‘ಇದು ಮಾಡು ಇಲ್ಲವೇ ಮಡಿ ಹೋರಾಟ.. ಮಾರ್ಚ್ 5ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’
ಇದು ಮಾಡು ಇಲ್ಲವೇ ಮಡಿ ಹೋರಾಟ. ಹಾಗಾಗಿ, 2A ಮೀಸಲಾತಿ ತೆಗೆದುಕೊಂಡೇ ಇಲ್ಲಿಂದ ಹೋಗುತ್ತೇವೆ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದರು. ಮಾ.5ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಸಹ ಹೇಳಿದರು.
ಬೆಂಗಳೂರು: ನಾವು 2A ಮೀಸಲಾತಿ ತೆಗೆದುಕೊಂಡೇ ಇಲ್ಲಿಂದ ಹೋಗ್ಬೇಕು ಎಂದು ಪಂಚಮಸಾಲಿ ಸಮುದಾಯದವರು ನಗರದ ಖಾಸಗಿ ಹೋಟೆಲ್ನಲ್ಲಿ ಕಳೆದ 2 ಗಂಟೆಯಿಂದ ನಡೆದ ಸಭೆ ಬಳಿಕ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು. ಮೀಸಲಾತಿ ತೆಗೆದುಕೊಂಡೇ ನಾವು ಹೋಗಬೇಕು. ನಮ್ಮ ಬಗ್ಗೆ ತುಚ್ಛವಾಗಿ ಮಾತನಾಡುವವರನ್ನ ನಾವು ದೊಡ್ಡವರು ಎಂದೇ ತಿಳಿಯೋಣ. ಇದು ಮಾಡು ಇಲ್ಲವೇ ಮಡಿ ಹೋರಾಟ. ಹಾಗಾಗಿ, 2A ಮೀಸಲಾತಿ ತೆಗೆದುಕೊಂಡೇ ಇಲ್ಲಿಂದ ಹೋಗುತ್ತೇವೆ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದರು. ಮಾ.5ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಸಹ ಹೇಳಿದರು. ತೀರ್ಮಾನ ಅಚಲವಾಗಿದೆ, ಮಾಡು ಇಲ್ಲವೇ ಮಡಿ ನಿರ್ಧಾರ ಎಂದು ಪಂಚಮಸಾಲಿ ಸಭೆ ಬಳಿಕ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಗಾಂಧಿ ಹೋರಾಟದಿಂದ ಹಿಂದೆ ಸರಿದಿದ್ರೆ ಸ್ವಾತಂತ್ರ್ಯ ಸಿಗ್ತಿರಲಿಲ್ಲ. ಜಯಮೃತ್ಯುಂಜಯಶ್ರೀ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಎಲ್ಲರೂ ಮಾತಾಡುವುದು ಬೇಡ, ಶ್ರೀಗಳು ಮಾತ್ರ ಮಾತಾಡ್ಲಿ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಕ್ರಿಯವಾಗಿ ಹೋರಾಡಬೇಕು. ಪಂಚಸಾಲಿ ಸಮಾಜದ ಹೋರಾಟಕ್ಕೆ ಹಣ ಬಂದಿದೆ ಅಂತಾರೆ. ಕಾಂಗ್ರೆಸ್ ಪಕ್ಷ 5 ಕೋಟಿ ಹಣ ನೀಡಿದ್ದಾರೆಂದು ಆರೋಪಿಸಿದ್ದಾರೆ. ನಮ್ಮ ಸಮುದಾಯದವರು ಬಿಟ್ರೆ ಯಾರೂ ದೇಣಿಗೆ ಕೊಟ್ಟಿಲ್ಲ ಎಂದು ಸಭೆಯಲ್ಲಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸ್ಪಷ್ಟನೆ ಕೊಟ್ರು.
ಸದನ ಆರಂಭವಾದಗ ಧ್ವನಿ ಎತ್ತುವಂತೆ ಸಮುದಾಯದ ಶಾಸಕರು ಮತ್ತು ಸಚಿವರಿಗೆ ಮನವಿ ಪತ್ರ ಕೊಡ್ತೀವಿ. ಎಲ್ಲ ಪಕ್ಷದ ನಮ್ಮ ಸಮುದಾಯದ ಶಾಸಕರಿಗೆ ಮನವಿ ಮಾಡ್ತೀವಿ. ಸದನದಲ್ಲಿ ಒಕ್ಕೊರಲಿನಿಂದ ಧ್ವನಿ ಎತ್ತುವಂತೆ ಮನವಿ ಮಾಡ್ತೀವಿ. ಆಯಾ ಕ್ಷೇತ್ರದ ಶಾಸಕರು, ಸಚಿವರ ಮನೆಗೆ ತೆರಳಿ ಮನವಿ ಕೊಡ್ತೀವಿ ಎಂದು ಕಾಶಪ್ಪನವರ್ ಹೇಳಿದರು.
ಸ್ವತಃ ಸಿಎಂ ಬಿಎಸ್ವೈರಿಂದ ಮೀಸಲಾತಿ ಗಡುವಿಗಾಗಿ ಪಟ್ಟು ಸ್ವತಃ ಸಿಎಂ ಬಿಎಸ್ವೈರಿಂದ ಮೀಸಲಾತಿ ಗಡುವಿಗಾಗಿ ಪಟ್ಟು ಹಿಡಿಯಲು ಸಮುದಾಯದಿಂದ ನಿರ್ಧಾರ ಕೈಗೊಳ್ಳಲಾಗಿದೆ. ಮೀಸಲಾತಿಗಾಗಿ ಧರಣಿ ನಿರತ ಪಂಚಮಸಾಲಿಗರು ತೀರ್ಮಾನ ಮಾಡಿದ್ದಾರೆ. ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಅಗಿದೆ.
