ಚಿಕ್ಕಬಳ್ಳಾಪುರ: ಖಾಜಿ ನ್ಯಾಯ ಪಂಚಾಯ್ತಿ ಆಯ್ತು ಪೆರೇಸಂದ್ರ ಪೊಲೀಸ್ ಠಾಣೆ!

| Updated By: ಗಂಗಾಧರ​ ಬ. ಸಾಬೋಜಿ

Updated on: Aug 05, 2024 | 9:33 PM

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಪೆರೇಸಂದ್ರ ಗ್ರಾಮದಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಆಟೋ ಚಾಲಕನ ಬೆಂಬಲಿಗರಿಂದ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದರೂ ಪ್ರಕರಣ ದಾಖಲಿಸದ ಅಧಿಕಾರಿಗಳು ರಾಜಿ ಮೂಲಕ ಕೇಸ್​ ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಎನ್ನಲಾಗುತ್ತಿದೆ.

ಚಿಕ್ಕಬಳ್ಳಾಪುರ: ಖಾಜಿ ನ್ಯಾಯ ಪಂಚಾಯ್ತಿ ಆಯ್ತು ಪೆರೇಸಂದ್ರ ಪೊಲೀಸ್ ಠಾಣೆ!
ಖಾಜಿ ನ್ಯಾಯ ಪಂಚಾಯ್ತಿ ಆಯ್ತು ಪೆರೇಸಂದ್ರ ಪೊಲೀಸ್ ಠಾಣೆ!
Follow us on

ಚಿಕ್ಕಬಳ್ಳಾಪುರ, ಆಗಸ್ಟ್​ 05: ಫೈನಾನ್ಸ್​ ಒಂದರಲ್ಲಿ ತೆಗೆದುಕೊಂಡಿದ್ದ ಆಟೋದ ಇಎಂಐ ಕಂತಿನ ಹಣ ಕಟ್ಟಡದ ಕಾರಣ ಖಾಸಗಿ ಫೈನಾನ್ಸ್​ನವರು ಆಟೋ ಸೀಜ್‌ಗೆ ಮುಂದಾಗಿದ್ದರು. ಆಗ ಆಟೋ ಚಾಲಕನ (Auto driver) ಬೆಂಬಲಿಗರು ಫೈನಾನ್ಸ್ ಕಂಪನಿಯ ಏಜೆಂಟ್ ಮೇಲೆ ಗಲಾಟೆ ಮಾಡಿ ಹಲ್ಲೆ (attack) ಮಾಡಿದ್ದರು. ಆಗ ಸ್ಥಳಕ್ಕೆ ಬಂದ ಕ್ರೈಂ ಪೊಲೀಸ್ ಗಲಾಟೆ ಬಿಡಿಸಲು ಮುಂದಾಗಿದ್ದಕ್ಕೆ ಆಟೋ ಚಾಲಕನ ಬೆಂಬಲಿಗರು ಕರ್ತವ್ಯನಿರತ ಪೊಲೀಸಪ್ಪನ ಮೇಲೆ ಹಲ್ಲೆ ಮಾಡಿ ದಬ್ಬಾಳಿಕೆ ಮಾಡಿದ್ದಾರೆ. ಆದರೂ ಆ ಠಾಣೆಯ ಪೊಲೀಸ್ ಅಧಿಕಾರಿಗಳು ಖಾಜಿ ನ್ಯಾಯ ಪಂಚಾಯ್ತಿ ಮಾಡಿ ಪ್ರಕರಣ ಮುಚ್ಚಿ ಹಾಕಿದ ಪ್ರಸಂಗ ನಡೆದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಪೆರೇಸಂದ್ರ ಗ್ರಾಮದಲ್ಲಿ ನೂತನ ಪೊಲೀಸ್ ಠಾಣೆಯಿದೆ. ಪೆರೇಸಂದ್ರ ನಿವಾಸಿ ಶಾಸಕ ಪ್ರದೀಪ್ ಈಶ್ವರ್, ಸಂಸದ ಡಾ. ಕೆ.ಸುಧಾಕರ್ ಸಹಾ ಇದ್ದಾರೆ. ಪೆರೇಸಂದ್ರ ಪೊಲೀಸ್‌ಠಾಣೆ ವ್ಯಾಪ್ತಿಯ ಚಿಕ್ಕಅರೂರು ನಿವಾಸಿಯೊಬ್ಬರು ಬಾಗೇಪಲ್ಲಿ ಮೂಲದ ಖಾಸಗಿ ಫೈನಾನ್ಸ್​ನಲ್ಲಿ ಆಟೋ ಸಾಲದ ರೂಪದಲ್ಲಿ ಪಡೆದಿದ್ದರು. ಆದರೆ ಸಕಾಲಕ್ಕೆ ಇಎಂಐ ಕಂತುಗಳನ್ನು ಕಟ್ಟಿರಲಿಲ್ಲ. ಇದರಿಂದ ಖಾಸಗಿ ಫೈನಾನ್ಸ್ ಏಜೆಂಟರುಗಳು ಆಟೋ ಸೀಜ್‌ಗೆಂದು ದಿನಾಂಕ 30-07-2024ರಂದು ಚಿಕ್ಕಅರೂರು ಗ್ರಾಮಕ್ಕೆ ಆಗಮಿಸಿದ್ದರು.

