ಒಂದಡೆಯಿಂದ ಇನ್ನೊಂದೆಗೆ ಪ್ರಯಾಣಿಕರನ್ನು ಸಾಗಿಸಲು ಒಂದು ಬಸ್ಸಿಗೆ ಒಂದು ನೋಂದಾವಣೆ ನಂಬರ್ಗೆ ಅನುಮತಿ ಪಡೆದುಕೊಂಡು, ಅದೇ ನಂಬರ್‍ನಿಂದ ಮತ್ತೊಂದು ಬಸ್ಸನ್ನು (Bus Mafia) ಓಡಿಸುತ್ತಿದ್ದಾರೆ. ಅಕ್ರಮ ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕಾದ ಆರ್ಟಿಒ ಅಧಿಕಾರಿಗಳು (RTO officials) ಕುರುಡರಾದ ಕಾರಣ, ಕೊನೆಗೆ ಪೊಲೀಸರು ಒಂದೇ ನಂಬರಿನ ಎರಡು ಬಸ್ಸುಗಳನ್ನು ಜಪ್ತಿ ಮಾಡಿ ಪ್ರಕರಣ (Allegation) ದಾಖಲಿಸಿರುವ ಘಟನೆ ನಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಎಪಿ-03 ಟಿಎ9932 ನೋಂದಾವಣೆ ನಂಬರ್ನಲ್ಲಿ ಜೋಡಿ ಬಸ್ಸುಗಳು ಇರುವುದನ್ನು ಒಮ್ಮೆ ನೋಡಿಕೊಂಡು ಬಿಡಿ.. ಏಕೆಂದರೆ ಇದೇ ನಂಬರ್‍ನ ಬೇರೆ ಬಸ್ಸುಗಳೂ ಇರಬಹುದು.. ಹೌದು ಒಂದೇ ನಂಬರ್, ಒಂದೇ ಬಸ್ಸಿಗೆ ಅನುಮತಿಯನ್ನು ಪಡೆದುಕೊಂಡು, ಇದೇ ನಂಬರ್ ಬಳಸಿಕೊಂಡು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ ರಸ್ತೆಯಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದು ಬೆಳಕಿಗೆ ಬಂದಿದೆ. ಇತ್ತೀಚಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಗ್ರಾಮದ ಬಳಿ ಖಾಸಗೀ ಬಸ್ಸೊಂದು ಉರುಳಿಬಿದ್ದು, ಇಬ್ಬರು ಮೃತಪಟ್ಟಿದ್ದ ಕಾರಣ ಬಾಗೇಪಲ್ಲಿ ಪೊಲೀಸರು ಖಾಸಗೀ ಬಸ್ಸುಗಳ ತಪಾಸಣೆ ನಡೆಸಿದಾಗ ಅಕ್ರಮ ಬಯಲಾಗಿದೆ.
Also Read: ಹೆಂಡತಿಯ ಅಗಲಿಕೆ ನೋವಿನಲ್ಲಿ ಆಕೆಯ ಸಮಾಧಿ ಪೂಜೆ ಮಾಡಿ, ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡ ಗಂಡ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಮುರುಗಮಲ್ಲ, ಚೇಳೂರು, ಪಾತಪಾಳ್ಯ, ಬಾಗೇಪಲ್ಲಿ, ಹಿಂದೂಪುರ ಮಾರ್ಗಗಳಲ್ಲಿ ಅಸಲಿಯ ಒಂದೇ ನಂಬರನ್ನು ಬಳಸಿಕೊಂಡು 2-3 ಬಸ್ಸುಗಳು ಓಡಾಡುತ್ತಿರುವುದು ಬಯಲಾಗಿದೆ. ಈ ಬಗ್ಗೆ ಸಾರ್ವಜನಿಕರು ಖಚಿತ ದೂರನ್ನು ನೀಡಿದರೂ, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ಆರ್‍ಟಿಓ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಕೊನೆಗೆ ಬಾಗೇಪಲ್ಲಿ ಪೊಲೀಸರೇ ಈಗ ಬಸ್ಸು ಮಾಲೀಕರು ಹಾಗೂ ಚಾಲಕರುಗಳ ವಿರುದ್ಧ ಬಾಗೇಪಲ್ಲಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 66, 192ಎ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
Also Read: ಚಿಕ್ಕಬಳ್ಳಾಪುರ ಅಂಚೆ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪರದಾಟ, ತಿಂಗಳುಗಳೇ ಕಳೆದರೂ ವಿತರಣೆಯಾಗದ ದಾಖಲೆಗಳು
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಖಾಸಗೀ ಬಸ್ಸು ಮಾಫಿಯಾ ತಲೆ ಎತ್ತಿದೆ. ರಸ್ತೆ, ಸಾರಿಗೆ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಖಾಸಗೀ ಬಸ್ಸುಗಳು ಸಂಚರಿಸುತ್ತಿವೆ. ಅವುಗಳಲ್ಲಿ ಅಸಲಿ ಯಾವುದು.. ನಕಲಿ ಯಾವುದೆಂದು ತಿಳಿಯದಾಗಿದೆ. ಇನ್ನು ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವ ಆರ್‍ಟಿಓ ಅಧಿಕಾರಿಗಳು ಬಸ್ ಮಾಫಿಯಾ ಜೊತೆ ಕೈಜೋಡಿಸಿ ಸರ್ಕಾರ ಹಾಗೂ ಸಾರ್ವಜನಿಕರಿಗೆ ವಂಚಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