Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲೀಜು ವ್ಯಕ್ತಿಗಳ ಪರ ಸಿಎಂ ಯಡಿಯೂರಪ್ಪ ನಿಂತಿದ್ದಾರೆ – HDK

ಚಿಕ್ಕಬಳ್ಳಾಪುರ: ಗಲೀಜು ವ್ಯಕ್ತಿಗಳ ಪರ ಸಿಎಂ ಬಿಎಸ್​ವೈ ನಿಂತಿದ್ದಾರೆ ಎಂದು ಉಪಚುನಾವಣೆ ಸಮ್ಮುಖದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇಂಥ ಕೆಟ್ಟ ಹುಳುಗಳನ್ನು ಸೇರಿಸಿಕೊಂಡು ರಾಜ್ಯ ಅಭಿವೃದ್ಧಿ ಮಾಡ್ತಾರಂತೆ. ಹುಣಸೂರಿನಲ್ಲಿ ಒಬ್ಬ, ಗೋಕಾಕ್ ನಲ್ಲಿ ಒಬ್ಬ.. ಥೂ ಗಲೀಜುಗಳು ಅಂತಾ ಕುಮಾರಸ್ವಾಮಿ ಲೇವಡಿ ಮಾಡಿದರು. ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುತ್ತಾ? ಸಿದ್ದರಾಮಯ್ಯ, ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ರು. ಆದರೆ ಬಜೆಟ್ […]

ಗಲೀಜು ವ್ಯಕ್ತಿಗಳ ಪರ ಸಿಎಂ ಯಡಿಯೂರಪ್ಪ ನಿಂತಿದ್ದಾರೆ - HDK
Follow us
ಸಾಧು ಶ್ರೀನಾಥ್​
|

Updated on: Dec 02, 2019 | 3:55 PM

ಚಿಕ್ಕಬಳ್ಳಾಪುರ: ಗಲೀಜು ವ್ಯಕ್ತಿಗಳ ಪರ ಸಿಎಂ ಬಿಎಸ್​ವೈ ನಿಂತಿದ್ದಾರೆ ಎಂದು ಉಪಚುನಾವಣೆ ಸಮ್ಮುಖದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇಂಥ ಕೆಟ್ಟ ಹುಳುಗಳನ್ನು ಸೇರಿಸಿಕೊಂಡು ರಾಜ್ಯ ಅಭಿವೃದ್ಧಿ ಮಾಡ್ತಾರಂತೆ. ಹುಣಸೂರಿನಲ್ಲಿ ಒಬ್ಬ, ಗೋಕಾಕ್ ನಲ್ಲಿ ಒಬ್ಬ.. ಥೂ ಗಲೀಜುಗಳು ಅಂತಾ ಕುಮಾರಸ್ವಾಮಿ ಲೇವಡಿ ಮಾಡಿದರು.

ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುತ್ತಾ? ಸಿದ್ದರಾಮಯ್ಯ, ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ರು. ಆದರೆ ಬಜೆಟ್ ನಲ್ಲಿ ಹಣ ಇಟ್ಟಿರಲಿಲ್ಲ. ಇದಕ್ಕೆ ನಾನು ಹಣ ಕೊಟ್ಟಿದ್ದೆ. ಯಡಿಯೂರಪ್ಪ ಭರಪೂರ ಹಣ ಕೊಡ್ತಾರೆ ಅಂತಾ ಹೇಳ್ತಾರೆ, ತಗೊಂಡು ಬರ್ಲಿ ನೋಡೋಣ. ಮೆಡಿಕಲ್ ಕಾಲೇಜು ನಿರ್ಮಾಣದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುತ್ತಾ? ನೀಟ್ ನಲ್ಲಿ ಪಾಸ್ ಆದ್ರೆ ಮಾತ್ರ ಸೀಟು ಸಿಗುತ್ತೆ ಎಂದು ಹೇಳಿದರು.

ಸುಧಾಕರ್ ವಿರುದ್ಧ HDK ವಾಗ್ದಾಳಿ: ಸಭೆಯಲ್ಲಿ ಮಾತನಾಡುತ್ತ ಲಿಂಗಾಯತ ಸಮಾಜದವರು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಕೇಳಿದ್ದಾರೆ, ಈ ಮಾತನ್ನೇ ಇಂದು ಸಹ ಮುಂದುವರೆಸಿದ್ದಾರೆ. ಬಿಎಸ್ ವೈ ಈ ರಾಜ್ಯದ ಮುಖ್ಯಮಂತ್ರಿಯೋ ಅಥವಾ 15 ಜನ ಅನರ್ಹರಿಗೆ ಮುಖ್ಯಮಂತ್ರಿಯೋ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಅದೇ ಕಾರಣಕ್ಕೆ ಲಿಂಗಾಯತ ಸಮಾಜ ಒಗ್ಗಟ್ಟಾಗಿ ಅಂತಾ ಹೇಳ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ಇರೋದು ಸುಧಾಕರ್ ಗೆ ಇಷ್ಟವಿರಲಿಲ್ಲ, ಸುಧಾಕರ್ ಒಂದು ಕಡೆ ಹೇಳ್ತಾನೆ ನನ್ನ ಸಂಬಂಧಿ ಅಂತ ಮತ್ತೊಂದು ಕಡೆ ಹೇಳ್ತಾನೆ ನಾನು ಮುಖ್ಯಮಂತ್ರಿಯಾಗಿ ಇರಬಾರದು ಅಂತಾ. ಸುಧಾಕರ್ ಮೊದಲು ನನ್ನ ಹಿಡ್ಕೊಂಡಿದ್ದ, ಆಮೇಲೆ ಸಿದ್ದರಾಮಯ್ಯನ್ನ ಹಿಡಿದುಕೊಂಡ.. ಈಗ ಯಡಿಯೂರಪ್ಪನ್ನ ಹಿಡಿದುಕೊಂಡಿದ್ದಾನೆ. ಸುಧಾಕರ್ ನನಗೆ ಮಂತ್ರಿ ಸ್ಥಾನ ಕೊಟ್ಟುಬಿಡಿ, ನಾನು ಜಿಲ್ಲೆಯಲ್ಲಿ ಜೆಡಿಎಸ್ ಬೆಳೆಸುತ್ತೇನೆ ಅಂತಾ ನನ್ನ ಬಳಿ ಬಂದಿದ್ದ. ಜಾತಿ ಹೆಸರಲ್ಲಿ ನಾನು ರಾಜಕಾರಣ ಮಾಡಲ್ಲ, ಬೇರೆ ಸಮಾಜಗಳ ಬೆಂಬಲ ಇಲ್ಲದಿದ್ರೆ ರಾಜಕಾರಣ ಸುಲಭವಲ್ಲ ಎಂದಿದ್ದೆ ಎನ್ನುವ ಮೂಲಕ ಸುಧಾಕರ್ ವಿರುದ್ಧ HDK ಹರಿಹಾಯ್ದರು.

ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ
ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ
Video: ಕಚ್ಚಿದ್ದಕ್ಕೆ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿ
Video: ಕಚ್ಚಿದ್ದಕ್ಕೆ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿ
ಬೀದರ್ ಮತ್ತು ಕಲಬುರಗಿ ದರೋಡೆ ಪ್ರಕರಣಗಳ ನಡುವೆ ಲಿಂಕ್ ಇರೋ ಸಾಧ್ಯತೆ
ಬೀದರ್ ಮತ್ತು ಕಲಬುರಗಿ ದರೋಡೆ ಪ್ರಕರಣಗಳ ನಡುವೆ ಲಿಂಕ್ ಇರೋ ಸಾಧ್ಯತೆ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