದಿಂದ ಹಲವು ವಲಯಗಳಿಗೆ ಪೆಟ್ಟು ಬಿದ್ದಿದೆ. ಲಾಕ್​ಡೌನ್​ನಿಂದ ಇಡೀ ದೇಶವೇ ಸ್ತಬ್ಧವಾಗಿತ್ತು. ಅಗತ್ಯಸೇವೆಗಳನ್ನ ಹೊರತುಪಡಿಸಿ ಉಳಿದ ಸೇವೆಗಳಿಗೆ ಬ್ರೇಕ್ ಹಾಕಿದ್ದರಿಂದ ಸರಕು ಸಾಗಣೆ ವಾಹನಗಳ ಓಡಾಟ ನಿಂತಿತ್ತು. ಇದೆಲ್ಲಾ ಆಗಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿವೆ ಅಂದುಕೊಳ್ಳುತ್ತಿರೋವಾಗಲೇ ತೈಲ ದರ ಏರಿಕೆಯಾಗ್ತಿದೆ. ಅದ್ರಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ನೂರರ ಗಡಿ ಮುಟ್ಟಿದೆ. ದೇಶದ ಕೆಲವೆಡೆ ಪೆಟ್ರೋಲ್ ದರ ಈಗಾಗಲೇ ನೂರರ ಗಡಿಯನ್ನ ದಾಟಿದ್ದು. ಅಗತ್ಯವಸ್ತುಗಳ ಬೆಲೆ ದಿನೇ ದಿನೆ ಗಗನಕ್ಕೆ ಏರ್ತಿದೆ. ಇದಕ್ಕೆ ಕಡಿವಾಣ ಹಾಕ್ಬೇಕಾದ ಸರ್ಕಾರ ಕೈಕಟ್ಟಿ ಕುಳಿತಿದೆ.

ಕೈ ಕಟ್ಟಿ ಕುಳಿತಿರುವ ಸರ್ಕಾರಗಳಿಗೆ ಲಾರಿ ಮಾಲೀಕರ ಎಚ್ಚರಿಕೆ ಬೆಲೆ ಏರಿಕೆ ಕುರಿತು ಕ್ರಮ ಕೈಗೊಳ್ಳದ ಸರ್ಕಾರಗಳ ಈ ನೀತಿ ಖಂಡಿಸಿ ಲಾರಿ ಮಾಲೀಕರು ರೊಚ್ಚಿಗೆದ್ದಿದ್ದು, ಇಂದು(ಫೆ.26) ಒಂದು ದಿನ ಸಾಂಕೇತಿಕ ಧರಣಿ ನಡೆಸಲು ಮುಂದಾಗಿದ್ದಾರೆ. ಒಂದು ದಿನ ಅಗತ್ಯ ಸೇವೆಗಳನ್ನ ಹೊರತು ಪಡಿಸಿ ಉಳಿದ ಸೇವೆಗಳು ಸಂಪೂರ್ಣ ಸ್ಥಗಿತವಾಗಲಿದೆ ಅಂತ ಲಾರಿ ಮಾಲೀಕರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ರೆ, ಮಾರ್ಚ್​ 15ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸೋದಾಗಿ ಹೇಳಿದ್ರು.

ಸರ್ಕಾರದ ‘ಗುಜರಿ’ ನೀತಿ ವಿರುದ್ಧ ಲಾರಿ ಮಾಲೀಕರು ಗರಂ ಇನ್ನು ನೈಸ್ ರಸ್ತೆಯ ಟೋಲ್​ಗಳಲ್ಲಿ ಫಾಸ್ಟ್​ಟ್ಯಾಗ್ ಇನ್ನೂ ಅಳವಡಿಕೆಯಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಕೂಡಲೇ ಕ್ರಮ ಕೈಗೊಳ್ಬೇಕು ಅಂತ ಆಗ್ರಹಿಸಿದ ಲಾರಿ ಮಾಲೀಕರು, ರಾಜ್ಯದಲ್ಲಿರೋ ಅನಧಿಕೃತ ಟೋಲ್​ಗಳನ್ನ ಕೂಡಲೇ ತೆರವು ಮಾಡ್ಬೇಕು. ಜೊತೆಗೆ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರೋ ಗುಜರಿ ನೀತಿ ಬಗ್ಗೆಯೂ ಲಾರಿ ಮಾಲೀಕರು ಫುಲ್ ಗರಂ ಆಗಿದ್ದಾರೆ. ಯಾವುದೇ ಕಾರಣಕ್ಕೂ ಈ ನೀತಿ ಜಾರಿಗೆ ತರಬಾರದು. ಒಂದು ವೇಳೆ ಈ ನೀತಿ ಏನಾದ್ರೂ ಜಾರಿಯಾದರೆ, ಅದು ಲಾರಿ ಮಾಲೀಕರ ಪಾಲಿಗೆ ಮರಣಶಾಸನವಾಗಲಿದೆ ಅಂತಾ ಹೇಳಿದ್ರು.

ಇನ್ನು ವಾಹನಗಳ ವಿಮೆ ಹಣವನ್ನ ಕಡಿಮೆ ಮಾಡಬೇಕು, ಗ್ರೀನ್ ಟ್ಯಾಕ್ಸ್ ತೆರಿಗೆ ಹೆಚ್ಚಳ ಹಿಂಪಡೆಯೋದು ಸೇರಿದಂತೆ ವಿವಿಧ ಬೇಡಿಕಗೆಳ ಈಡೇರಿಕೆಗೆ ಸರ್ಕಾರಕ್ಕೆ ಮಾರ್ಚ್ 14 ರ ವರೆಗೂ ಲಾರಿ ಮಾಲೀಕರು ಡೆಡ್​ಲೈನ್ ನೀಡಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ರೆ ಮಾರ್ಚ್ 15 ರಿಂದ ಒಂದೂವರೆ ಲಕ್ಷ ಲಾರಿಗಳು ಸೇರಿದಂತೆ ವಾಣಿಜ್ಯ ವಾಹನಗಳ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿದ್ದು, ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.

ಇದನ್ನೂ ಓದಿ: ನಾಳೆ ಕರ್ನಾಟಕದಲ್ಲೂ ರಸ್ತೆಗಿಳಿಯಲ್ಲ ಲಾರಿಗಳು; ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಘೋಷಣೆ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?