ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ.. ನಿರೀಕ್ಷೆಯಂತೆ ನಾನೂ ಕೆಲಸ ಮಾಡಿಲ್ಲ: ವಾಸ್ತವ ಒಪ್ಪಿಕೊಂಡ CM ಯಡಿಯೂರಪ್ಪ!
ಕೊರೊನಾ, ಅತಿವೃಷ್ಟಿ, ಬರಗಾಲಗಳ ಹೊಡೆತದಿಂದ ರಾಜ್ಯ ಆರ್ಥಿಕವಾಗಿ ನಲುಗಿ ಹೋಗಿದೆ. ಹೀಗಾಗಿ ನಾನು ನಿರೀಕ್ಷೆಯಂತೆ ಯಾವ ಕೆಲಸವನ್ನೂ ಮಾಡಿಲ್ಲ. ಬಜೆಟ್ನಲ್ಲಿಯೂ 40-50 ಸಾವಿರ ಕೋಟಿ ಖೋತಾ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಪ್ಪಳದ ಬಸಾಪುರದಲ್ಲಿ ಹೇಳಿಕೆ ನೀಡಿದ್ದಾರೆ.
ಕೊಪ್ಪಳ: ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಕೊರೊನಾ, ಅತಿವೃಷ್ಟಿ, ಬರಗಾಲಗಳ ಹೊಡೆತದಿಂದ ರಾಜ್ಯ ಆರ್ಥಿಕವಾಗಿ ನಲುಗಿ ಹೋಗಿದೆ. ಹೀಗಾಗಿ ನಾನು ನಿರೀಕ್ಷೆಯಂತೆ ಯಾವ ಕೆಲಸವನ್ನೂ ಮಾಡಿಲ್ಲ. ಬಜೆಟ್ನಲ್ಲಿಯೂ 40-50 ಸಾವಿರ ಕೋಟಿ ಖೋತಾ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಪ್ಪಳದ ಬಸಾಪುರದಲ್ಲಿ ವಾಸ್ತವ ಚಿತ್ರಣ ಬಿಡಿಸಿಟ್ಟಿದ್ದಾರೆ.
ದೇಶದಲ್ಲಿ ಮೊದಲ ಆಟಿಕೆ ಕ್ಲಸ್ಟರ್ (Toy Cluster) ಕಾರ್ಯಕ್ರಮಕ್ಕೆ ಭೂಮಿ ಪೂಜೆ ಮಾಡ್ತಾ ಇದ್ದೇವೆ. ಇದರ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕರೆಯಿಸಬೇಕೆಂಬ ಆಪೇಕ್ಷೆ ಇದೆ ಎಂದು ಇದೇ ವೇಳೆ ಹೇಳಿದ್ದಾರೆ. ಭೂಮಿ ಪೂಜೆ ಬಳಿಕ ಕೃಷಿ ಸಂಜೀವಿನಿ ವಾಹನಕ್ಕೆ ಹಸಿರು ನಿಶಾನೆ ತೋರಿರುವ ಯಡಿಯೂರಪ್ಪ ಇಂದು ಸ್ವಾಭಿಮಾನಿ ರೈತ ಕಾರ್ಡ್ ವಿತರಣೆಯನ್ನೂ ಮಾಡಿದ್ದಾರೆ.
ಹೈಕಮಾಂಡ್ ಹೇಳಿದಾಗ ಸಂಪುಟ ವಿಸ್ತರಣೆ ಅನೇಕ ದಿನಗಳಿಂದ ಕೇಳಿ ಬರುತ್ತಿರುವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಹೈಕಮಾಂಡ್ ಯಾವಾಗ ಹೇಳುತ್ತದೋ ಆಗ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಿದ್ದಾರೆ. ಆ ಮೂಲಕ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗಲಿದೆಯೋ? ಇಲ್ಲವೋ? ಎಂಬುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂಬಂರ್ಥದಲ್ಲಿ ಹೇಳಿಕೆ ನೀಡಿದ್ದಾರೆ.