ಚಿಕ್ಕಬಳ್ಳಾಫುರ: ಉಪ ಚುನಾವಣೆಗಾಗಿ ಮತಬೇಟೆಗೆ ರಾಜಕೀಯ ಪಕ್ಷಗಳು ಮುಂದಾಗಿವೆ. ಅದರಂತೆ ಇಂದು ಹಾನಗಲ್ ನಗರದಿಂದ ಹೆಚ್ಚು ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ. ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಸೂಚನೆ ಹಿನ್ನಲೆ ಹಾನಗಲ್ನಲ್ಲಿ ಚಿಕ್ಕಬಳ್ಳಾಫುರದ 250 ಜನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಾಸ್ತವ್ಯ ಹೂಡಿದ್ದಾರೆ.
ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಅವರಿಗೆ ಹಾನಗಲ್ ನಗರ ಹಾಗೂ ವಾರ್ ರೂಮ್ ಜವಾಬ್ದಾರಿ ಕೊಟ್ಟಿರುವುದರಿಂದ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದ ಉಪ ಚುನಾವಣೆ ತಂತ್ರಗಳನ್ನು ಹಾನಗಲ್ ನಗರದಲ್ಲಿ ಅಳವಡಿಸುವಂತೆ ಸೂಚನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಿಂದ ಬಂದಿರುವ ಬಿಜೆಪಿ ಕಾರ್ಯಕರ್ತರನ್ನು ವಾರ್ಡ್ಗೆ ತಲಾ 10 ಜನ ನೇಮಕ ಮಾಡಿ ಚುನಾವಣಾ ತಂತ್ರ ರೂಪಿಸಲಾಗಿದೆ. 19 ವಾರ್ಡ್ಗಳು ಇರುವ ಹಾನಗಲ್ನಲ್ಲಿ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಬೆಂಬಲಿಗರು ಹಗಲು ರಾತ್ರಿ ಚುನಾವಣಾ ತಂತ್ರಗಳಲ್ಲಿ ತೊಡಗಿದ್ದಾರೆ. ಮನೆ ಮನೆಗೆ ಹೋಗಿ ಮತದಾರರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ವಿಶೇಷವಾಗಿ ಅನ್ಯ ಪಕ್ಷದ ಕಾರ್ಯಕರ್ತರಿಗೂ ತಮ್ಮತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ಮಳೆಯಾಗಿ ಜನ ಸಂಕಷ್ಟಕ್ಕೆ ಸಿಲುಕಿದರೂ ಕೂಡ ಚಿಕ್ಕಬಳ್ಳಾಪುರದ ಬಿಜೆಪಿ ಮುಖಂಡರು ಹಾನಗಲ್ನಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಮತಗಳನ್ನು ಸೆಳೆಯಲು ಸರ್ಕಸ್ ನಡೆಸುತ್ತಿದ್ದಾರೆ.
