ಚಿಕ್ಕಬಳ್ಳಾಪುರದಲ್ಲಿ ಸಿಗರೇಟ್ ಕೇಳಿದ್ದವನಿಗೆ ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಇರಿತ!

| Updated By: sandhya thejappa

Updated on: Mar 31, 2022 | 10:50 AM

ಬೆಂಗಳೂರಿನ ಗೋವಿಂದರಾಜನಗರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣಿಗೆ ಶರಣಾಗುವ ಮೊದಲು ಕಿರಣ್ ಕುಮಾರ್ ವಿಡಿಯೋ ಮಾಡಿಟ್ಟಿದ್ದಾರೆ. ಕೆ.ಆರ್ ಪುರಂನ ತಿರುಮಲ ಲಾಜಿಸ್ಟಿಕ್ಸ್​ನಲ್ಲಿ ಕಿರಣ್ ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಚಿಕ್ಕಬಳ್ಳಾಪುರದಲ್ಲಿ ಸಿಗರೇಟ್ ಕೇಳಿದ್ದವನಿಗೆ ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಇರಿತ!
ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆನಂದ್ ರೆಡ್ಡಿಗೆ ಚಿಕಿತ್ಸೆ ನೀಡಲಾಗುತ್ತಿದೆ
Follow us on

ಚಿಕ್ಕಬಳ್ಳಾಪುರ: ಸಿಗರೇಟ್ (Cigarette) ಕೇಳಿದ್ದವನಿಗೆ ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಆನಂದ್ ರೆಡ್ಡಿ ಎನ್ನುವರ ಮೇಲೆ ವಿಷ್ಣು ರೆಡ್ಡಿ ಎಂಬಾತ ಕೃತ್ಯ ಎಸಗಿದ್ದಾನೆ. ಆನಂದ್ ರೆಡ್ಡಿ ಬೆಳ್ಳಂಬೆಳಗ್ಗೆ ಕುಡಿದು ಸಿಗರೇಟ್ ಕೇಳುತ್ತೀಯ ಅಂತ ಬುದ್ಧಿವಾದ ಹೇಳಿದ್ದರು. ಈ ವೇಳೆ ಕೋಪಗೊಂಡ ವಿಷ್ಣು ರೆಡ್ಡಿ ಚಾಕುವಿನಿಂದ ಇರಿದಿದ್ದಾನೆ. ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆನಂದ್ ರೆಡ್ಡಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಡಿಯೋ ಮಾಡಿಟ್ಟು ವ್ಯಕ್ತಿ ನೇಣಿಗೆ ಶರಣು:
ಬೆಂಗಳೂರು: ಬೆಂಗಳೂರಿನ ಗೋವಿಂದರಾಜನಗರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣಿಗೆ ಶರಣಾಗುವ ಮೊದಲು ಕಿರಣ್ ಕುಮಾರ್ ವಿಡಿಯೋ ಮಾಡಿಟ್ಟಿದ್ದಾರೆ. ಕೆ.ಆರ್ ಪುರಂನ ತಿರುಮಲ ಲಾಜಿಸ್ಟಿಕ್ಸ್​ನಲ್ಲಿ ಕಿರಣ್ ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಂಬಳ ಹಾಕದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳವ ಬಗ್ಗೆ ವಿಡಿಯೋದಲ್ಲಿ ತಿಳಿಸಿದ್ದಾರೆ. ಮಂಜಣ್ಣ, ಶಿವಣ್ಣ, ಟಿಎಲ್ಎಸ್ ಮಾಲೀಕ ಮನು ನನ್ನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಅರ್ಧ ಗಂಟೆಯಲ್ಲಿ ನನ್ನ ಅಕೌಂಟ್​ಗೆ 30 ಸಾವಿರ ಹಾಕಬೇಕು. ಇಲ್ಲವಾದಲ್ಲಿ ನನ್ನ ಹೆಣ ನೋಡಬೇಕಾಗುತ್ತದೆ ಎಂದು ಕಿರಣ್ ಕುಮಾರ್ ಫ್ಯಾನ್​ಗೆ ಹಗ್ಗ ಕಟ್ಟಿ ವಿಡಿಯೋ ಮಾಡಿ ತೋರಿಸಿದ್ದಾರೆ. ಇನ್ನು ಮೃತ ವ್ಯಕ್ತಿ ಮೂಲತಃ ಸಿ ಎಸ್ ಪುರದ ಚಿಮ್ಮನಹಳ್ಳಿ ನಿವಾಸಿ. ಈ ಪ್ರಕರಂ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಡ್ರಗ್ ದಂಧೆಯಲ್ಲಿ ಸಿಕ್ಕಿಬಿದ್ದು ಪರಾರಿಯಾಗಿದ್ದ ಆರೋಪಿ ಬಂಧನ:
ಡ್ರಗ್ ದಂಧೆಯಲ್ಲಿ ಸಿಕ್ಕಿಬಿದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾದ ಬಳಿಕ ಆರೋಪಿ ಎಸ್ಕೇಪ್ ಆಗಿದ್ದ. ನಾಲ್ಕು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಾಂದ್ ಪಾಷಾ ಬಂಧಿತ ಆರೋಪಿ. ಈತ ಹುಚ್ಚಪ್ಪ ಮೈದಾನದ ಬಳಿ ಡ್ರಗ್​ ಮಾರಾಟ ಮಾಡುತ್ತಿದ್ದ.  ಮಾಹಿತಿ ಪಡೆದು ದಾಳಿ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ

ಪರೀಕ್ಷಾ ಕೊಠಡಿಯಲ್ಲಿ ಬಿದ್ದು ಮೃತಪಟ್ಟ ಎಸ್ಎಸ್ಎಲ್​ಸಿ ವಿದ್ಯಾರ್ಥಿನಿ ಅನುಶ್ರೀ ಕುಟುಂಬಕ್ಕೆ ಶಿಕ್ಷಣ ಇಲಾಖೆಯಿಂದ ಒಂದು ಲಕ್ಷ ಪರಿಹಾರ

ಮಧ್ಯರಾತ್ರಿ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಉದ್ವಿಗ್ನ ವಾತಾವರಣ; ಕರ್ನಾಟಕದ ಹಲವು ಗಾಡಿಗಳು ಜಖಂ

Published On - 10:30 am, Thu, 31 March 22