ಚಿಕ್ಕಅರೂರಿನಲ್ಲಿ ನಡೆದಿದ್ದೇನು?

ಖಾಸಗಿ ಫೈನಾನ್ಸ್ ಏಜೆಂಟರು ಆಟೋ ಸೀಜ್‌ಗೆ ಮುಂದಾಗಿದ್ದರು. ಆಗ ಆಟೋ ಚಾಲಕ ತನ್ನ ಸ್ನೇಹಿತರಾದ ಮೋಹನ್‌ಬಾಬು ಹಾಗೂ ವಿಜಯ ಅಂಡ್ ಗ್ಯಾಂಗ್‌ನ್ನು ಸ್ಥಳಕ್ಕೆ ಕರೆಸಿದ್ದ. ಮೋಹನ್‌ಬಾಬು ಹಾಗೂ ತಂಡ ಏಕಾಏಕಿ ಫೈನಾನ್ಸ್ ಏಜೆಂಟರುಗಳ ಜೊತೆ ಜಗಳ ಮಾಡಿ ಹಲ್ಲೆಗೆ ಮುಂದಾಗಿದ್ದರು. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಪೆರೇಸಂದ್ರ ಪೊಲೀಸ್‌ಠಾಣೆಯ ಕ್ರೈಂ ಪೊಲೀಸ್ ಸಿಬ್ಬಂದಿ ಮಂಜುನಾಯಕ್ ಜಗಳ ಬಿಡಿಸಲು ಮುಂದಾಗಿದ್ದಾರೆ.

ಪೊಲೀಸ್ ಸಿಬ್ಬಂದಿ ಮಂಜು ನಾಯಕ್ ಮೇಲೆ ಹಲ್ಲೆ

ಪೆರೇಸಂದ್ರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಮಂಜುನಾಯಕ್‌ರನ್ನು ನೋಡಿದ ಮೋಹನ್‌ಬಾಬು ಹಾಗೂ ತಂಡ ಮಂಜುನಾಯಕ್‌ರನ್ನು ಹೀಯಾಳಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಕೆನ್ನೆಗೆ ಬಾರಿಸಿದ್ದಾರೆ. ನೀವು ಫೈನಾನ್ಸ್​ನವರ ಬೆಂಬಲಕ್ಕೆ ಬಂದಿದ್ದೀರೆಂದು ಹೊಡೆದಿದ್ದಾನೆ. ಅಷ್ಟೊತ್ತಿಗೆ ಪೆರೇಸಂದ್ರ ಪೊಲೀಸ್ ಠಾಣೆಯ ಮತ್ತೋರ್ವ ಸಿಬ್ಬಂದಿ ಮಂಜುನಾಥ್ ಸಹಾ ಆಗಮಿಸಿದ್ದಾರೆ.

