ಯುವರಾಜ್ ಸ್ವಾಮಿ ಬಿಜೆಪಿ ಅಥವಾ ಸಂಘ ಪರಿವಾರಕ್ಕೆ ಸಂಬಂಧಪಟ್ಟವನಲ್ಲ: ಡಿಸಿಎಂ ಸವದಿ
ನಮ್ಮದು ಸಾರ್ವಜನಿಕ ಜೀವನ..ಯಾರ್ಯಾರೋ ಮನೆಗೆ ಬರುತ್ತಾರೆ. ನಾನು ಬಿಜೆಪಿ ಕಾರ್ಯಕರ್ತ, ಸಂಘಪರಿವಾರದ ಮುಖಂಡ ಎಂದು ಪರಿಚಯ ಮಾಡಿಕೊಳ್ಳುತ್ತಾರೆ.
ಬೆಂಗಳೂರು: ವಿವಿಧ ರಾಜಕಾರಣಿಗಳ ಹೆಸರಲ್ಲಿ ಹಲವರಿಗೆ ವಂಚನೆ ಮಾಡಿ, ಇದೀಗ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಯುವರಾಜ್ ಸ್ವಾಮಿಯಿಂದಾಗಿ ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಈಗಾಗಲೇ ಕಂಟಕ ಎದುರಾಗಿದೆ. ಯುವರಾಜ್ ಖಾತೆಯಿಂದ ರಾಧಿಕಾರ ಅಕೌಂಟ್ಗೆ ಹಣ ವರ್ಗಾವಣೆಯಾದ ಹಿನ್ನೆಲೆಯಲ್ಲಿ, ನಟಿಯನ್ನೂ ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದಾರೆ.
ಇನ್ನು ವಂಚಕ ಯುವರಾಜ್ ಸ್ವಾಮಿ ಹಲವು ಗಣ್ಯರ ಜತೆ ಇರುವ ಫೋಟೋಗಳೂ ವೈರಲ್ ಆಗುತ್ತಿದ್ದು, ಕುತೂಹಲ ಮೂಡಿಸಿದೆ. ಯುವರಾಜ್ ಸ್ವಾಮಿ ಡಿಸಿಎಂ ಲಕ್ಷ್ಮಣ್ ಸವದಿ, ಕೆ.ಸಿ.ವೇಣುಗೋಪಾಲ್, ಸಚಿವ ವಿ.ಸೋಮಣ್ಣ, ಮುರುಗೇಶ್ ನಿರಾಣಿ ಜತೆಗೆ ಇರುವ ಫೋಟೋಗಳೂ ಸಿಕ್ಕಾಪಟೆ ವೈರಲ್ ಆಗುತ್ತಿವೆ.
ಆತನ ಹಿನ್ನೆಲೆ ನನಗೆ ಗೊತ್ತಿರಲಿಲ್ಲ.. ಇನ್ನು ಲಕ್ಷ್ಮಣ್ ಸವದಿಗೆ ಯುವರಾಜ್ ಸನ್ಮಾನ ಮಾಡುತ್ತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ, ಅಥಣಿಯಲ್ಲಿ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದು, ಯುವರಾಜ್ನ ಹಿನ್ನೆಲೆ ನನಗೆ ಮೊದಲು ಗೊತ್ತಿರಲಿಲ್ಲ. ನಮ್ಮದು ಸಾರ್ವಜನಿಕ ಜೀವನ..ಯಾರ್ಯಾರೋ ಮನೆಗೆ ಬರುತ್ತಾರೆ. ನಾನು ಬಿಜೆಪಿ ಕಾರ್ಯಕರ್ತ, ಸಂಘ ಪರಿವಾರದ ಮುಖಂಡ ಎಂದು ಪರಿಚಯ ಮಾಡಿಕೊಳ್ಳುತ್ತಾರೆ. ಹೀಗೆ ಹೇಳಿಕೊಂಡು ಸತ್ಕಾರ ಮಾಡಲು ಬರುವವರನ್ನು ತಿರಸ್ಕಾರ ಮಾಡಲು ಸಾಧ್ಯವಾಗುವುದಿಲ್ಲ. ಯುವರಾಜ್ ಕೂಡ ಹಾಗೇ ಬಂದಿದ್ದ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೀಗ ಯುವರಾಜ್ ಸ್ವಾಮಿ ಪೊಲೀಸ್ ವಶದಲ್ಲಿದ್ದಾನೆ. ಅವನ ಬಗ್ಗೆ ನಾವು ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದೇವೆ. ಬಿಜೆಪಿಯೊಂದಿಗಾಗಲೀ, ಸಂಘ ಪರಿವಾರಕ್ಕಾಗಲೀ ಅವನು ಸಂಬಂಧಪಟ್ಟವನಲ್ಲ ಎಂದು ಹೇಳಿದ್ದಾರೆ.
ಚಿತ್ರದುರ್ಗದ ಮಠಕ್ಕೆ ಯುವರಾಜ್ ಸ್ವಾಮೀಜಿಯಾಗಿದ್ದ.. ಆದರೆ ಆತನನ್ನು ಅಲ್ಲಿಂದ ಹೊರಗೆ ಹಾಕಿದ್ರು -ಲಕ್ಷ್ಮಣ ಸವದಿ
Published On - 12:18 pm, Sat, 9 January 21