AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಕರ್ತವ್ಯನಿರತ ಅಂಗನವಾಡಿ ಸಹಾಯಕಿ ಹೃದಯಾಘಾತದಿಂದ ಸಾವು

ಮಕ್ಕಳ ದಿನಾಚರಣೆ ಹಿನ್ನೆಲೆ ಅಂಗನವಾಡಿ ಸಹಾಯಕಿಯೊಬ್ಬರು ಮಕ್ಕಳಿಗೆ ಬಿಸಿ ಬಿಸಿ ಅಡುಗೆ ಮಾಡಿ ಬಡಿಸಲು ಮುಂದಾಗಿದ್ದಾರೆ. ಈ ವೇಳೆ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ: ಕರ್ತವ್ಯನಿರತ ಅಂಗನವಾಡಿ ಸಹಾಯಕಿ ಹೃದಯಾಘಾತದಿಂದ ಸಾವು
ಕರ್ತವ್ಯನಿರತ ಅಂಗನವಾಡಿ ಸಹಾಯಕಿ ಹೃದಯಾಘಾತದಿಂದ ಸಾವು
TV9 Web
| Updated By: Rakesh Nayak Manchi|

Updated on:Nov 15, 2022 | 11:54 AM

Share

ಚಿಕ್ಕಬಳ್ಳಾಪುರ: ಮಕ್ಳಳ ದಿನಾಚರಣೆ ಪ್ರಯುಕ್ತ ಅಂಗನವಾಡಿ ಕೇಂದ್ರದ ಸಹಾಯಕಿಯೊಬ್ಬರು ಮಕ್ಕಳಿಗೆ ಅಡುಗೆ ಮಾಡುತ್ತಲೇ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಂಡಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡದಿದೆ. ಬಂಡಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿಯಾಗಿರುವ ಬೈರಮ್ಮ, ಬಂಡಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮೂವತ್ತು ವರ್ಷಗಳಿಂದ ಕೆಲಸ ಮಾಡುತಿದ್ದು ಉತ್ತಮ ಸೇವೆ ಸಲ್ಲಿಸಿದ್ದಾರೆ. ಆದರೆ ಮಕ್ಕಳ ದಿನಾಚಣೆ (ನ.14)ಯಂದು ಅಂಗನವಾಡಿಯಲ್ಲಿ ಅಡುಗೆ ಮಾಡುತ್ತಿದ್ದಾಗ ಕುಸುದುಬಿದ್ದಿದ್ದಾರೆ. ಈ ವೇಳೆ ಅಕ್ಕಪಕ್ಕವರು ಬಂದು ನೋಡುವಷ್ಟರಲ್ಲಿ ಬೈರಮ್ಮ ಕೊನೆಯುಸಿರೆಳೆದಿದ್ದಾರೆ.

ಬಂಡಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಹುಟ್ಟು ಹಬ್ಬದಂದು ಮಕ್ಕಳ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗ್ರಾಮದ ಮುಖಂಡರನ್ನು ಕರೆಸಿ ಮುಖಂಡರ ಮುಂದೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಸಿ ನಕ್ಕು ನಲಿಸೋಣ ಅಂದು ಕೊಂಡಿದ್ದ ಅಂಗನವಾಡಿ ಸಹಾಯಕಿ ಭಾರ್ಗವಿ, ಅದಕ್ಕೆ ಬೇಕಾದ ಎಲ್ಲಾ ತಯಾರಿ ನಡೆಸಿದ್ದರು. ಟೊಮ್ಯಾಟೋ ಬಾತ್, ಕೇಸರಿ ಬಾತ್ ಮಾಡಿ ಮಕ್ಕಳಿಗೆ ಉಣಬಡಿಸಿ ಮಕ್ಕಳೊಂದಿಗೆ ಕಾಲಕಳೆಯೋಣ ಅಂದುಕೊಂಡಿದ್ದವರಿಗೆ ಅಂಗನವಾಡಿ ಅಡುಗೆ ಸಹಾಯಕಿ ಬೈರಮ್ಮನ ಹಟಾತ್ ಸಾವು ಕುಟುಂಭಸ್ಥರಿಗೂ ಮತ್ತು ಮಕ್ಕಳಿಗೂ ಆಘಾತ ತಂದಿದೆ.

ಇನ್ನೂ ಅಂಗನವಾಡಿ ಕೇಂದ್ರದಲ್ಲಿಯೇ ಮೃತಪಟ್ಟಿದ್ದ ಅಡುಗೆ ಸಹಾಯಕಿ ಬೈರಮ್ಮ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಗೆ ರವಾನಿಸಿದ್ದು, ಹೃದಯಾಘಾತದಿಂದ ಬೈರಮ್ಮ ಮೃತಪಟ್ಟಿರುವ ಶಂಕ್ಯೆ ವ್ಯಕ್ತವಾಗಿದೆ.

ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Tue, 15 November 22