ಹಾವೇರಿ: ಎರಡು ದಿನಗಳ ಹಿಂದೆ ಉಪ ಚುಮಾವಣೆ ಪ್ರಚಾರದಲ್ಲಿ ಸಿಎಂ ಭಾಗಿ
ಚುನಾವಣಾ ಪ್ರಚಾರಕ್ಕೆಂದು ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಿಂದ ಹಾನಗಲ್ಗೆ ಅಕ್ಟೋಬರ್ 23 ರಂದು ಆಗಮಿಸಿದ್ದರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ವಿಪಕ್ಷ ನಾಯಕರು ಮಾತಿನಲ್ಲೇ ಮಂಟಪ ಕಟ್ಟಿಸುತ್ತಿದ್ದಾರೆ. ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಅಂತ ಹೇಳಿಕೆ ನೀಡಿದರು. ಇನ್ನು ಸಿಎಂ ಬೊಮ್ಮಾಯಿ, ಬಿಎಸ್ವೈ ಜಂಟಿ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜ್ಯದ ಮುಖ್ಯಮಂತ್ರಿ, ಕಾಂಗ್ರೆಸ್ನಲ್ಲಿ ಡಿಕೆಶಿ, ಸಿದ್ದರಾಮಯ್ಯರಿಂದ ಜಂಟಿ ಪ್ರಚಾರ ಮಾಡುತ್ತಿಲ್ವಾ? ಅಂತ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿ ಪಂಥಾಹ್ವಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರದು ಮಾತಿನ ಮಂಟಪ ಎಂದು ತಿರುಗೇಟು ನೀಡಿದ್ದಾರೆ. ವಿಧಾನಸೌಧದ ವೇದಿಕೆಯೇ ದೊಡ್ಡ ಅಖಾಡ. ವಿಧಾನಸೌಧದಲ್ಲಿಯೇ ಬಹಿರಂಗ ಚರ್ಚೆ ಮಾಡಲಿ. ನಾವು ಮಾಡಿದ್ದನ್ನು ನಿನ್ನೆಯೇ ದಾಖಲೆ ಸಮೇತ ಹೇಳಿದ್ದೇನೆ. ಕೆಲವು ಊರುಗಳ ಹೆಸರನ್ನು ಕೂಡ ಉಲ್ಲೇಖಿಸಿದ್ದೇನೆ. ವಿಪಕ್ಷದವರು ಅಲ್ಲಿಗೆ ಹೋಗಿ ನೋಡಿಕೊಂಡು ಬರಲಿ ಅಂತ ಹಾನಗಲ್ನಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬಿಎಸ್ವೈ ಆಗಮನದಿಂದ ನಮ್ಮ ಬಲ ಇಮ್ಮಡಿಯಾಗಿದೆ. ನಮ್ಮ ಗೆಲುವಿನ ಅಂತರ ಕೂಡ ಇಮ್ಮಡಿಯಾಗಿದೆ ಎಂದು ಟಿವಿ9ಗೆ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರದ ವೇಳೆ ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ನಾನು ಮಾತಾಡಲ್ಲ. ಹಾನಗಲ್ ಕ್ಷೇತ್ರದಲ್ಲಂತೂ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಸಿಎಂ ಆದಾಗ ರೈತರಿಗೆ ನಾಲ್ಕು ಸಾವಿರ ಕೊಡೋಕೆ ತೀರ್ಮಾನ ಮಾಡಿದರು. ತಾಲೂಕಿನ 38,433 ಜನ ರೈತರಿಗೆ ಕಿಸಾನ್ ಸಮ್ಮಾನ ಹಣ ಸಿಕ್ಕಿದೆ. ಈ ಕುಟುಂಬಗಳು ಯಾರಿಗೆ ವೋಟು ಹಾಕ್ತಾರೆ? ಯಡಿಯೂರಪ್ಪ, ಮೋದಿಯವರ ಪಕ್ಷದ ಬಿಜೆಪಿಗೆ ಮತ ಹಾಕ್ತಾರೆ. ನಮ್ಮ ವಿಶ್ವಾಸ ದಾಖಲೆಗಳಲ್ಲಿದೆ. ಕೊವಿಡ್ ಸಮಯದಲ್ಲಿ ಮಾಡಿದ ಸಹಾಯವನ್ನ ರಾಜಕೀಯ ಬಂಡವಾಳ ಮಾಡಿಕೊಳ್ತಿದ್ದಾರೆ. ಇದು ನ್ಯಾಯನಾ? ಯೋಗ್ಯನಾ? ಅಂತ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:
ಸಿಂದಗಿ ಉಪ ಚುನಾವಣೆ ಅಖಾಡಲ್ಲಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ
ವಿಪಕ್ಷ ನಾಯಕರು ಮಾತಿನಲ್ಲೇ ಮಂಟಪ ಕಟ್ಟಿಸುತ್ತಿದ್ದಾರೆ; ಹಾನಗಲ್ನಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ
Published On - 12:52 pm, Tue, 26 October 21