ಚಿಕ್ಕಬಳ್ಳಾಪುರ: ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ಮತ್ತೆ ದಿನಾಂಕ ನಿಗದಿ

ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಜೂನ್ 19 ರಂದು ನಡೆಯಬೇಕಿದ್ದ ಕರ್ನಾಟಕ ಸಚಿವ ಸಂಪುಟ ಸಭೆ ದಿಢೀರ್​ ರದ್ದಾಗಿ ವಿಧಾನಸೌಧದಲ್ಲಿ ನಡೆಯಿತು. ನಂದಿ ಬೆಟ್ಟದಲ್ಲಿ ರದ್ದಾಗಿದ್ದ ಸಚಿವ ಸಂಪುಟ ಸಭೆಗೆ ದಿನಾಂಕ ಮರು ನಿಗದಿ ಮಾಡಲಾಗಿದೆ. ಸಚಿವ ಸಂಪುಟ ಸಭೆ ಸಲುವಾಗಿ ನಂದಿ ಬೆಟ್ಟದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಚಿಕ್ಕಬಳ್ಳಾಪುರ: ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ಮತ್ತೆ ದಿನಾಂಕ ನಿಗದಿ
ಸಿಎಂ, ಡಿಸಿಎಂ ಮತ್ತು ಸಚಿವರು
Edited By:

Updated on: Jun 20, 2025 | 4:18 PM

ಚಿಕ್ಕಬಳ್ಳಾಪುರ, ಜೂನ್​ 20: ಗುರುವಾರ (ಜೂ.19) ರಂದು ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ನಂದಿ ಬೆಟ್ಟದಲ್ಲಿ (Nandi Hills) ನಡೆಯಬೇಕಾಗಿದ್ದ ಸಚಿವ ಸಂಪುಟ ಸಭೆ (Cabinet Meeting) ದಿಢೀರ್​ ರದ್ದಾಗಿದ್ದು, ಜುಲೈ 2 ರಂದು ನಡೆಸಲು ನಿರ್ಧರಿಸಲಾಗಿದೆ. ಜೂನ್​ 19 ರಂದು ಬೆಳಗ್ಗೆ 11 ಗಂಟೆಗೆ ನಂದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ರದ್ದು ಮಾಡಿ, ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿತ್ತು.

ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯ ಕೆಲವು ಇಲಾಖೆಗಳಿಂದ ಪ್ರಸ್ತಾವನೆಗಳು ತಲುಪಿರಲಿಲ್ಲ. ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸಗಳು ಆಗಬೇಕು ಎಂಬ ಉದ್ದೇಶದಿಂದ ಮತ್ತು ಕೆಲವು ಸಚಿವರು ಮತ್ತು ಶಾಸಕರು ವಿಶೇಷ ಮನವಿಗಳನ್ನು ಮಾಡಿದ್ದರು. ಹೀಗಾಗಿ, ಈ ವ್ಯಾಪ್ತಿಯ ವಿಷಯಗಳನ್ನು ಬಿಟ್ಟು ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ.

ನಂದಿ ಬೆಟ್ಟದಲ್ಲಿ ಬರಪೂರ ಸಿದ್ದತೆ

ಸಚಿವ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ನಂದಿ ಬೆಟ್ಟದಲ್ಲಿ ಬರಪೂರ ಸಿದ್ದತೆ ಮಾಡಿಕೊಳ್ಳಲಾಗಿದೆ. ನಂದಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಕಟ್ಟಡಗಳ ನವೀಕರಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸಚಿವ ಸಂಪುಟ ಸಭೆ ನಡೆಯುವ ಜಾಗದಲ್ಲಿ ಸಭಾ ವೇದಿಕೆ, ಪತ್ರಿಕಾಗೋಷ್ಠಿ ನಡೆಸಲು ವ್ಯವಸ್ಥೆಯನ್ನೂ ಮಾಡಲಾಗಿದೆ.

ಇದನ್ನೂ ಓದಿ
ಕರ್ನಾಟಕದ ಮಾವು ನಿಷೇಧ ಹಿಂಪಡೆಯಿರಿ: ಆಂಧ್ರ ಸಿಎಂಗೆ ಸಿದ್ದರಾಮಯ್ಯ ಪತ್ರ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
ಜಾತಿ ಗಣತಿ ಮರು ಸರ್ವೇಗೆ ಕಾರಣಗಳೇನು? ಕೈ ಹೈಕಮಾಂಡ್ ಅಚ್ಚರಿ ನಿರ್ಧಾರ..!

ಇದನ್ನೂ ಓದಿ: ಜಾತಿ ಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಒಪ್ಪಿಗೆ

ನಂದಿ ಬೆಟ್ಟದಲ್ಲಿ ನಡೆದಿತ್ತು ಸಾರ್ಕ್​ ಶೃಂಗಸಭೆ

1986ರಲ್ಲಿ ನಂದಿ ಗಿರಿಧಾಮದಲ್ಲಿ ಎರಡನೇ ಸಾರ್ಕ್​ ಶೃಂಗಸಭೆ ನಡೆದಿತ್ತು. ಇದೀಗ, ರಾಜ್ಯ ಸರ್ಕಾರ ನಂದಿ ಬೆಟ್ಟದಲ್ಲಿನ ಪ್ರಕೃತಿ ಸೊಬಗಿನತ್ತ ಚಿತ್ತಹರಿಸಿದ್ದು, ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ. ಮಹಾತ್ಮ ಗಾಂಧಿಜಿ, ಜವಾಹರಲಾಲ್ ನೆಹರು ಸೇರಿದಂತೆ ವಿಶ್ವದ ಖ್ಯಾತನಾಮರು ನಂದಿ ಬೆಟ್ಟದ ಪ್ರಕೃತಿ ಸೊಬಗಿಗೆ ಮನಸೋತಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