ಸತ್ತ ಹಕ್ಕಿಗಳ ವರದಿ ನೆಗೆಟೀವ್, ಹಕ್ಕಿ ಜ್ವರದ ಭೀತಿ ಬೇಡ: ಜಿಲ್ಲಾಧಿಕಾರಿ ಲತಾ ಅಭಯ

| Updated By: ಸಾಧು ಶ್ರೀನಾಥ್​

Updated on: Jan 09, 2021 | 1:11 PM

ಜಿಲ್ಲೆಯಲ್ಲಿ ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈವರೆಗೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಬಗ್ಗೆ ವರದಿಯಾಗಿಲ್ಲ. ಈಗಾಗಲೇ ಜಿಲ್ಲೆಯಾದ್ಯಂತ ಮುಂಜಾಗ್ರತೆ ವಹಿಸಿಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಸತ್ತ ಹಕ್ಕಿಗಳ ವರದಿ ನೆಗೆಟೀವ್, ಹಕ್ಕಿ ಜ್ವರದ ಭೀತಿ ಬೇಡ: ಜಿಲ್ಲಾಧಿಕಾರಿ ಲತಾ ಅಭಯ
ಸ್ಥಳ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು
Follow us on

ಚಿಕ್ಕಬಳ್ಳಾಪುರ: ಜಿಲ್ಲೆಯ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಗುರುವಾರ ಮೃತಪಟ್ಟ 2 ಪಕ್ಷಿಗಳ ವರದಿ ಹಾಗೂ ಅಸ್ವಸ್ಥಗೊಂಡು ಮಾರ್ಗ ಮಧ್ಯದಲ್ಲಿ ಮೃತಪಟ್ಟ 2 ಪಕ್ಷಿಗಳ ವರದಿ ನೆಗೆಟೀವ್ ಬಂದಿದ್ದು, ಜಿಲ್ಲೆಗೆ ಹಕ್ಕಿ ಜ್ವರದ ಭೀತಿ ಇಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕಾ ಸಂಶೋಧನಾ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಒಟ್ಟು 4 ಪಕ್ಷಿಗಳನ್ನು ಹಕ್ಕಿ ಜ್ವರದ ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಮೃತಪಟ್ಟ 2 ಪಕ್ಷಿಗಳು ಹಾಗೂ ಕೇಂದ್ರಕ್ಕೆ ಕೊಂಡೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟ2 ಪಕ್ಷಿಗಳು ಸೇರಿ ಒಟ್ಟು 4ಪಕ್ಷಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಈ ಪರೀಕ್ಷೆಯಲ್ಲಿ ಹಕ್ಕಿ ಜ್ವರದ ವರದಿ ನೆಗೆಟೀವ್ ಬಂದಿದೆ. ಇದಲ್ಲದೇ, 28 ದಿನಗಳ ಹಿಂದೆ ಇದೇ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಮೃತಪಟ್ಟಿದ್ದ 2 ಹಕ್ಕಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಪ್ರಕಾರ ಈ 2 ಹಕ್ಕಿಗಳು ಯಾವುದೇ ಸೋಂಕಿನಿಂದ ಮೃತಪಟ್ಟಿಲ್ಲ ಎಂದು ದೃಢಪಟ್ಟಿದೆ.

ಪಕ್ಷಿಯ ಒಂದು ನೋಟ

ಜಿಲ್ಲೆಯಲ್ಲಿ ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈವರೆಗೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಬಗ್ಗೆ ವರದಿಯಾಗಿಲ್ಲ. ಈಗಾಗಲೇ ಜಿಲ್ಲೆಯಾದ್ಯಂತ ಮುಂಜಾಗ್ರತೆ ವಹಿಸಿಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು  ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಹಕ್ಕಿ ಜ್ವರ ಪರೀಕ್ಷೆಯ ವರದಿ ಮತ್ತು ಸತ್ತ ಪಕ್ಷಿಯ ದೃಶ್ಯ

ಯಾವುದೇ ಅನಾರೋಗ್ಯ ಸ್ಥಿತಿಯಲ್ಲಿ ಅಥವಾ ಮರಣ ಹೊಂದಿದ ಸ್ಥಿತಿಯಲ್ಲಿ ಹಕ್ಕಿಗಳು ಕಂಡು ಬಂದಲ್ಲಿ ಕೂಡಲೇ ಅರಣ್ಯ ಇಲಾಖೆ ಅಥವಾ ಪಶು ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಬೇಕು. ಹಕ್ಕಿ ಜ್ವರ ಎಂಬ ಸುಳ್ಳು ವದಂತಿಯಿಂದಾಗಿ ಯಾವುದೇ ವನ್ಯ ಪ್ರಾಣಿಗಳಿಗೆ, ಹಕ್ಕಿಗಳಿಗೆ ಸಾರ್ವಜನಿಕರು ತೊಂದರೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಆರ್. ಲತಾ ಮನವಿ ಮಾಡಿದ್ದಾರೆ.

ಕೊರೊನಾ ಕಾಟವೇ ಮುಗ್ದಿಲ್ಲಾ.. ಶುರುವಾಯ್ತಾ ಹಕ್ಕಿ ಜ್ವರದ ಕಾಟ!