ನಿವೃತ್ತರಾಗುತ್ತಿರುವ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್​ಗೆ ಸರ್ಕಾರದ ವತಿಯಿಂದ ಸನ್ಮಾನ; ಯಡಿಯೂರಪ್ಪರಿಂದ ಶ್ಲಾಘನೆ

|

Updated on: Dec 28, 2020 | 3:11 PM

ಹಿಂದಿನ ಸಿಎಸ್​ ರತ್ನಪ್ರಭಾ ನಿವೃತ್ತಿಯ ನಂತರ 2018ರ ಜೂನ್​ನಲ್ಲಿ ವಿಜಯ ಭಾಸ್ಕರ್​ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 1983ನೇ ಬ್ಯಾಚ್​ನ ಐಎಎಸ್​ ಅಧಿಕಾರಿಯಾಗಿದ್ದಾರೆ.

ನಿವೃತ್ತರಾಗುತ್ತಿರುವ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್​ಗೆ ಸರ್ಕಾರದ ವತಿಯಿಂದ ಸನ್ಮಾನ; ಯಡಿಯೂರಪ್ಪರಿಂದ ಶ್ಲಾಘನೆ
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸಿಎಸ್​ ವಿಜಯ ಭಾಸ್ಕರ್​ಗೆ ಸನ್ಮಾನ
Follow us on

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್​ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದು, ಅವರನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ, ಇಡೀ ಸಚಿವ ಸಂಪುಟದ ಪರವಾಗಿ ಸನ್ಮಾನಿಸಿದರು.

ಹಿಂದಿನ ಸಿಎಸ್​ ರತ್ನಪ್ರಭಾ ನಿವೃತ್ತಿಯ ನಂತರ 2018ರ ಜೂನ್​ನಲ್ಲಿ ವಿಜಯ ಭಾಸ್ಕರ್​ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 1983ನೇ ಬ್ಯಾಚ್​ನ ಐಎಎಸ್​ ಅಧಿಕಾರಿಯಾಗಿದ್ದಾರೆ.. ಇವರು ಸಿಎಸ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ 64 ಸಚಿವ ಸಂಪುಟ ಸಭೆಗಳನ್ನು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಸಿದ್ದಾರೆ. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯಭಾಸ್ಕರ್​ರನ್ನು ಶ್ಲಾಘಿಸಿದರು. ಇಡೀ ಸರ್ಕಾರದ ಪರವಾಗಿ ಶಾಲು ಹೊದೆಸಿ, ಸ್ಮರಣಿಕೆ ಕೊಟ್ಟು ಸನ್ಮಾನಿಸಿದರು.

Published On - 3:07 pm, Mon, 28 December 20