ಸಿಎಂ ಬಿಎಸ್ವೈ ಬದಲು ಬೇರೆ ಸಚಿವರು ಮನವೊಲಿಕೆಗೆ ಬೇರೆ ಯಾರೇ ಬಂದ್ರೂ ತಿರಸ್ಕರಿಸಲು ನಿರ್ಧಾರ ಮಾಡಲಾಗಿದೆ. ಸ್ವತಃ ಸಿಎಂ ನೇರವಾಗಿ ಕಾಲಾವಕಾಶ ಕೇಳಿದ್ರೆ ಮಾತ್ರ ನಿರ್ಧಾರ ಮಾಡುತ್ತೇವೆ. ಹೋರಾಟ ಬಗ್ಗೆ ಅನುಮಾನಿಸಿದವರ ಸಚಿವರ ಮನೆಗಳ ಮುಂದೆ ಧರಣಿ ನಡೆಸುವ ಬಗ್ಗೆಯೂ ಚರ್ಚೆ ನಡೆಯಿತು.
‘ಮಾರ್ಚ್ 4ರವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ’ ಮಾರ್ಚ್ 4ರವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಸಭೆ ಬಳಿಕ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಅಮರಣಾಂತ ಉಪವಾಸ ಸತ್ಯಾಗ್ರಹ ಬಗ್ಗೆ ಸಭೆ ನಡೆಸ್ತೇವೆ. ಮಾ.4ರಂದು ಸಂಜೆ 4 ಗಂಟೆಗೆ ಸಭೆ ಮಾಡಲಾಗುವುದು. ಉಪವಾಸ ಸತ್ಯಾಗ್ರಹ ಎಲ್ಲಿ ಮಾಡಬೇಕೆಂಬ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರ ಸದನದಲ್ಲಿ ಸ್ಪಷ್ಟ ಭರವಸೆಯನ್ನು ಕೊಡಬೇಕು. ಇಲ್ಲದಿದ್ರೆ ಸಭೆ ನಡೆಸಿ ಮುಂದಿನ ಹೋರಾಟ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಹೋರಾಟದ ಮುಂದಿನ ರೂಪರೇಷೆ ಬಗ್ಗೆ ಯೋಚಿಸಲು ಹಿರಿಯರ ಸಲಹಾ ಸಮಿತಿಯೊಂದನ್ನು ರಚಿಸಲು ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಬಲಿಜಿಗರಿಗೆ ನೀಡಿದಂತೆ ನಮಗೂ ಮೀಸಲಾತಿಯನ್ನು ನೀಡಲಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇನ್ನು, ಈ ಹಿಂದೆ ಪಾದಯಾತ್ರೆ ಮತ್ತು ಸಮಾವೇಶವೂ ಯಶಸ್ವಿಯಾಯಿತು ಎಂದು ಸಭೆಯಲ್ಲಿ ಹರಿಹರದ ಮಾಜಿ ಶಾಸಕ ಶಿವಶಂಕರ್ ಹೇಳಿದರು. ನಮ್ಮ 2A ಮೀಸಲಾತಿಗಾಗಿ ಹೋರಾಟ ಯಶಸ್ವಿಯಾಗುತ್ತಿದೆ. ಫೆ.21ರಿಂದ ಧರಣಿ ಸತ್ಯಾಗ್ರಹ ಯಶಸ್ವಿಯಾಗಿ ನಡೆಯುತ್ತಿದೆ. ಕೆಲವರು ಹೋರಾಟ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೋರಾಟಕ್ಕೆ ಹಣ ಎಲ್ಲಿಂದ ಬಂತೆಂದು ಕೇಳುತ್ತಿದ್ದಾರೆ. ಇವರು ಇನ್ನೆಷ್ಟು ದಿನ ಹೋರಾಟ ಮಾಡ್ತಾರೆಂದು ಕೇಳ್ತಿದ್ದಾರೆ. ಎದೆಗುಂದುವುದು ಬೇಡ, ಹೋರಾಟ ಮುಂದುವರಿಸೋಣ. ಮಾರ್ಚ್ 4ರವರೆಗೆ ಧರಣಿ ಸತ್ಯಾಗ್ರಹ ಮುಂದುವರಿಸೋಣ. ರಾಜ್ಯ ಸರ್ಕಾರ ನಡೆ ನೋಡಿಕೊಂಡು ಮುಂದುವರಿಯೋಣ ಎಂದು ಸಭೆಯ ವೇಳೆ ಹರಿಹರದ ಮಾಜಿ ಶಾಸಕ ಶಿವಶಂಕರ್ ಹೇಳಿದರು.
ಇದಲ್ಲದೆ, ಸರ್ಕಾರದ ಯಾವುದೇ ಸೂಚನೆಗೆ ನಾವು ಬಗ್ಗುವುದು ಬೇಡ. ಮಾ. 4ರವರೆಗೆ ಸರ್ಕಾರದ ನಡೆ ನೋಡಿಕೊಂಡು ತೀರ್ಮಾನ ಮಾಡೋಣ. ಜಿಲ್ಲಾ, ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಧರಣಿ ಮಾಡೋಣ. ಜಯಮೃತ್ಯುಂಜಯ ಸ್ವಾಮೀಜಿ ಉಪವಾಸ ಕೂರುವುದು ಬೇಡ ಎಂದು ಸಭೆಯಲ್ಲಿ ವೀಣಾ ಕಾಶಪ್ಪನವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: Mukesh Ambani | ಮುಕೇಶ್ ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ
Published On - 9:32 pm, Thu, 25 February 21