ಇದನ್ನೂ ಓದಿ: ಸಿಸಿಬಿ ಇನ್ಸ್​​ಪೆಕ್ಟರ್​ ತಿಮ್ಮೇಗೌಡ ಆತ್ಮಹತ್ಯೆಗೆ ಕಾರಣವಾಯ್ತಾ ಆ ಒಂದು ಹೈಪ್ರೊಫೈಲ್ ಕೇಸ್?

ಮಂಜುನಾಥ್‌ಗೆ ಮೋಹನ್‌ಬಾಬು ತನಗೆ ರಾಜಕೀಯ ಪ್ರಭಾವವಿದೆ. ನಿಮ್ಮನ್ನು ವರ್ಗಾವಣೆ ಮಾಡಿಸುವುದಾಗಿ ಹೇಳಿ ಹೆದರಿಸಿದ್ದಾನೆ. ಅಷ್ಟೊತ್ತಿಗೆ ಪೆರೇಸಂದ್ರ ಪೊಲೀಸ್‌ಠಾಣೆಯ ಪಿಎಸ್‌ಐ ಜಗದೀಶ್‌ರೆಡ್ಡಿ ಆಗಮಿಸಿ ಮೋಹನ್‌ಬಾಬು, ವಿಜಿ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಪೊಲೀಸ್ ಜೀಪ್‌ನಲ್ಲಿ ಠಾಣೆಗೆ ಕರೆತಂದಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಖಾಜಿ ನ್ಯಾಯ 

ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದರೂ, ಪಿಎಸ್‌ಐ ಜಗದೀಶ್‌ರೆಡ್ಡಿ ಸೂಕ್ತ ಕಾನೂನುಕ್ರಮ ಕೈಗೊಳ್ಳುವುದರ ಬದಲು ರಾಜಕೀಯ ಪ್ರಭಾವಕ್ಕೆ ಒಳಗಾಗಿ ತಾವು ಒಬ್ಬ ಪೊಲೀಸ್ ಅಧಿಕಾರಿ ಎನ್ನುವುದನ್ನು ಮರೆತು ಆರೋಪಿತರಿಗೆ ರತ್ನಗಂಬಳಿ ಹಾಸಿ ಯಾವುದೇ ಕ್ರಮ ಕೈಗೊಳ್ಳದೇ ಬಿಟ್ಟು ಕಳುಹಿಸಿದ್ದಾರೆ.

ಇದನ್ನೂ ಓದಿ: ವಾಕಿಂಗ್​ಗೆ ಬಂದಿದ್ದ ಮಹಿಳೆಯನ್ನು ತಬ್ಬಿಕೊಂಡು ಚುಂಬಿಸಿ ಪರಾರಿಯಾಗಿದ್ದ ಕಾಮುಕ ಅರೆಸ್ಟ್

ಇನ್ನು ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಇರುವ ಮೊಬೈಲ್ ಅಂಗಡಿಯಲ್ಲಿ ಘಟನೆಯ ದೃಶ್ಯಾವಳಿಗಳು ಸೆರೆಯಾಗಿವೆ. ಸಾರ್ವಜನಿಕರು ಹಾಗೂ ಪೊಲೀಸರ ಮೊಬೈಲ್‌ನಲ್ಲಿ ಘಟನೆ ಸೆರೆಯಾಗಿದೆ ಆದರೆ ಸ್ವತಃ ಪೊಲೀಸರು ಸಾಕ್ಷಿಗಳನ್ನು ನಾಶಪಡಿಸಿದ್ದಾರೆ ಇದು ಸಾರ್ವಜನಿಕ ವಲಯದಲ್ಲಿ ತೀವ್ರಗ್ರಾಸೆಗೊಳಗಾಗಿದೆ. ಮತ್ತೊಂದೆಡೆ ಘಟನೆಗೆ ಸಂಬಂಧಿಸಿದ ವಿಡಿಯೊ ತುಣುಕುಗಳು ಟಿವಿ9 ಗೆ ಲಭ್ಯವಾಗಿವೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.